Showing posts with label ವರದಾ ತೀರದಿ ನೆಲಸಿಹ ಗುರುವರನ್ಯಾರೆ shyamasundara susheelendra teertha stutih. Show all posts
Showing posts with label ವರದಾ ತೀರದಿ ನೆಲಸಿಹ ಗುರುವರನ್ಯಾರೆ shyamasundara susheelendra teertha stutih. Show all posts

Friday, 27 December 2019

ವರದಾ ತೀರದಿ ನೆಲಸಿಹ ಗುರುವರನ್ಯಾರೆ ankita shyamasundara susheelendra teertha stutih

ವರದಾತೀರದಿ ನೆಲಸಿಹ ಗುರುವರನ್ಯಾರೆ ಪೇಳಮ್ಮಯ್ಯ ಪ

ವರದಾಯ ಶ್ರೀ ರಾಘವೇಂದ್ರರ
ಕರುಣ ಪಡೆದ ಸುಶೀಲೇಂದ್ರ ಮುನಿಪನೆ ಅ.ಪ

ದರಪೋಲುವ ಕಂಧರದಿ ತುಲಸಿ ಮಣಿಹಾರ | ಪೇಳಮ್ಮಯ್ಯ
ಅರಶಶಿಸಮ ಸುವಿಶಾಲ ಫಾಲದಲಿ ತಿಲಕ ಪೇಳಮ್ಮಯ್ಯ
ಧರಿಸಿ ಧರಣಿಯೋಳ್ ಪರಿ ಪರಿ ವಿಭವದಿ
ಮೆರೆದ ಕರುಣವರ ಪುಣ್ಯ ಪುರುಷನ 1

ತನುಮನಧನ ವನಿತಾದಿ ವಿಷಯ ವಿರಹಿತನು ಪೇಳಮ್ಮಯ್ಯ |
ತನುರಹಿತ ಮಾರ್ಗಣ ತೃಣ ಸಮವೇಣಿಸಿಹನು ಪೇಳಮ್ಮಯ್ಯ |
ಅನಿಮಿಷ ಲೋಚನೆ ಅನುಮಾನಿಸದಿರು
ಅನಿಮಿಷಾಮಶರಿವರನನುದಿನ ಸೇವಿಸು 2

ಯತಿ ಶಿರೋಮಣಿ ಧೀರೇಂದ್ರರ ಹಿತಕತಿ ಪಾತ್ರ ಪೇಳಮ್ಮಯ್ಯ
ಅತುಳ ಮಹಿಮೆ ಸುಕೃತೀಂದ್ರ ಹೃದಯಶತಪ್ರ ಪೇಳಮ್ಮಯ್ಯ
ಸತತ ರವಿ ಎನಿಸಿ ಶಾಮಸುಂದರನ
ಅತಿ ಭಕುತಿಲಿ ತುತಿಪ ಗುಣನಿಧಿ 3
**********