Showing posts with label ಜನುಮ ಜನುಮದಲಿ ಎನಗಿರಲಿ ಹನುಮ ಮಧ್ವ prasanna JANUMA JANUMDALI ENAGIRALI HANUMA BHIMA. Show all posts
Showing posts with label ಜನುಮ ಜನುಮದಲಿ ಎನಗಿರಲಿ ಹನುಮ ಮಧ್ವ prasanna JANUMA JANUMDALI ENAGIRALI HANUMA BHIMA. Show all posts

Friday 17 December 2021

ಜನುಮ ಜನುಮದಲಿ ಎನಗಿರಲಿ ಹನುಮ ಮಧ್ವ ankita prasanna JANUMA JANUMDALI ENAGIRALI HANUMA BHIMA




ಜನುಮ ಜನುಮದಲಿ ಎನಗಿರಲಿ| 
ಹನುಮ ಭೀಮ ಮಧ್ವ ಮುನಿಗಳ ಸೇವೆಯು |ಪ|

ಮಾತ್ಯರೀಷನ ಪ್ರೀತನಾಗಿ ಬಲು | 
ತಾತನು ಸುಲಭದಿ ವಲಯವನು |
ಕೋತಿಯ ರೂಪದಿ ಭೂತಳದೀ ಬಲು | 
ಖ್ಯಾತಿಯ ಪಡೆದ ರಾಮದೂತನ ಸೇವೆಯು |೧|

ಹರನ ಭಕುತ ಜರಾಸಂಧನ ಕಾಯವ | 
ತರಿದು ಮುರಿದು ಬಲು ಸುಲಭದಲಿ |
ಹರಿಗಪರೋಕ್ಷದಿ ಅರ್ಪಣೆ ಮಾಡಿದ | 
ಕುರುಕುಲ ಪತಿ ಭೀಮನ ಸೇವೆಯು |೨|

ಶುದ್ಧ ದ್ವಿಜ ಕುಲದಿ ಉದ್ಧರಿಸಿ | 
ಅನಿರುದ್ಧಗೆ ಅನುಮತವಾಗಿರುವ |
ಸಿದ್ಧಾಂತದ ಪದ್ಧತಿಯನು ತೋರಿದ | 
ಮಧ್ವಮತದ ತತ್ವದಲ್ಲಿ ಪ್ರಸನ್ನತೆ |೩|
***

ಜನುಮ ಜನುಮದಲಿ ಎನಗಿರಲಿ |
ಹನುಮ ಭೀಮ ಮಧ್ವ ಮುನಿಗಳ ಸೇವೆಯು || PA ||

ಮಾತಾರೀಶ್ವನೇ ಪ್ರೀತನಾಗಿ ಅಜ |
ತಾತನು ಸುಲಭದಿ ಒಲಿಯುವನು |
ಕೋತಿಯ ರೂಪದಿ ಭೂತಳದಲಿ ಬಲು ||
ಖ್ಯಾತಿ ಪಡೆದ ರಾಮ ದೂತನ ಸೇವೆಯು || 1 ||

ಹರನ ಭಕುತಜರಾಸಂಧನ ಕಾಯವ |
ತರಿದು ಮುರಿದು ಬಲು ಸುಲಭದಲಿ |
ಹರಿಗಪರೋಕ್ಷದಿ ಅರ್ಪಣೆ ಮಾಡಿದ |
ಕುರುಕುಲ ಪತಿ ಬಲ ಭೀಮನ ಸೇವೆಯು || 2 ||

ಶುದ್ಧ ದ್ವಿಜಕುಲದಲಿ ಉದ್ಭವಿಸುತ |
ಅನಿರುದ್ಧನಿ ಅಭಿಮತನಾಗಿರುವಾ |
ಸಿದ್ಧಾಂತದ ಪದ್ಧತಿಯನ್ನು ತೋರಿದ |
ಮಧ್ವಮತದ ತತ್ತ್ವದಲ್ಲಿ ಪ್ರಸನ್ನತೆ || 3 ||
***

Januma janumadali enagirali | hanuma bhīma madhva munigaḷa sēveyu || PA ||

mātārīśvanē prītanāgi aja | tātanu sulabhadi oliyuvanu | kōtiya rūpadi bhūtaḷadali balu || khyāti paḍeda rāma dūtana sēveyu || 1 ||

harana bhakutajarāsandhana kāyava | taridu muridu balu sulabhadali | harigaparōkṣadi arpaṇe māḍida | kurukula pati bala bhīmana sēveyu || 2 ||

śud’dha dvijakuladali udbhavisuta | anirud’dhani abhimatanāgiruvā | sid’dhāntada pad’dhatiyannu tōrida | madhvamatada tattvadalli prasannate || 3 ||

Plain English

Januma janumadali enagirali | hanuma bhima madhva munigala seveyu || PA ||

matarisvane pritanagi aja | tatanu sulabhadi oliyuvanu | kotiya rupadi bhutaladali balu || khyati padeda rama dutana seveyu || 1 ||

harana bhakutajarasandhana kayava | taridu muridu balu sulabhadali | harigaparoksadi arpane madida | kurukula pati bala bhimana seveyu || 2 ||

sud’dha dvijakuladali udbhavisuta | anirud’dhani abhimatanagiruva | sid’dhantada pad’dhatiyannu torida | madhvamatada tattvadalli prasannate || 3 ||
***