Showing posts with label ರಾಘವೇಂದ್ರ ಗುರುರಾಯ ಬಾಗಿ ನಮಿಸುವೆ ಕೈಯ್ಯ shyamasundara RAGHAVENDRA GURURAYA BAAGI NAMISUVE KAIYA. Show all posts
Showing posts with label ರಾಘವೇಂದ್ರ ಗುರುರಾಯ ಬಾಗಿ ನಮಿಸುವೆ ಕೈಯ್ಯ shyamasundara RAGHAVENDRA GURURAYA BAAGI NAMISUVE KAIYA. Show all posts

Sunday, 5 December 2021

ರಾಘವೇಂದ್ರ ಗುರುರಾಯ ಬಾಗಿ ನಮಿಸುವೆ ಕೈಯ್ಯ ankita shyamasundara RAGHAVENDRA GURURAYA BAAGI NAMISUVE KAIYA



ರಾಘವೇಂದ್ರ ಗುರುರಾಯ ಬಾಗಿ ನಮಿಸುವೆ ಕೈಯ್ಯ  

ಬೇಗ ಪಿಡಿದು ಪಾಲಿಸಯ್ಯ | ಭಾಗವತ ಜನಪ್ರಿಯ ಪ


ಮಧ್ವಮತಪಾರಾವಾರ | ಶುದ್ಧಪೂರ್ಣ ಸುಧಾಕರ

ಅದ್ವೈತಾದ್ರಿ ಶತಧರ | ಉದ್ಧರಿಸೈ ಯೋಗೀಶ್ವರ 1


ಭಾಸುರ ಶ್ರೀಮಂತ್ರ್‍ಗಾರ | ವಾಸ ಸುಕಾರಷಾಂಬರ

ಭೂಷ ಭೂಸುರ ಪರಿವಾರ ಪೋಷ ಪ್ರಹ್ಲಾದವತಾರ 2


ತುಂಗಾಭದ್ರಾ ಸುತೀರದಿ |ಶೃಂಗಾರ ಸದ್ವøಂದಾವನದಿ

ಪಿಂಗಳ ಸನ್ನಿಭಾಂಗದಿ | ಕಂಗೊಳಿಸಿದ ದಯಾಂಬುಧಿ 3


ಮರುಥಾವೇಶ ಯಮಿವರಿಯಾ | ದುರಿತಾಹಿ ವೈನತೇಯ |

ಪರಮೋದಾರ ಪರಿಮಳಾರ್ಯ | ತರಳನೆಂದು ಕರುಣಿಸಯ್ಯ 4


ಶಾಮಸುಂದರ ಭಕ್ತಾಗ್ರಣಿ | ಭೂಮಿಯೊಳು ನಿನಗಾರಣೆ |

ಕಾಮಿತಾರ್ಥ ಚಿಂತಾಮಣಿ | ಸ್ವಾಮಿ ಶ್ರೀ ವ್ಯಾಸ ಸನೌನಿ 5

***