ankita ಮೂಲನಾರಾಯಣ
ರಾಗ: ಹಿಂದೂಸ್ಥಾನಿ ಕಾಪಿ ತಾಳ: ತ್ರಿ
ತುಂಗಾತೀರನಿವಾಸ
ಮಂಗಳಾಂಗಗುರು ಮಹಿಮಾವಿಶೇಷ ಪ
ಹಿಂಗಿಸುಭವ ನಿನ್ನ ಸಂಗಸುಖವನಿತ್ತು
ರಂಗನಪಾದದಿ ಭಕ್ತಿಯನ್ನಿತ್ತು
ಸಂಗಡವಿರು ಗುರು ಸರ್ವಕಾಲದಲಿ
ಕಂಗೆಟ್ಟಿಹೆ ಕರುಣೆಯ ತೋರಿನ್ನು 1
ಶರಣರಸುರಧೇನುವೆ ಗುರುರಾಜ
ಕರುಣೆಯದೋರೆಮ್ಮೊಳು ಸುರಭೂಜ
ಸ್ಮರಿಪೆ ಧರಿಪೆ ಶಿರದಲಿ ಪಾದರಜ
ಸ್ಮರಣೆಯಿತ್ತು ಪೊರೆಯೈ ಯತಿರಾಜ 2
ಬಾಲರೂಪದಿ ನರಹರಿಯ ಪೂಜಿಸಿ
ಬಾಲಕೃಷ್ಣಪೂಜೆಯ ಯತಿಯಾಗಿ
ಮೂಲರಾಮನ ರಾಘವೇಂದ್ರನಾಮದಿ
ಮೂರುರೂಪದಿ ನೀ ಸೇವಿಸುತಿರುವೆ 3
ವೀಣೆನುಡಿಸೆ ಹರಿ ಕಾಣಿಪ ನಿನಗೆ
ತಾನೆ ಮುರಳಿ ಮೇಳವಿಪನು ಕೊನೆಗೆ
ಕಾಣೆನು ನಿನಗೆಣೆ ಗುರು ಜಗದೊಳಗೆ ಮೂ-
ಲನಾರಾಯಣನಿಹ ನಿನ್ನೊಳಗೆ 4
***