Showing posts with label ಕಂಡು ನಮಿಸಿದೆ ನಿನ್ನ ಕಡಗೋಲ ಪಿಡಿದುದ್ದಂಡ ದೇವವರೇಣ್ಯ gopalakrishna vittala. Show all posts
Showing posts with label ಕಂಡು ನಮಿಸಿದೆ ನಿನ್ನ ಕಡಗೋಲ ಪಿಡಿದುದ್ದಂಡ ದೇವವರೇಣ್ಯ gopalakrishna vittala. Show all posts

Sunday 1 August 2021

ಕಂಡು ನಮಿಸಿದೆ ನಿನ್ನ ಕಡಗೋಲ ಪಿಡಿದುದ್ದಂಡ ದೇವವರೇಣ್ಯ ankita gopalakrishna vittala

ಕಂಡು ನಮಿಸಿದೆ ನಿನ್ನ | ಕಡಗೋಲ ಪಿಡಿ-

ದುದ್ದಂಡ ದೇವವರೇಣ್ಯ

ತಾಪತ್ರಯಗಳಘ ಹಿಂಡು

ಓಡಿಸು ರನ್ನ ಪೊರೆ ಸುಪ್ರಸನ್ನ ಪ.


ಕಂಡೆ ನಿನ್ನಯ ಬಾಲರೂಪವ

ಪುಂಡರೀಕದಳಾಯತಾಕ್ಷನೆ

ಕುಂಡಲೀಶಯ ನಿನ್ನ ಚರಣದಿ

ದಂಡವಿಕ್ಕುವೆ ಗೋಪಿಬಾಲ ಅ.ಪ.

ಜನನ ಮರಣದಿ ನೊಂದೆ | ಶ್ರೀ ಜಾನಕೀಪತೆ

ಪ್ರಣತ ಜನರಿಗೆ ತಂದೆ | ನೀ ಕಾಯದಿದ್ದರೆ

ಘನವೆ ನಿನಗಿದು ಎಂದೆ | ಪಾಲಿಪುದು ಮುಂದೆ

ಜನಮ ಜನುಮದ ಕರ್ಮಗಳ ನಾ

ಅನುಭವಿಸಿ ಪೂರೈಸಲಾಪೆನೆ

ಘನಮಹಿಮ ದಯ ಮಾಡಿದಲ್ಲದೆ

ಕೊನೆಯ ಕಾಣೆನು ವಿಷಯ ವಾಸನೆ

ವನಜ ಸಂಭವ ಪವನ ರುದ್ರಾ

ದ್ಯನಿಮಿಷಿರಿಗಿನಿತಿಲ್ಲ ಮಹಿಮೆಯು

ನಿನಗೆ ವಿೂರಿದರುಂಟೆ

ದನುಜದಲ್ಲಣ ದಯದಿ ಸಲಹೊ 1

ಕಾಮಪಿತ ಮಧ್ವೇಶ | ಸೌಂದರ್ಯ ಸಾರ

ತಾಮಸರ ವಿಧ್ವಂಸ | ಸಜ್ಜನರ ಕಾಯುವ

ಕೋಮಲಾಂಗನೆ ಶ್ರೀಶ | ಲಕ್ಷ್ಮೀ ನಿವಾಸ

ಹೋಮಕುಂಡದಿ ಪುಟ್ಟಿದಾ ಸತಿ

ಕಾಮಿಗಳ ಉಪಟಳಕೆ ಸಹಿಸದೆ

ಶ್ರೀ ಮನೋಹರ ಕಾಯೊ ದ್ವಾರಕೆ

ಧಾಮ ನೀ ಗತಿ ಎನುತವರಲೆ

ಪ್ರೇಮದಿಂದಕ್ಷಯವನಿತ್ತ

ನಾಮ ಮಂಗಳ ನಿರ್ಮಲಾತ್ಮಕ

ಸೋಮಶತಪ್ರಭ ಸೌಮ್ಯರೂಪ ತ್ರಿ-

ಧಾಮ ಭಕ್ತರ ಕಾಮಿತಾರ್ಥನೆ 2

ಆದಿಮಧ್ಯವಿದೂರ | ಆನಂದ ಪೂರ್ಣ

ಸಾಧು ಮನದಿ ವಿಹಾರ | ಸರ್ವಜ್ಞರಾಯರ

ಹಾದಿ ತೋರಿಸೊ ಧೀರ | ಸುe್ಞÁನಸಾರ

ವೇದ ಶಾಸ್ತ್ರಗಳರ್ಥವರಿಯೆನು

ಮಾಧವನೆ ಮಮಕಾರದಲಿ ನಾ

ಹಾದಿ ತಿಳಿಯದೆ ನೊಂದೆ ಅಜ್ಞತೆ

ಹೋದಡಲ್ಲದೆ ನಿನ್ನ ಕಾಣುವ

ಮೋದ ಬರುವುದೆ ಮಧ್ವವಲ್ಲಭ

ಭೇದ ಮತಿ ಕೊಡು ತಾರತಮ್ಯದಿ

ನೀ ದಯದಿ ಒಲಿದೆನ್ನ ಮನದಲಿ

ಆದರದಿ ನೆಲೆಸಿನ್ನು ಪೊಳೆಯೊ 3

ಕಡಲಶಯನನೆ ಶ್ರೀಶ | ಕಡಗೋಲ ಕೈ

ಪಡುಗಡಲ ತೀರದಿ ವಾಸ | ಕಮಲೇಶ ನಾ ನಿ-

ನ್ನಡಿಯ ಕಂಡೆನು ನಾಶ | ರಹಿತನೆ ಪ್ರಕಾಶ

ಎಡೆಬಿಡದೆ ನಿನ್ನಸ್ಮರಿಪ ಧ್ಯಾನವ

ಕೊಡುತ ಮಧ್ಯದಿ ತಡೆವ ಸಂಸೃತಿ

ತಡೆದು ಸಂತ ಚಿಂತನೆಯ ದೃಢ

ಒಡಲೊಳಗೆ ನೆಲೆಸಯ್ಯ ಬಿಡದೆ

ಕಡಲಸುತೆ ಪತಿ ಕಡಲ ಸತಿ ಪಿತ

ಕಡಲವಾಸನೆ ಕಡಲ ಬಂಧನ

ಕಡಲ ಮಧ್ಯದಿ ಪುರವ ರಚಿಸಿದೆ

ಕಡು ದಯಾಂಬಯಧೆ ಕಾಯೊ ಸತತ 4

ಅಷ್ಟಯತಿ ನುತಪಾದ | ಸುಖ ತೀರ್ಥ ಹೃದಯ

ದೀಷ್ಟಿತನೆ ಸನ್ಮೋದ | ಸಜ್ಜನರ ಮನದಾ

ಭೀಷ್ಟವೀವ ಪ್ರಮೋದ | ಕರುಣಿ ಸುಪ್ರಸೀದ

ಕೊಟ್ಟೆ ಮನು ಮುನಿಗಳಿಗೆ e್ಞÁನವ

ತುಷ್ಟಿಪಡಿಸುತÀ ಸುರರ ಸುಧೆಯಲಿ

ಕುಟ್ಟಿ ಅಸುರನ ಕೋರೆದಾಡಿಲಿ

ದಿಟ್ಟ ನರಹರಿ ಬ್ರಹ್ಮಚಾರಿ

ಕುಟ್ಟಿ ಅರಸರ ಕಟ್ಟಿ ಜಟೆಯನು

ಮಟ್ಟಿ ಕಂಸನ ಬಿಟ್ಟು ವಸನವ

ದಿಟ್ಟ ಕಲ್ಕಿ ಗೋಪಾಲಕೃಷ್ಣ

ವಿಠ್ಠಲನೆÀ ಶ್ರೀ ಉಡುಪಿಲೋಲ5

****