Showing posts with label ಸಾವಧಾನವಾಗಿ ನೋಡೋ ಸ್ವಾಮಿ ಸದ್ಗುರು ಶ್ರೀಪಾದ ಬೋಧ mahipati. Show all posts
Showing posts with label ಸಾವಧಾನವಾಗಿ ನೋಡೋ ಸ್ವಾಮಿ ಸದ್ಗುರು ಶ್ರೀಪಾದ ಬೋಧ mahipati. Show all posts

Wednesday 1 September 2021

ಸಾವಧಾನವಾಗಿ ನೋಡೋ ಸ್ವಾಮಿ ಸದ್ಗುರು ಶ್ರೀಪಾದ ಬೋಧ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಸಾವಧಾನವಾಗಿ ನೋಡೋ ಸ್ವಾಮಿ ಸದ್ಗುರು ಶ್ರೀಪಾದ ಬೋಧ ಪ  


ತಿರುಗಿ ನೋಡೋ ನಿನ್ನ ನೀನು ಅರಿತು ಸ್ವಾನುಭವದಿಂದ ಕರಗಿ ಮನ ನೋಡಿ ನಿಜದೋರುತದೆ ಬ್ರಹ್ಮಾನಂದ ಸೆರಗವಿಡಿದು ಸೇರು ಬ್ಯಾಗೆ ಗುರುಕರುಣ ಕೃಪೆಯಿಂದ ಪರಮ ಸುಪಥವಿದೆ ವರಮುನಿಗಳಾನಂದ 1 

ಹಚ್ಚಿ ನಿಜಧ್ಯಾಸವಂದು ಕಚ್ಚಿಕೊಂಡಿರೋ ಸುಹಾಸ ಮುಚ್ಚಿಕೊಂಡು ಮುಕ್ತಿ ಮಾರ್ಗ ನೆಚ್ಚಿರೋ ನಿಜಪ್ರಕಾಶ ಹುಚ್ಚುಗೊಂಡು ಹರಿಯ ರೂಪ ಅಚ್ಚರಿಸೋ ನಿರಾಶ ಎಚ್ಚತ್ತು ನಿನ್ನೊಳಗೆ ಬೆರೆಯೋ ಘನಸಮರಸ 2 

ಸಾವಧಾನವೆಂದು ಶ್ರುತಿ ಸಾರುತದೆ ತಾ ಪೂರ್ಣ ಸುವಿದ್ಯ ಸುಖವಿದು ಸಾಧಿಸು ಅನುದಿನ ಪಾವನ್ನಗೈಸುದಿದೆ ಮಹಿಪತಿ ಜೀವಪ್ರಾಣ ಭಾವ ಬಲಿದು ನೋಡಲಿಕೆ ದೋರುತದೊ ನಿಧಾನ 3

***