Showing posts with label ರತ್ನದೊಳಗಿದು ರತ್ನ ನವರತ್ನಗಳೊಳಗಿದು ರತ್ನ ramadasa.a. Show all posts
Showing posts with label ರತ್ನದೊಳಗಿದು ರತ್ನ ನವರತ್ನಗಳೊಳಗಿದು ರತ್ನ ramadasa.a. Show all posts

Sunday 5 September 2021

ರತ್ನದೊಳಗಿದು ರತ್ನ ನವರತ್ನಗಳೊಳಗಿದು ರತ್ನ ankita ramadasa.a

 ಅಸೂರಿ ರಾಮಸ್ವಾಮಿ ಅಯ್ಯಂಗಾರ್ ankita ramadasa


ರತ್ನದೊಳಗಿದು ರತ್ನ ನವರತ್ನಗಳೊಳಗಿದು ರತ್ನ ಪ 


ಚಿತ್ತಜಪಿತನೆಂಬ ರತ್ನ ನಮ್ಮ ನಿತ್ಯಮುಕ್ತರಂಗರತ್ನ ಅ.ಪ 


ಭಕ್ತಪಾಲಕನೆಂಬ ರತ್ನ ಸತ್ಯಾಸಕ್ತ ವರದನೆಂಬ ರತ್ನ ಮುಕ್ತಿದಾಯಕ ರಾಮರತ್ನ ನಮ್ಮ ಯುಕ್ತಿಭರಿತ ಕೃಷ್ಣರತ್ನ1 

ಗೋಪಾಲಕೃಷ್ಣನೆಂಬ ರತ್ನ ವರತಾಪಸವಿನುತ ಮಾರತ್ನ ಶ್ರೀಪತಿಯೆಂಬ ಜೀವರತ್ನ ನಮ್ಮ ಪಾಪವಿನಾಶಕರತ್ನ 2 

ಚಾರು ವೇದದೊಳಿಹ ರತ್ನ ನಮ್ಮಶ್ರೀರಮಣ ಎಂಬರತ್ನ 3 

ಕರಿರಾಜವರದ ಸುರತ್ನ ನಮ್ಮ ಕರುಣಾಕರಯೆಂಬ ರತ್ನ ಶರಣ ಜನರ ಹಸ್ತರತ್ನ ನಮ್ಮ ತರಳಧ್ರುವನ ಕಾಯ್ದ ರತ್ನ 4 

ಪ್ರೇಮರಸಾನ್ವಿತ ರತ್ನ ಇದು ಶ್ರೀಮಾಂಗಿರಿರಂಗರತ್ನ ನಮ್ಮ ರಾಮದಾಸಾರ್ಚಿತ ರತ್ನ5

***