Showing posts with label ಸೇರಿ ಸುಖಿಸು ಮಾನವ ಗುರು ಚರಣ ಸರೋಜವ shreenidhi vittala. Show all posts
Showing posts with label ಸೇರಿ ಸುಖಿಸು ಮಾನವ ಗುರು ಚರಣ ಸರೋಜವ shreenidhi vittala. Show all posts

Friday, 6 August 2021

ಸೇರಿ ಸುಖಿಸು ಮಾನವ ಗುರು ಚರಣ ಸರೋಜವ ankita shreenidhi vittala

 ..

kruti by ಶ್ರೀನಿಧಿವಿಠಲರು shreenidhi vittalaru


ಸೇರಿ ಸುಖಿಸು ಮಾನವ

ಗುರು ಚರಣ ಸರೋಜವ ಪ


ಸೇರಿದ ಶರಣರ ಘೋರ ಪಾತಕವೆಂಬ

ವಾರಿಧಿ ಭವಕೆ ಸಮೀರ ಜಗನ್ನಾಥ

ಸೂರಿವರ್ಯ ದಾಸಾರ್ಯರಂಘ್ರಿಯನು 1


ತಾರತಮ್ಯವ ತಿಳಿಯದೆ ಕಲಿಯುಗದಿ ಮುಕ್ತಿ-

ದಾರಿಕಾಣದೆ ಭವದಿ ಬಿದ್ದ ಜ-

ನರುದ್ಧಾರ ಮಾಡಲು ದಯದಿ ಬ್ಯಾಗವಾಟದಿ

ನರಸಿಂಗಾಖ್ಯ ವಿಪ್ರಗಾರ ದೋಳುದ್ಭವಿಸಿ

ಶ್ರೀರಮಾಪತಿಯ ಚಾರು ಕಥಾಮೃತ

ಸಾರವ ಧರೆಯೋಳು ಬೀರಿದಂಥವರ 2


ಮೇದಿನಿಯೊಳು ಚರಿಸಿ ವಾಕ್ಯಾರ್ಥದಿ ಬಹು

ವಾದಿಗಳನೆ ಜಯಿಸಿ ಎನಿಸಿದರು ಪೂರ್ಣ

ಬೋಧ ಮತಾಬ್ಧಿಗೆ ಶಶಿನೃಪ ಮಾನ್ಯರೆನಿಸಿ

ಶ್ರೀದ ಪ್ರಹ್ಲಾದನನುಜ ಸಹ್ಲಾದರೆ ಇವರೆಂದು

ಸಾದರ ಬಿಡದ ಪಾದಪಂಕಜಾರಾಧಕರಿಗೆ ಸುರಪಾದರೆನಿಪರ 3


ಕ್ಷೋಣಿ ವಿಬಂಧ ಗಣದಿ ಸೇವೆಯಗೊಂಡು

ಮಾನವಿ ಎಂಬ ಕ್ಷೇತ್ರದಿ ಮಂದಿರ ಮಧ್ವ

ಸ್ಥಾಣುವಿನೊಳು ಮುದದಿ ಕಾರ್ಪರವೆಂಬ

ಕಾನನದಲ್ಲಿ ಕೃಷ್ಣವೇಣಿ ಕುಲದಿ ಮೆರೆವ

ಶ್ರೀನಿಧಿ ನರಪಂಚಾನನಂಘ್ರಿಯುಗ

ಧ್ಯಾನದಿ ಕುಳಿತ ಮಹಾನುಭಾವರನು 4

***