Showing posts with label ಜಯ ದೇವ ಜಯ ದೇವ ಜಯ ಜಗನ್ನಾಥ ದಯಗುಣದಲಿ mahipati. Show all posts
Showing posts with label ಜಯ ದೇವ ಜಯ ದೇವ ಜಯ ಜಗನ್ನಾಥ ದಯಗುಣದಲಿ mahipati. Show all posts

Wednesday, 1 September 2021

ಜಯ ದೇವ ಜಯ ದೇವ ಜಯ ಜಗನ್ನಾಥ ದಯಗುಣದಲಿ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಜಯ ದೇವ ಜಯ ದೇವ ಜಯ ಜಗನ್ನಾಥ ದಯಗುಣದಲಿ ಪರಿಪೂರ್ಣ ಶ್ರೀಗುರು ಮನ್ನಾಥ ಪ 


ಅಂದಿಗಿಂದಿಗೆ ನೀನೆ ನಿತ್ಯನುಭವದಿಂದ ತಂದಿ ತಾಯಿ ನೀನೆ ಶ್ರೀಹರಿ ಮುಕುಂದ ಬಂಧುಬಳಗ ನೀನೆ ಕುಲಕೋಟಿಗಳಿಂದ ಎಂದೆಂದೆನಗೆ ನೀನೆ ಫಲದೊಲವಿಂದ 1 

ಸೃಷ್ಟಿ ಜನ ಪಾಲಕ ನೀನೆ ಸದ್ಗುರು ರನ್ನ ಸೃಷ್ಟಿಯಲಿ ಪೊಗಳುತಲಿ ಶ್ರುತಿಸ್ಮøತಿಗಳು ನಿನ್ನ ಇಷ್ಟ ಕುಲದೈವಗಳೆಂಬುದು ನೀ ಎನ್ನ ದೃಷ್ಟಿಸಿ ಮಾಡುವ ಭಕ್ತಜನರಿಗೆ ಪಾವನ್ನ 2 

ಮನೋಹರ ಮಾಡುವ ಮಂಗಳಕರಮೂರ್ತಿ ಘನ ಸುಖದಾಯಕ ನೀನೆ ಜ್ಞಾನದ ನಿಜಸ್ಫೂರ್ತಿ ಭಾನುಕೋಟಿತೇಜ ನೀನೆ ಸಕಲಸಾರ್ಥಿ ಅನುದಿನ ಮಾಡೊ ಮಹಿಪತಿ ಶ್ರೀಪಾದಕೆ ಆರ್ತಿ 3

****