Showing posts with label ಗೆಲಿಸು ಭವವಗುರುಹನುಮಂತ prasannavenkata. Show all posts
Showing posts with label ಗೆಲಿಸು ಭವವಗುರುಹನುಮಂತ prasannavenkata. Show all posts

Monday, 11 November 2019

ಗೆಲಿಸು ಭವವಗುರುಹನುಮಂತ ankita prasannavenkata

by ಪ್ರಸನ್ನವೆಂಕಟದಾಸರು
ಗೆಲಿಸು ಭವವಗುರುಹನುಮಂತ ಖಳಜಲಧಿ ವಡವಾನಳ ಬಲವಂತ ಪ.

ದಾಶರಥಿüಯ ಪದವನೆ ನಂಬಿ ಇತರಾಶೆಯಿಲ್ಲದೆ ಭಕ್ತಿರಸತುಂಬಿತೋಷವೃತ್ತಿಗೆ ಕಡೆಮೊದಲಿಲ್ಲ ಕ್ಷುದ್ರದೇಶ ಕೋಶದೆಣಿಕೆ ನಿನಗಿಲ್ಲ 1

ಅಂಧಕಾತ್ಮಜ ತೃಣಸುರಧೇನು ಗೋವಿಂದಾಂಘ್ರಿಬಿಸಜಮಧುಪ ನೀನುಸಂಧಕಾಯನ ಸದೆದ್ಯೈ ದೇವ ದಯಾಸಿಂಧುವೈಷ್ಣವಜನ ಸಂಜೀವ2

ಶ್ರೀ ಸತ್ಯವತಿಜನ ನೇಮದಲಿಹರಿದ್ವೇಷಿಗಳನು ಗೆದ್ದೆ ಭೂಮಿಯಲಿ ಶ್ರೀಸುಖತೀರ್ಥಭೀಮ ಕಪಿವರದ ಸ್ವಾಮಿಪ್ರಸನ್ನವೆಂಕಟೇಶ ಭೃತ್ಯಗಣಮುದದ 3
*******