RAO COLLECTIONS SONGS refer remember refresh render DEVARANAMA
ಏನ ಹೇಳಲಿ ಕೃಷ್ಣನಗುಣವ
ನೋಡೆ ಸಖಿಯೆ ಪ.
ಜಾರತನದಿ ಶೀರೆಯ ಶಳಕೊಂಡು
ಮಾರನಾಟಕೆ ಎನ್ನ ಮರುಳು ಮಾಡಿದನಮ್ಮ 1
ಚಂಡು ತಾರೆನುತಲಿ ದುಂಡು ಕುಚವಪಿಡಿದು
ಕಂಡು ಕಂಡಲ್ಲಿ ಎನ್ನ ಬಹು ಭಂಡು ಮಾಡುತಲಿಹನಮ್ಮ 2
ತಂದೆ ಹೆಳವನಕಟ್ಟೆ ರಂಗನ ಕೃಪೆಯಿರಲು
ಬಂದ ದುರಿತಗಳು ನಂದಿ ಪೋಗುವವು 3
***