ಪುರಂದರದಾಸರು
ರಾಗ ಮಧ್ಯಮಾವತಿ
ಮನವೆ ಚಂಚಲಮತಿಯ ಬಿಡು ||ಪ||
ರಾಗ ಮಧ್ಯಮಾವತಿ
ಮನವೆ ಚಂಚಲಮತಿಯ ಬಿಡು ||ಪ||
ನಮ್ಮ , ವನಜನಾಭನ ಭಜನೆಯ ಮಾಡು ||ಅ||
ಬಡಮನುಜಗೆ ಬಾಯಬಿಡುತ ದೈನ್ಯದಲವನ
ಅಡಿಗಲಿಗೆರಗಲು ಪಡೆವುದೇನೊ
ಕಡಲಶಯನ ಜಗದೊಡೆಯನ ನೆನೆಯೆ ಕೈ-
ಪಿಡಿದು ಸಲಹುವನು ಬಿಡದಲೆ ಅನುಗಾಲ ||
ಬಲ್ಲಿದ ಭಜಕರ ಬಲ್ಲವ, ಬಲುಸಿರಿ-
ಯುಳ್ಳನು, ಕರುಣಿಯು ನಲ್ಲನಿರೆ
ಕ್ಷುಲ್ಲಕರನು ಕಾಯೆ ಸಲ್ಲದೆಂದೆಂದಿಗು
ನಿಲ್ಲು ಹರಿಯ ಪಾದದಲ್ಲಿ ತಲ್ಲಣಿಸದೆ ||
ಮುಗಿಲು ಮೇಲೆಗಡೆ ಅಗಣಿತ ಆಪ-
ತ್ತುಗಳು ಬಂದಡರಲು ನಗುತಲಿರು
ಜಗದುದರನ ಮಹಿಮೆಗೆ ನಮೋ ನಮೋ ಎಂದು
ಪೊಗಳುತ್ತ ಬಾಳಘಗಳನು ಗಣಿಸದಲೆ ||
ಆವಾವ ಕಾಲಕ್ಕೆ ದೇವನಿಚ್ಛೆಯಿಂದ
ಆವಾವುದು ಬರೆ ಸುಖವೆನ್ನು
ಶ್ರೀವರ ಅನಾದಿ ಜೀವರ ಕ್ಲ್ ಪ್ತದಂತೆ
ಈವನು ನಿಜಸ್ವಭಾವ ಬಿಡದೆ ನಿತ್ಯ ||
ಕೇಶವಾಚ್ಯುತ ಶ್ರೀನಿವಾಸ ಮುರಾರೇ
ದೋಷರಹಿತ ಕ್ಲೇಷನಾಶಕನೆಂದು
ಮೋಸಗೊಳಿಪ ಭವಪಾಶವ ಖಂಡಿಪ
ಶ್ರೀಶ ಪುರಂದರವಿಠಲನು ಜಗಕಿರೆ ||
***
pallavi
manave cancalamatiya biDu
anupallavi
namma vanajanAbha bhajaneya mADu
caraNam 1
baDamanujage bAyabiDuta dainyadalavana aDigaLigeragalu baDevudEnO
kaDala shayana jagadoDeyana neneya kai piDidu salahuvanu biDadale anukAla
caraNam 2
ballida bhajakara ballava balu siriyuLLavanu karuNiyunallanire
kSullakaranu kAye salladendendigu nillu hariya pAdadalli tallaNisade
caraNam 3
mugilu mElugaDe agaNita ApattugaLu bandaDaralu nagutaliru
jagadudarana mahimege namO namO endu pogaLutta bALaghagaLanu gaNisadale
caraNam 4
AvAva kAlakke dEvanicceyinda AvAvudu bare sukhave ennu
shrIvara anAdi jIvara klptadante Ivanu nija svabhAva biDade nitya
caraNam 5
kEshavAcyuta shrInivAsa murAre dOSa rahita klEsha nAshananendu
mOsagOLipa bhava pAshava khaNDipa shrIsha purandara viTTalanu jagakire
***
ಮನವೆ ಚಂಚಲ ಮತಿಯ ಬಿಡು - ನಮ್ಮ |ವನಜನಾಭನ ಪಾದಭಜನೆಯಮಾಡು ಪ.
ಬಡಮನುಜಗೆ ಬಾಯಬಿಡುವ ದೈನ್ಯದಲವನ |ಅಡಿಗಳಿಗೆರಗಲು ಕೊಡುವನೇನೊ ||ಕಡಲಶಯನ ಜಗದೊಡೆಯನ ನೆನೆಯಕ್ಕೆ - |ಪಿಡಿದು ತಾ ಸಲಹುವ ಬಿಡದಲೆಅನುಗಾಲ1
ಬಲ್ಲಿದ ಭಕುತರ ಬಲ್ಲವ ಬಹುಸಿರಿ |ಯುಳ್ಳ ಕರುಣಿ ಲಕ್ಷ್ಮೀನಲ್ಲನಿರೆ ||ಕ್ಷುಲ್ಲಕರನು ಕಾಯಸಲ್ಲದೆಂದೆಂದಿಗುನಿಲ್ಲು ಹರಿಯ ಪಾದದಲ್ಲಿ ತಲ್ಲಣಿಸದೆ 2
ಮುಗಿಲು ಮೇಲದೆಗಡೆ ಅಗಣಿತವಾದಾಪ - |ತ್ತುಗಳು ಬಂದಡರಲು ನಗುತಲಿರು ||ಜಗದಧೀಶನ ಮಹಿಮೆಗೆ ನಮೋ ನಮೋ ಎಂದು |ಪೊಗಳುತ ಬಾಳು ನೀ ಅಘಗಳ ಗಣಿಸದೆ 3
ಆವಾವ ಕಾಲಕೆ ದೇವನಿಚ್ಛೆಯಿಂದ |ಆವಾವುದು ಬರೆ ನಿಜಸುಖವೆನ್ನು ||ಶ್ರೀವರ ಅನಾದಿಜೀವರ ಕ್ಲಪ್ತದಂತೆ |ಈವನು ನಿಜಸ್ವಭಾವ ಬಿಡದೆನಿತ್ಯ4
ಕೇಶವಾಚ್ಯುತ ಶ್ರೀನಿವಾಸ ಮುರಾರೇ |ದೋಷರಹಿತ ದೀನ ಪೋಷಕನೆನ್ನು ||ಮೋಸಗೊಳಿಪ ಭವಪಾಶವ ಖಂಡಿಪ |ಶ್ರೀಶ ಪುರಂದರವಿಠಲನು ಜಗಕಿರೆ 5
*********