Showing posts with label ಕೇಳಿದ್ಯಾ ಕೌತುಕವನು ಕೇಳಿದ್ಯಾ ನಾ ಕೇಳಿದೆ ನಿನಗಿಂತ rangavittala KELIDYA KAUTUKAVANU KELIDYA NAA KELIDE NINAGINTA. Show all posts
Showing posts with label ಕೇಳಿದ್ಯಾ ಕೌತುಕವನು ಕೇಳಿದ್ಯಾ ನಾ ಕೇಳಿದೆ ನಿನಗಿಂತ rangavittala KELIDYA KAUTUKAVANU KELIDYA NAA KELIDE NINAGINTA. Show all posts

Saturday, 4 December 2021

ಕೇಳಿದ್ಯಾ ಕೌತುಕವನು ಕೇಳಿದ್ಯಾ ನಾ ಕೇಳಿದೆ ನಿನಗಿಂತ ankita rangavittala KELIDYA KAUTUKAVANU KELIDYA NAA KELIDE NINAGINTA



.ಕೇಳಿದ್ಯಾ ಕೌತುಕವ ಕೇಳಿದ್ಯಾ ಕೇಳಿದೆ ನಾ ಕೌತುಕ ನಿನಗಿಂತ ಮುನ್ನ || ಪ ||
ಆಹಾ ಚಾಳಿಕಾರ ಕೃಷ್ಣನು ಪೇಳದೆ ಮಧುರೆಗೆ
ಕೋಳಿ ಕೂಗದ ಮುನ್ನ ನಾಳೆ ಪಯಣವಂತೆ || ಅಪ ||

ಕರೆಯ ಬಂದಿಹನಂತೆ ಕ್ರೂರ ತಮ್ಮ ಹಿರಿಯಯ್ಯನಂತೆ ಅಕ್ರೂರ ಪುರ
ಹೊರವಳಯದಿ ಬಿಟ್ಟು ತೇರ ||ಆಹಾ|| ಹಿರಿಯನೆಂದು ಕಾಲಿಗೆರಗಲು
ರಾಮಕೃಷ್ಣರ ಠಕ್ಕಿಸಿಕೊಂಡು ಮರುಳು ಮಾಡಿದ ಬುದ್ಧಿ || ೧ ||

ಸೋದರ ಮಾವನ ಮನೆಗೆ ಬೆಳಗಾದರೆ ನಾಳಿನ ಉದಯ ಪರಮಾದರವಂತೆ
ತ್ವರೆಯ ಅಲ್ಲಿ ತೋರಿದ ಮನಕೆ ನಾರಿಯ ||ಆಹಾ|| ಸಾಧಿ ಮಲ್ಲ ಮೊದಲಾದ
ಬಿಲ್ಲು ಹಬ್ಬ ಸಾಧಿಸಿಕೊಂಡು ಬರುವನೆಂಬ ಸುದ್ದಿ || ೨ ||

ಹುಟ್ಟಿದ ಸ್ಥಳ ಮಧುರೆ ಕಂಸನಟ್ಟುಳಿಗಾರದೆ ಬೆದರಿ ತಂದಿಟ್ಟ ತನ್ನ ತಂದೆ ಚದುರೆ
ತೋರಿಕೊಟ್ಟಳು ಭಯವ ಬೆದರಿ ||ಆಹಾ|| ಎಷ್ಟು ಹೇಳಲಿ
ರಂಗವಿಠಲನು ಮಾವನ ಭೆಟ್ಟಿಗಾಗಿ ಒಡಂಬಟ್ಟು ಪೋಗುವ ಸುದ್ದಿ || ೩ ||
***

kELidyA kautukava kELidyA kELide nA kautuka ninagiMta munna || pa ||
AhA cALikAra kRuShNanu pELade madhurege
kOLi kUgada munna nALe payaNavaMte || apa ||

kareya baMdihanaMte krUra tamma hiriyayyanaMte akrUra pura
horavaLayadi biTTu tEra ||AhA|| hiriyaneMdu kAligeragalu
rAmakRuShNara ThakkisikoMDu maruLu mADida buddhi || 1 ||

sOdara mAvana manege beLagAdare nALina udaya paramAdaravaMte
tvareya alli tOrida manake nAriya ||AhA|| sAdhi malla modalAda
billu habba sAdhisikoMDu baruvaneMba suddi || 2 ||

huTTida sthaLa madhure kaMsanaTTuLigArade bedari taMdiTTa tanna taMde cadure
tOrikoTTaLu Bayava bedari ||AhA|| eShTu hELali
raMgaviThalanu mAvana BeTTigAgi oDaMbaTTu pOguva suddi || 3 ||***

ಕೇಳಿದ್ಯಾ ಕೌತುಕವನು ಕೇಳಿದ್ಯಾ ||ಪ||

ಕೇಳಿದ್ಯಾ ಕೌತುಕವನು ನಾ
ಕೇಳಿದೆ ನಿನಗಿಂತ ಮುನ್ನು ಆಹಾ
ಚಾಳಿಕಾರ ಕೃಷ್ಣ ಪೇಳದೆ ಮಧುರೆಗೆ
ಕೋಳಿ ಕೂಗದ ಮುನ್ನ ನಾಳೆ ಪಯಣವಂತೆ ||ಅ.ಪ||

ಕರೆಯ ಬಂದಿಹನಂತೆ ಕ್ರೂರ ತಮ್ಮ
ಕಿರಿಯಯ್ಯನಂತೆ ಅಕ್ರೂರ ಪುರ
ಹೊರವಳಯದಲಿ ಬಿಟ್ಟು ತೇರ ಆಹಾ
ಹಿರಿಯನೆಂದು ಕಾಲಿಗೆರಗಲು ರಾಮಕೃ-
ಷ್ಣರ ರಕ್ಕಿಸಿಕೊಂಡು
ಮರುಳುಮಾಡಿದ ಬುದ್ಧಿ ||೧||

ಸೋದರಮಾವನ ಮನೆಯ ಬೆಳ-
ಗಾದರೆ ನಾಳಿನ ಉದಯ ಪರ-
ಮಾದರವಂತೆ ತ್ವರೆಯ ಅಲ್ಲಿ ತೋ-
ರಿದ ಮನಕೆ ನಾರಿಯ ಆಹಾ
ಸಾಧಿಮಲ್ಲ ಮೊದಲಾದ ಬಿಲ್ಲುಹಬ್ಬ
ಸಾಧಿಸಿಕೊಂಡು ಬರುವನೆಂಬ ಸುದ್ದಿ ||೨||

ಹುಟ್ಟಿದ ಸ್ಥಳವಂತೆ ಮಧುರೆ ಕಂಸ-
ನಟ್ಟುಳಿಗಾರದೆ ಬೆದರಿ ತಂ-
ದಿಟ್ಟ ತನ್ನ ತಂದೆ ಚದುರೆ ತೋರಿ
ಕೊಟ್ಟಳು ಭಯವನ್ನು ಬೆದರಿ ಆಹಾ
ಎಷ್ಟು ಹೇಳಲಿ ರಂಗವಿಠಲನು ಮಾವನ
ಭೆಟ್ಟಿಗಾಗಿ ಒಡಂಬಟ್ಟು ಪೋಗುವ ಸುದ್ದಿ ||೩||
*******

ಶಂಕರಾಭರಣ ರಾಗ ಆದಿತಾಳ (raga tala may differ in audio)