ಪುರಂದರದಾಸರು
ಇನ್ನೇನು ಗತಿ ಎನಗೆಲೊ ಹರಿಯೆ |ನಿನ್ನನು ನೆನೆಯದೆ ಮೋಸಹೋದೆನಲ್ಲ ಪ
ಅಂಕದೊಳಾಡುವ ಶಿಶುವಿನ ಮುದ್ದಿನ |ಬಿಂಕದ ನುಡಿಗಳ ಕೇಳುತಲಿ ||ಕಿಂಕಿಣಿಧ್ವನಿಯನು ಕಿವಿಗೊಟ್ಟು ಕೇಳುತ |ಮಂಕು ಹರಿಣನಂತೆ ಆದೆನಲ್ಲ 1
ಪರವನಿತೆಯರ ಲಾವಣ್ಯಕೆ ಲೋಚನ |ಚರಿಸುತಲವರ ಕೂಟಕೆ ಬೆರಸಿ ||ಉರಿವ ಕಿಚ್ಚು ತನಗೆ ಹಿತವೆಂದು ಅದರೊಳು |ಎರಗಿದ ಪತಂಗದಂತಾದೆನಲ್ಲ 2
ತೊಡೆಯೆಡೆ ಗುಹ್ಯಕಾಂಬೆನೊ ಕಾಣೆನೋ ಎಂದು |ಮಡದಿಯರಂಗಸಂಗವ ಮಾಡುತ ||ಒಡಲ ತೀಟಕೆ ಪೋಗಿ ಬಡಿಗಲ್ಲ ಕೆಡಹಿಕೊಂ-|ಡಡಗಿದ ಮೂಷಕನಂತಾದೆನಲ್ಲ 3
ಸಲೆ ನಿಜ ವೃತ್ತಿಯ ಬಿಟ್ಟು ಪರಾನ್ನವ |ನಲಿದುಂಡು ಹೊಟ್ಟೆಯ ಹೊರೆಯುತಲಿ ||ಬಲೆಯ ತುದಿಯ ಮಾಂಸಕೆ ಬಂದೆರಗುತ |ಸಿಲುಕಿದ ವಿೂನಿ ನಂತಾದೆನಲ್ಲ 4
ಲಂಪಟನಾಗಿ ನಾರಿಯರ ಮುಖಾಬ್ಜದ |ಸೊಂಪಿನ ಕಂಪನಾಘ್ರಾಣಿಸುತ ||ಸಂಪಿಗೆ ಹೂವಿನ ಮೇಲೆ ಮಲಗಿ ತನ್ನಸೊಂದಳಿದಳಿಯಂತೆ ನಾನಾದೆನಲ್ಲ 5
ಇಂತು ಪಂಚೇಂದ್ರಿಯ ತಮತಮ್ಮ ವಿಷಯಕೆಮುಂತಾಗಿ ತಮ್ಮ ತಾವಲೆಯುತಿರೆ ||ಸಂತತ ತವತಮ ವಿಷಯಕೆ ಎಳಸಲುಕಾಂತಾರದರಸನಂತೆ ಆದೆನಲ್ಲ 6
ಕಂದರ್ಪಲೀಲೆಯ ಗೆಲಿದುಳ್ಳ ಭಕ್ತಿಯ |ತಂದು ಪಂಚೇಂದ್ರಿಯಗಳಿಗೆನ್ನಯ ||ತಂದೆಪುರಂದರವಿಠಲನ ನೆನೆದರೆ |ಎಂದೆಂದಿಗೂ ಭವಬಂಧನ ಬಾರದಲ್ಲ 7
***

pallavi
innEnu gatiyenagelO hariye
anupallavi
ninnavanennade mOsa hOdeno ranga
caraNam 1
angadoLADuva shishugaLa muddina binkada savi nuDigaLa kELuta
kinkiNi dhvanige kivi koTTu kELuta mankAda hariNanantAdenallO ranga
caraNam 2
ele nijavrittitayanuLidu durannava naliduNDu hoTteya horeyutali
kaLeya tudiya mAmsake banderagutta silukida mIninantAdenallO ranga
caraNam 3
para vaniteyara lAvaNyake lOcana carisuttalavara kUTava bayasi
uriva kiccu tanage hitavendu adaroLu eragida patanganantAdenallo krSNa
caraNam 4
lampaTanAgi nArEra mukhAbjada sompina kampanAghrANisuta
sampigeyesaLina mEle kuLitirda sompadaLiyante AdanallO krSNa
caraNam 5
taDeyalArade guhyEndriya capalava maDadiya ranga sangava bayasi
oDala kiccige mEle baDigallu keDahi koNDadi bidda mUSakanantAdenallO krSNa
caraNam 6
noindenalla ninna mahimeya kELade mandanAdenu viSayava bayasi
tande shrI purandara viTTala nInE dayadindendigu bhava dUra mADelo hari
***