ಮರೆಯದಿರು ಪದಾಂಬುಜ
ಮರೆಯದೋಳು ಪದವಾ ಪ
ಧಾರುಣಿಯನೆ ಅಳೆದೀರಡಿ
ಮಾಡಿದ ಘನಪದವಾ
ಮುಕಾರಿಯು ತಳ್ತ ವಾರಿಯ
ಪಡದನುಪಮ ಪದವಾ 1
ಕಾಲಿಡುತಲೆ ಕಲ್ಲನು ಬಾಲೆ
ಮಾಡಿದ ಪದವಾ
ಕಾಳುರಗನ ಪೆಡೆಯಲಿ
ಲೀಲೆಯಾಡಿದತುಳ ಪದವಾ 2
ವರಶರಣರ ನಾಲಿಗೆ ನಿರುತದಿ
ನುತಿಸುವ ಪದವಾ
ಉರೆ ದುರಿತವದುರಿಪ
ನರಸಿಂಹವಿಠ್ಠಲನ ಪದವಾ 3
*******
ಮರೆಯದೋಳು ಪದವಾ ಪ
ಧಾರುಣಿಯನೆ ಅಳೆದೀರಡಿ
ಮಾಡಿದ ಘನಪದವಾ
ಮುಕಾರಿಯು ತಳ್ತ ವಾರಿಯ
ಪಡದನುಪಮ ಪದವಾ 1
ಕಾಲಿಡುತಲೆ ಕಲ್ಲನು ಬಾಲೆ
ಮಾಡಿದ ಪದವಾ
ಕಾಳುರಗನ ಪೆಡೆಯಲಿ
ಲೀಲೆಯಾಡಿದತುಳ ಪದವಾ 2
ವರಶರಣರ ನಾಲಿಗೆ ನಿರುತದಿ
ನುತಿಸುವ ಪದವಾ
ಉರೆ ದುರಿತವದುರಿಪ
ನರಸಿಂಹವಿಠ್ಠಲನ ಪದವಾ 3
*******