ಕಾಖಂಡಕಿ ಶ್ರೀ ಕೃಷ್ಣದಾಸರು
ಇನ್ನೇನು ನೋಡುವಿ ನೆಲಿಯಾ | ಬನ್ನ ಬಿಡಿಸಿ ಕಾಯೋ ಶ್ರೀ ಗುರುರಾಯಾ ಪ
ದಾಸಿಗೆ ಕರುಣಿಸಿ ರಾಯರಂಭೆಯ ಮಾಡಿ | ದೋಷವೆಣಿಸುವನೆ ಮುನ್ನಿನ ನೋಡಿ 1
ಸರಿ ತಾ ಹರಿದು ಬಂದು ಗಂಗೆಯಾ ಕೂಡಲಿ | ತಿರುಗಿ ನೂಕುವದೇನು ಜರೆಯುತಲಿ2
ತಂದೆ ಮಹಿಪತಿ ನಿಮ್ಮ ನಂದನನೆನಿಸುತ | ಕುಂದ ನಾರಿಸುವದು ಬಿರುದಿಗುಚಿತಾ 3
***