Showing posts with label ಸುಲಭ ಪೂಜೆಯ ಮಾಡಿ ಬಲವಿಲ್ಲದವರು purandara vittala SULABHA POOJEYA MAADI BALAVILLADAVARU. Show all posts
Showing posts with label ಸುಲಭ ಪೂಜೆಯ ಮಾಡಿ ಬಲವಿಲ್ಲದವರು purandara vittala SULABHA POOJEYA MAADI BALAVILLADAVARU. Show all posts

Tuesday 21 December 2021

ಸುಲಭ ಪೂಜೆಯ ಮಾಡಿ ಬಲವಿಲ್ಲದವರು purandara vittala SULABHA POOJEYA MAADI BALAVILLADAVARU







ಸುಲಭ ಪೂಜೆಯ ಮಾಡಿ ಬಲವಿಲ್ಲದವರು (ಪ)                                                          
 ನಳಿನನಾಭನ ಪಾದ ನಳಿನ ಸೇವಕರು  (ಅ .ಪ)                                                        

ಇರಳು ಹಚ್ಚುವ ದೀಪ ಹರಿಗೆ ನೀರಾಜನವು
ಮರೆಮಾಡುವ ವಸ್ತ್ರ ಪರಮ ಮಡಿಯು
ತಿರುಗಾಡಿ ದಣಿಯುವುದೆ ಹರಿಗೆ ಪ್ರದಕ್ಷಿಣೆಯೂ......( ೨)
ಹೊರಳಿ ಮಲಗುವುದೆಲ್ಲ ಹರಿಗೆ ವಂದನೆಯು (೧)


ನುಡಿವ ಮಾತುಗಳೆಲ್ಲ ಕಡಲಶಯನನ ಜಪವು
ಮಡದಿ ಮಕ್ಕಳು ಮತ್ತೆ ಒಡನೆ ಪರಿವಾರ
ನಡುಮನೆಯ ಅಂಗಳವು ಉಡುಪಿ ಭೂ ವೈಕುಂಟಗಳು
ಎಡ ಬಲದ ಮನೆಯವರು ಕಡು ಭಾಗವತರು (೨)

ಹೀಗೆ ಅನುದಿನ ತಿಳಿದು ಹಿಗ್ಗುವ ಜನರ..... ಭವ
ರೋಗ ಪರಿಹರವು ಮೂಜಗದಿ ಸುಕವು
ಹೋಗುತಿದೆ ಈ ಆಯು ಬೇಗದಿಂದಲಿ ನಮ್ಮ
ಯೋಗೇಶ ಪುರಂದರ ವಿಟ್ಟಲನ ನೆನೆನೆನೆದು (೩)
****


ರಾಗ:ಕಾಮ್ಬೋದಿ ತಾಳ:ಝಮ್ಪೆತಾಳ (raga, taala may differ in audio)

pallavi

sulabha pUjeya mADi balavilladavaru

anupallavi

naLina nAbhana pAda naLina sEvakaru

caraNam 1

iruLu haccuva dIpa harige nIrAjanavu mare mADuva vastra parama maDiyu
tirugADi daNiyuvude harige pradakSiNeyu horaLi malaguvudella harige vandaneyu

caraNam 2

nuDida mAtugaLella kaDalashayanana japavu maDadi makkaLu matte oDane parivAra
naDumaneya angaLavu uDupi vaikuNThagaLu eDabalada maneyavaru kaDu bhAgavataru

caraNam 3

hIge anudina tiLidu higguva janara bhavarOga pariharavu mUjagadi sukhavu
hOgutide I Ayu bEgadindali namma yOgIsha purandara viTTalana nene nenedu
***


ಪುರಂದರದಾಸರು

ಸುಲಭಪೂಜೆಯಕೇಳಿ ಬಲವಿಲ್ಲದವರುಕಾಲಕಾಲದಕರ್ಮಕಮಲಾಕ್ಷಗರ್ಪಿಸಿರಿಪ.

ಇರುಳು ಹಚ್ಚುವ ದೀಪ ಹರಿಗೆ ನೀಲಾಂಜನವು |ಮರುವುಡುವ ಧೋತರವು ಪರಮವಸ್ತ್ರ ||ತಿರುಗಾಡಿ ದಣಿಯುವುದು ಹರಿಗೆ ಪ್ರದಕ್ಷಿಣೆಯುಮರಳಿ ಹೊಡಮರುಳುವುದು ನೂರೆಂಟು ದಂಡ 1

ನುಡಿವ ಮಾತುಗಳೆಲ್ಲ ಪಾಂಡುರಂಗನ ಜಪವುಮಡದಿ ಮಕ್ಕಳು ಎಲ್ಲ ಒಡನೆ ಪರಿವಾರ ||ನಡುಮನೆಯ ಅಂಗಳವುಉಡುಪಿ ಭೂವೈಕುಂಠಎಡ ಬಲದ ಮನೆಯವರು ಕಡುಭಾಗವತರು 2

ಹೀಗೆ ಈ ಪರಿಯಲಿನಿತ್ಯ ನೀವರಿತಿರಲುಜಗದೊಡೆಯ ಶ್ರೀ ಕೃಷ್ಣ ದಯವ ತೋರುವನು ||ಬೇಗದಿ ತಿಳಿದುಕೇಳಿ ಹೋಗುತಿದೆ ಆಯುಷ್ಯಯೋಗಿಪುರಂದರವಿಠಲ ಸಾರಿ ಪೇಳಿದನು3
****