Showing posts with label ಹನುಮಂತ ಹನುಮಂತ ಹರಿಯ ಮತ shreevenkatesha. Show all posts
Showing posts with label ಹನುಮಂತ ಹನುಮಂತ ಹರಿಯ ಮತ shreevenkatesha. Show all posts

Friday 27 December 2019

ಹನುಮಂತ ಹನುಮಂತ ಹರಿಯ ಮತ ankita shreevenkatesha

ಹನುಮಂತ ಹನುಮಂತ ಹನುಮಂತ ||ಪ||

ಹನುಮಂತ ಹರಿಯ ಮತ ನಿರುತ ಗುಣಯುತ
ಜನರ ಪೊರೆಯುತ ತತುವರೊಳು ಪ್ರೇರಿತ ||ಅ.ಪ||

ಪವಮಾನ ಪವಮಾನ ಪವಮಾನ ಪವಮಾನ ಪರಮ
ಪಾವನ ಅಣುಮಹದ್ಘನ ವನಧಿಲಂಘನ
ವೀತಿಹೋತ್ರನ ಪಡಿಸಿತೃಪ್ತನ
ರಾಮವಂದನ ಮಾಡುತ ಮನದಿ ಆನಂದ ಆನಂದ ಆನಂದ
ಆನಂದದಿಂದ ತ್ವರಿಯಾ ಹಾರಿ ಶರಧಿಯಾ ಸೀತಾಕೃತಿಯಾ
ಕುಶಲವಾರ್ತೆಯ ಪೇಳಲು ಜೀಯಾ
ಹರುಷ ಅತಿಶಯ ಉಕ್ಕಲು ಕೈಯ
ರಾಮಾಲಿಂಗನದಿಂದ ಆನಂದ ತಾ ನಿಂದಾ ತಾ ನಿಂದ ತಾ ನಿಂದ
ತಾ ನಿಂದಾ ಕಪಿಗಳ ವೃಂದಾ
ನೆರಹಿ ಆನಂದ ರಣಮುಖಕೆಂದಾ
ಶಿಲೆಗಳ ತಂದ ಸೇತುಬಂಧನ
ಮಾಡಿಸಿ ನಿಂದಾ ರಾವಣವಧೆಗೆಂದಾ ||1||

ಶ್ರೀರಾಮ ಶ್ರೀರಾಮ ಶ್ರೀರಾಮ
ಶ್ರೀರಾಮಾ ಪದ ಪ್ರೀತ ಪ್ರಖ್ಯಾತ
ಪ್ರಖ್ಯಾತ ಪ್ರಖ್ಯಾತ ವರಧೃತ ತ್ರಿಜಗ ಖ್ಯಾತ ಅತಿ ಮಹಾರಥ
ಯದುಪತಿ ಪ್ರೀತಾ ಸುರರ ಸೇವಿತಾ ಗರಳಭುಂಜಿತಾ
ಸತಿಗೆ ಪೂವಿತ್ತ ಭುಜಬಲಯುತಾ ಧೀಮಂತಾ
ಧೀಮಂತಾ ಧೀಮಂತಾ ಧೀಮಂತಾ ಭಾರತೀಕಾಂತಾ
ದುರಳ ಮಣಿಮಂತಾ ಸೆಣಸಿಬರೆ ನಿಂತಾ
ಹರಣ ಮಾಡಿ ಪಂಥಗೆಲಿದು ತಾ ನಿಂದಾ
ಪ್ರಣಯನಾಗಿ ನಿಂತಾ ಕೀಚಕನ ಧ್ವಾಂತದೊಳು ತಾ
ನೋಡಿ ತಾ ನೋಡಿ ತಾ ನೋಡಿ ತಾ ನೋಡಿ ಅವನೊಳು
ಕೂಡಿ ಕೈಯ ಹಿಡಿದಾಡಿ ಕೇಳಿಯೊಳು ಕೂಡಿ ಉರದಿಶಿರ
ನೀಡಿ ಮಾಂಸಮುದ್ದೆಮಾಡಿ
ನೆಲಕೆ ಈಡಾಡಿ ನಲಿದು ತೋರಿದಾ ||2||

ಆನಂದ ಆನಂದ ಆನಂದ ಆನಂದ ತಾ ನಿಂದ ಶ್ರೀಮ
ದಾನಂದ ಆನಂದ ಬುಧಜನಕ್ಲೇಶದಿಹ ಮನ ನೋಡಿ ಜೀ
ವನ ಸೂತ್ರ ವ್ಯಾಖ್ಯಾನ ಮಾಡಿ ಪಾವನ ವಾದಿಭಂಜನ
ಬಾದರಾಯಣ ಪ್ರೀತಿಪಾತ್ರ ಏಕಾಂತ ಭಕ್ತ ತಾನಿತ್ತ
ತಾನಿತ್ತ ತಾನಿತ್ತ ತಾನಿತ್ತ ಜಗಕತಿಮೋದ ಶಾಸ್ತ್ರ
ಸನ್ಮುದ ತೋರಿಸರ್ವದ ಜೀವರು ತ್ರಿವಿಧ ತರತಮಭೇದ
ಜಗ ಸತ್ಯ ಜಗವು ಸತ್ಯ ಜೀವರು ನಿತ್ಯ ಕಾರಣ ನಿತ್ಯ
ಕಾರ್ಯ ಅನಿತ್ಯ ಪ್ರಕೃತಿ ಸತ್ಯ ಸುಗುಣವೆ ನಿತ್ಯ
ಭೇದವು ನಿತ್ಯ ದ್ವೈತವು ಸತ್ಯವೆಂದ ಶ್ರೀವೇಂಕಟೇಶನ ನಿಜದೂತ ||3||
********