Showing posts with label ಲಾಲಿ ಪಾಡಿರೆ ಮುದ್ದು ಬಾಲ ಕಂದನಿಗೆ gopalakrishna vittala LAALI PAADIRE MUDDU BAALA KANDANIGE. Show all posts
Showing posts with label ಲಾಲಿ ಪಾಡಿರೆ ಮುದ್ದು ಬಾಲ ಕಂದನಿಗೆ gopalakrishna vittala LAALI PAADIRE MUDDU BAALA KANDANIGE. Show all posts

Thursday, 2 December 2021

ಲಾಲಿ ಪಾಡಿರೆ ಮುದ್ದು ಬಾಲ ಕಂದನಿಗೆ ankita gopalakrishna vittala LAALI PAADIRE MUDDU BAALA KANDANIGE

ಲಾಲಿ ಪಾಡಿರೆ ಮುದ್ದು ಬಾಲಕಂದನಿಗೆ

ಬಾಲಬ್ರಹ್ಮಚಾರಿಯಾದ ಕಪಿವರಗೆ ಪ.

ಅಂಜನೆಯ ಸುತನಾಗಿ ಅಂಬರಕೆ ಹಾರಿ

ಕಂಜಸಖನಿಗೆ ತುಡುಕಿ ವಜ್ರತನುವಾಗಿ

ಸಂಜೀವ ತಂದು ಕಪಿಪುಂಜಗಳ ಸಲಹಿ

ಮಂಜುಭಾಷಣ ರಾಮಪಾದ ದಾಸನಿಗೆ 1

ಪುಟ್ಟಿ ಕುಂತಿಯ ಉದರದಲಿ ಗಿರಿ ಒಡೆದು

ದುಷ್ಟ ಕೀಚಕ ಬಕಾದಿಗಳ ಸಂಹರಿಸಿ

ಕುಟ್ಟಿ ಕೌರವರ ಕುಲ ದ್ರೌಪದಿಯ ಕೂಡಿ

ಪಟ್ಟವಾಳಿದ ಕೃಷ್ಣ ಪಾದಸೇವಕಗೆ 2

ಶ್ರೀಪತಿಯ ಆಜ್ಞೆಯಲಿ ವಿಪ್ರಸುತನಾಗಿ

ಪಾಪಿ ದುರ್ಮತಗಳನು ತರಿದು ಮುರಿದೊಟ್ಟಿ

ಸ್ಥಾಪಿಸುತ ಸಚ್ಛಾಸ್ತ್ರ ಯತಿಯಾಗಿ ಚರಿಸಿ

ಗೋಪಾಲಕೃಷ್ಣವಿಠ್ಠಲನ ಮೆರೆಸಿದಗೆ 3

****