Madhwas in Dallas, Texas
ಭಾಗ್ಯವ ಕೊಡು ತಾಯೆ ankita vijaya vittala BHAGYAVA KODU TAAYE
ಭಾಗ್ಯವ ಕೊಡು ತಾಯೆ,ನೀ,ಸೌಭಾಗ್ಯವಕೊಡು ತಾಯೆ
ಭಾರ್ಗವಿ ನಿನ್ನಯ ಪದಯುಗಕ್ಕೆರಗುವೆ ಭಾಗ್ಯದ ಲಕ್ಷ್ಮಿ ಸೌಭಾಗ್ಯ ದ ನಿಧಿಯೇ..
ಸುರುಚಿರ ಸುಮಗಾತ್ರೆ ,ದೇವೀ, ಹಿಮಕರ ನಿಭವಕ್ತ್ರೆ
ಸುರನರ ಕಿನ್ನರಸುರಮುನಿ ಪೂಜಿತೆ
ಕಾಮಿತ ವೀಯುವ ಕರಣಾಕರಿಯೇ...
ಜನನಿಯೆ ನಿರತವು ನೀ ಪ್ರೇಮವ ಎನ್ನೊಳು ನೀ
ಕನಕದ ವೃಷ್ಟಿಯ ಕರೆಯುತಲನುದಿನ
ಮನ್ಮನದಿಷ್ಟವ ಸಿದ್ಧಿಸುವಂದದ...
ಅಹಿಪತಿ ಶಯನನಿಗೆ, ಮೋಹದ ಮಹಿಷಿಯು ನೀನಾಗ
ಮಹಿಮಾಕರೆ ನೀ ಮಹಿಯೊಳಗನಿಶವು
ಇಹಪರ ಸುಖವನನುಭವಿಸುವ ತೆರದ..
ಅಜಭವ ಸುರವಿನುತೆ,ದೇವಿ, ಸುಜನೋವಳಿ ಪ್ರೀತೆ
ಗಜವಾಹಿನಿ ವರ ಮದಗಜಗಮನೆಯೆ
ವಿಜಯವಿಠಲ ಪ್ರಿಯೆಶ್ರೀ ಗಜಲಕ್ಷ್ಮಿಯೆ
*******