ಕಾಖಂಡಕಿ ಶ್ರೀ ಮಹಿಪತಿರಾಯರು
ಸಾವಧಾನವಾಗಿ ನೋಡೋ ಸ್ವಾಮಿ ಸದ್ಗುರು ಶ್ರೀಪಾದ ಬೋಧ ಪ
ತಿರುಗಿ ನೋಡೋ ನಿನ್ನ ನೀನು ಅರಿತು ಸ್ವಾನುಭವದಿಂದ ಕರಗಿ ಮನ ನೋಡಿ ನಿಜದೋರುತದೆ ಬ್ರಹ್ಮಾನಂದ ಸೆರಗವಿಡಿದು ಸೇರು ಬ್ಯಾಗೆ ಗುರುಕರುಣ ಕೃಪೆಯಿಂದ ಪರಮ ಸುಪಥವಿದೆ ವರಮುನಿಗಳಾನಂದ 1
ಹಚ್ಚಿ ನಿಜಧ್ಯಾಸವಂದು ಕಚ್ಚಿಕೊಂಡಿರೋ ಸುಹಾಸ ಮುಚ್ಚಿಕೊಂಡು ಮುಕ್ತಿ ಮಾರ್ಗ ನೆಚ್ಚಿರೋ ನಿಜಪ್ರಕಾಶ ಹುಚ್ಚುಗೊಂಡು ಹರಿಯ ರೂಪ ಅಚ್ಚರಿಸೋ ನಿರಾಶ ಎಚ್ಚತ್ತು ನಿನ್ನೊಳಗೆ ಬೆರೆಯೋ ಘನಸಮರಸ 2
ಸಾವಧಾನವೆಂದು ಶ್ರುತಿ ಸಾರುತದೆ ತಾ ಪೂರ್ಣ ಸುವಿದ್ಯ ಸುಖವಿದು ಸಾಧಿಸು ಅನುದಿನ ಪಾವನ್ನಗೈಸುದಿದೆ ಮಹಿಪತಿ ಜೀವಪ್ರಾಣ ಭಾವ ಬಲಿದು ನೋಡಲಿಕೆ ದೋರುತದೊ ನಿಧಾನ 3
***
No comments:
Post a Comment