Showing posts with label ಭಾರ್ಗವಿ ರಮಣಾ ಜಗದಾಭಿ ರಮಣಾ traditional ವೆಂಕಟೇಶನ ಉರುಟಣೆಯ ಹಾಡು Venkatesana Urutani Haadu. Show all posts
Showing posts with label ಭಾರ್ಗವಿ ರಮಣಾ ಜಗದಾಭಿ ರಮಣಾ traditional ವೆಂಕಟೇಶನ ಉರುಟಣೆಯ ಹಾಡು Venkatesana Urutani Haadu. Show all posts

Wednesday 2 June 2021

ಭಾರ್ಗವಿ ರಮಣಾ ಜಗದಾಭಿ ರಮಣಾ traditional ವೆಂಕಟೇಶನ ಉರುಟಣೆಯ ಹಾಡು Venkatesana Urutani Haadu

 ಭಾರ್ಗವಿ ರಮಣಾ | ಜಗದಾಭಿ ರಮಣಾ ||ಪ||

ಲೋಕನಾಯಕ ಸ್ವಾಮಿ | ವೈಕುಂಠಾದಿಂದ ಬಂದೂಏಕಾಂತವಾನಾಡಿದಾ | ಲಕ್ಷೀಯರೊಡನೆ ||1||

ಧರೆಗೆ ವೈಕುಂಠಾದ | ಚರ್ಯವ ತೋರುವೆನೆಂದುಶಿರಿ ಮಹಾಲಕ್ಷೀಯೊಡನೆ | ಸಂಧಿಸಿದಾನೂ ||2||

ಸ್ವಾಮಿ ಕಾಸಾರದಲೀ | ಧಾಮಾವ ರಚಿಸೂವೆಆ ಮಹಾ ವೈಕುಂಠಾವ | ಅಗಲೀ ಬಂದೂ ||3||

ವತ್ಸರ ಕಾಲದಲೊಂದು | ಉತ್ಸವ ಮಾಡುವೆನೆಂದುಇಚ್ಛೆ ಮಾಡಿದನೂ ವೆಂಕಟ ಇಂದಿರೆಗೂಡಿ||4||

ನವರಾತ್ರಿ ದಿವಸದಲೀ | ವಿವಾಹ ಲಗ್ನವ ರಚಿಸೀಅವನಿಯೊಳು ಡಂಗುರವನ್ನು ಹೊಯಿಸೀದ ಸ್ವಾಮೀ ||5||

ಕಾಶಿ ಕರ್ನಾಟಕದ | ದೇಶಾ ದೇಶದ ಜನರುಶ್ರೀಶಾನುತ್ಸವಕೇ ಜನರು ಒದಗೀದರಾಗಾ ||6||

ಹದಿನಾಲ್ಕು ಲೋಕಾದ | ಪದುಮಜಾದಿಗಳೆಲ್ಲಾ ಮದುವೆಯಾ ದಿಬ್ಬಣದಾ | ಜನರು ಬಂದರಾಗಾ ||7||

ಗರುಡಾ ಕಂಬದ ಸುತ್ತಾ | ಪರಿಪರಿ ವೈಭವದಿಂದಗಿರಿಯಾ ವೆಂಕಟಗೇ | ಕಂಕಣ ಕಟ್ಟಿದರಾಗಾ ||8||

ಆಗಮಾ ಪುರಾಣ | ರಾಗ ಮದ್ದಳೆ ತಾಳಭಾಗವತರೂ ಸುತ್ತ ಮಾಡುತಿರಲೂ ||9||

ತಾಳ ತಮ್ಮಟೆ ಕಾಳೆ | ಭೋರೆಂಬೋ ವಾದ್ಯಗಳೂವರ ನಾರಿಯರು ಸುತ್ತಾಗ್ಹಾಡುತಿರಲೂ ||10||

ಚಿನ್ನದ ಕರಿಮಣಿ | ರನ್ನ ಮಂಗಳಸೂತ್ರಹಿರಿಯಾ ವೆಂಕಟನೂ ಲಕ್ಷ್ಮೀಗೆ ಕಟ್ಟಿದ ನಗುತಾ ||11||

ಮುತ್ತಿನಾ ಕರಿಮಣಿ | ರತ್ನ ಮಂಗಳಸೂತ್ರಾಸ್ವಾಮಿ ವೆಂಕಟ ಲಕ್ಷ್ಮೀಗೆ ಕಟ್ಟಿದ ನಗುತಾ ||12||

ಅಂತರಾ ಮಾರ್ಗದೊಳೂ | ನಿಂತು ದೇವತೆಗಾಳು ಸಂತೋಷದಿಂದಲಿ ಜಯ ಜಯವೆಂದು ಪಾಡಿದರಾಗ ||13||

ಅಂಗಾನೆ ಶ್ರೀ ಭೂಮಿ | ರಂಗಾಮಂಟಪದೊಳಗೆಬಂಗಾರ ಗಿರಿಯಾ ವೆಂಕಟ ಒಪ್ಪಿದ ಸ್ವಾಮೀ ||14||

ಅತಿರಸಾ ಮನೋಹರ | ಮಿತಿಯಿಲ್ಲದ ಪದಾರ್ಥಗಳೂಸತಿಯರೆಲ್ಲರು ಭೂಮಕೆ ತಂದು ಬಡಿಸಿದರಾಗ ||15||

ಬೆರದ ನಾರಿಯರೆಲ್ಲ | ಹರಿಭೂಮಾ ನಂತರದೀಭರದಿ ಉರುಟಣಿಗೆ ಅಣಿ ಮಾಡಿದರಾಗಾ||16||

ಮಿತ್ರೆ ಲಕ್ಷ್ಮೀಗೆ ತಕ್ಕ | ಹಿರಿಯರು ಪೇಳಲುಛಂದದಿಂದಲಿ ಅರಿಷಿನ ಕಲಸಿ ನಿಂತಳಾಗ ||17||

ಪನ್ನಗ ನಗವಾ | ಸೇರಿದ ಮಹರಾಯದುಡ್ಡು ದುಡ್ಡಿಗೆ ಬಡ್ಡಿಯನ್ನು ದುಡಿವಾ ಲೋಭಿ ||18||

ವಂಚಿಸಿ ಜನರನ್ನು | ಲಂಚಾ ಲಾವಣಿ ತೆಗೆದುಹಿಂಚಾಸಿ ವರ ಕೊಡುವಾ ಹಿತದಾ ದೇವಾ ||19||

ಬಡವಾ ಬಲ್ಲಿದರೆಂದು | ಬಿಡದಾಲೆ ಅವರಿಂದಮುಡುಪು ಹಾಕಿಸಿಕೊಂಡು (ಮುಂದಕೆ) ಬಿಡುವೋ ದೇವಾ ||20||

ಅನ್ನವೆಲ್ಲವ ಮಾರಿ | ಹೊನ್ನು ಕಟ್ಟುವೆಯಲ್ಲೊಅನ್ನದಾನವ ಮಾಡಲೊಲ್ಲಿ ಅನ್ಯಾಕಾರಿ ||21||

ಹೊನ್ನು ಸಾಲವ ತೆಗೆದು | ಎನ್ನಾ ಕಟ್ಟಿಕೊಂಡುಮನೆ ಮನೆಗೆ ಭಿಕ್ಷವ ಬೇಡುವ ಮಾನವಂತಾ ||22||

ಹೊನ್ನು ಸಾಲದು ಎಂದು | ಎನ್ನ ಸಾಕುವೆ ಹೇಗೋನಿನ್ನಾ ಕೃಪಣತನಕೆ ನಾನು ಎಣೆಗಾಣೆನೋ ||23||

ಇಪ್ಪತ್ತು ದುಡ್ಡೀಗೆ | ಸೇರು ತೀರ್ಥವ ಮಾರಿದುಡ್ಡು ಕಟ್ಟಿ ಜಾಳಿಗೆ ಗಳಿಸುವ ಜಾಣ ನೀನೂ ||24||

ಅಟ್ಟಾ ಮಡಿಕೆಯಲ್ಲಾ | ಕುಟ್ಟಿ ನಾಮವ ಮಾಡಿಗಟ್ಟಿಯಾಗಿ ಗಂಟು ಗಳಿಸುವ ಘನವಂತಾ ||25||

ದೇಶದೊಳು ನಿಮ್ಮಂಥಾ | ಆಸೆ ಉಳ್ಳವರಿಲ್ಲಕಾಸು ಕಟ್ಟಿ ಕವಡೆ ಗಂಟು ದುಡಿವ ಲೋಭಿ ||26||

ಮಡದಿ ನಾನಿರಲಿಕ್ಕೆ | ಕಡಿಮೆ ಏನಾಗೋದುಬಡತನ ನಿನಗೆ ಯಾತಕೆ ಬಂತೂ ಸ್ವಾಮೀ ||27||

ನಾರೀಯಾ ನುಡಿ ಕೇಳಿ | ವಾರೆ ನೋಟದಿ ನೋಡಿಮೋರೆ ತಗ್ಗಿಸಿ ವೆಂಕಟ ಮುನಿದು ನಿಂತಾ ||28||

ಕಡುಕೋಪಾ ಮಾಡುವರೆ | ಹುಡುಗನಂತಾಡುವರೆಕೊಡಲೀಯ ಪಿಡಿವಾರೆ ನಾನು ನುಡಿದಾ ನುಡಿಗೇ ||29||

ಕಣ್ಣಾನೆ ಬಿಡಬ್ಯಾಡ | ಬೆನ್ನ ತೋರಲಿ ಬ್ಯಾಡಾಇನ್ನು ಮುಖವಾ | ತಗ್ಗಿಸಬ್ಯಾಡ ಇತ್ತ ನೋಡೂ ||30||

ಎನ್ನರಸಾ ಹೊನ್ನರಸಾ | ಚೆನ್ನಿಗ ವೆಂಕಟರಾಯಾನಿನ್ನ ಪೋಲುವರ್ಯಾರೊ | ಜಗದೊಳು ನೀಲಗಾತ್ರಾ ||31||

ಎನ್ನರಸಾ ಚೆನ್ನರಸಾ | ಚೆನ್ನಿಗ ವೆಂಕಟರಮಣಾನಿನ್ನ ಮುದ್ದು ಮುಖವ ತೋರೊ ಅರಿಷಿಣ ಹಚ್ಚೇನು ||32||

ಎನ್ನುತ ಅರಿಷಿಣ | ಹಚ್ಚಿ ಕುಂಕುಮವಿಟ್ಟುರನ್ನ ಹಾರವ ಹಾಕಿ ತಾನು ಕುಳಿತಾಳಾಗ ||33||

ಮಂದರಧರ ತಾನೂ | ಛಂದದರಿಶಿನ ಪಿಡಿದೂಇಂದಿರಾದೇವಿಯನ್ನು ಮಾತನಾಡಿಸಿದಾ ||34||

ಎನ್ನರಸಿ ಹೊನ್ನರಸಿ | ಚೆನ್ನಿಗ ಮಾಯಾದೇವಿನಿನ್ನ ಮುದ್ದು ಮೊಗವಾನೆ ತೋರು ಅರಿಷಿನ ಹಚ್ಚೇನು ||35||

ಭಿಡೆಯಾ ನೋಡದೆ ಇಂಥಾ | ನುಡಿಗಳಾಡಿದ ಮ್ಯಾಲೆನಡುಗಿ ಮೋರೆಯ ತಗ್ಗಿಸಲಿಹುದೆ ನಾಚಿಕೆ ಯಾಕೆ ||36||

ಭಾಗ್ಯಾದ ಮೊಬ್ಬಿಲಿ | ಬಾಗಿ ನೀ ನಡೆಯಾದೇಅಗ್ಗಳಿಕೆ ಮಾತುಗಳನ್ನು ಆಡಿದೆಯಲ್ಲೇ ||37||

ಮಿಂಚಿನಂದದಿ ಬಹಳಾ | ಚಂಚಲ ಬುದ್ಧ್ಯವಳೇವಂಚಿಸೂವಳೆ ಜಗವಾ ವಾರಿಜಾಕ್ಷೀ ||38||

ಬಂಗಾರಾ ಮುಡುಪಿಗೆ | ಎನ್ನ ಕಂಗೊಳಿಸೀಗಾ ಹಿಂಗಾದೆ ಮಂಕು ಮಾನವರ ಮಾಡುವುದರಿದೇ ||39||

ಮುಡಿಯ ದಂಡೆಗೆ ಮುಡಿಸಿ | ಎಡದ ಕೈಯಲಿ ಬ್ಯಾಗಾತೊಡಕ ಕಂಚುಕ ವೆಂಕಟ ಬಿಗಿದಾ ನಗುತಾ ||40||

ತಾಂಬೂಲವನೆ ಮೆದ್ದು | ಮಡದಿಯಾ ಮುಖ ಸೂಸೆಇಂಬೀಲ್ಹಚ್ಚೆ ಬರೆದರಾಗ ಅತಿ ಸಂಭ್ರಮದೀ ||41||

ತಿರುಮಲೇಶನು ತನ್ನ | ಮಡದೀಯನು ಎತ್ತಿಭರದಿಂದಾ ತನ್ನರಮನೆಗಾಗಿ ತೆರಳಿದಾನು ||42||

ದ್ವಾರದಾದಡಿಯಲ್ಲಿ | ನಾರೇರೆಲ್ಲರು ನಿಂತುವಾರಿಜಾಕ್ಷಿ ಪತಿಯ ಹೆಸರಾ ಹೇಳೆಂದರು ||43||

ಕಿರುನಗೆಯಿಂದ ಲಕ್ಷ್ಮೀ | ಗಿರಿಯಾ ವೆಂಕಟನೆನಲೂಹರಿಯೆ ನಿನ್ನ ರಮಣಿ ಹೆಸರಾ ಹೇಳೆಂದರೂ ||44||

ಜಾತಿ ನಾಚಿಕೆ ತೊರೆದು | ಶ್ರೀ ತರುಣಿ ಎನುತಾಲೆಪ್ರೀತಿಯಿಂದಲಿ ಸಿಂಹಾಸನದಿ ಕುಳಿತರಾಗಾ ||45||

ಮತ್ತೆ ನಾರಿಯರೆಲ್ಲಾ | ಮುತ್ತಿನಾರತಿ ಪಿಡಿದೂಸತ್ಯಾಭಾಮೆಗೆ ಜಯ ಜಯವೆಂದರಾಗ ||46||

ವಿಭುವಿನ ಗುಣವನ್ನು ವಿಸ್ತರ ಪೇಳಿದ ಜನಕೆಸಮಯದಂಥ ಭಾಗ್ಯವನಿತ್ತು ಸಲಹುವ ಸ್ವಾಮಿ ||47||

ಮಂಗಳ ವೆಂಕಟರಾಯಾ | ಮಂಗಳ ಮಾಧವರಾಯಾಮಂಗಳ ಮಾನಸಗೇಯಾ | ಮಂಗಳ ಮಾಧವರಾಯಾ ||48||

ಧರೆಯೊಳಧಿಕನಾದ | ದೊರೆ ವ್ಯಾಸವಿಠಲಾನುಪರಮ ಭಕ್ತಿ ಸುಜ್ಞಾನವನು ಪಾಲಿಸೂವಾ ||49||

****


Bhārgavi ramaṇā | jagadābhi ramaṇā ||pa||

lōkanāyaka svāmi | vaikuṇṭhādinda bandū’ēkāntavānāḍidā | lakṣīyaroḍane ||1||

dharege vaikuṇṭhāda | caryava tōruvenenduśiri mahālakṣīyoḍane | sandhisidānū ||2||

svāmi kāsāradalī | dhāmāva racisūve’ā mahā vaikuṇṭhāva | agalī bandū ||3||

vatsara kāladalondu | utsava māḍuvenendu’icche māḍidanū veṅkaṭa indiregūḍi||4||

navarātri divasadalī | vivāha lagnava racisī’avaniyoḷu ḍaṅguravannu hoyisīda svāmī ||5||

kāśi karnāṭakada | dēśā dēśada janaruśrīśānutsavakē janaru odagīdarāgā ||6||

hadinālku lōkāda | padumajādigaḷellā maduveyā dibbaṇadā | janaru bandarāgā ||7||

garuḍā kambada suttā | paripari vaibhavadindagiriyā veṅkaṭagē | kaṅkaṇa kaṭṭidarāgā ||8||

āgamā purāṇa | rāga maddaḷe tāḷabhāgavatarū sutta māḍutiralū ||9||

tāḷa tam’maṭe kāḷe | bhōrembō vādyagaḷūvara nāriyaru suttāg’hāḍutiralū ||10||

cinnada karimaṇi | ranna maṅgaḷasūtrahiriyā veṅkaṭanū lakṣmīge kaṭṭida nagutā ||11||

muttinā karimaṇi | ratna maṅgaḷasūtrāsvāmi veṅkaṭa lakṣmīge kaṭṭida nagutā ||12||

antarā mārgadoḷū | nintu dēvategāḷu santōṣadindali jaya jayavendu pāḍidarāga ||13||

aṅgāne śrī bhūmi | raṅgāmaṇṭapadoḷagebaṅgāra giriyā veṅkaṭa oppida svāmī ||14||

atirasā manōhara | mitiyillada padārthagaḷūsatiyarellaru bhūmake tandu baḍisidarāga ||15||

berada nāriyarella | haribhūmā nantaradībharadi uruṭaṇige aṇi māḍidarāgā||16||

mitre lakṣmīge takka | hiriyaru pēḷaluchandadindali ariṣina kalasi nintaḷāga ||17||

pannaga nagavā | sērida maharāyaduḍḍu duḍḍige baḍḍiyannu duḍivā lōbhi ||18||

van̄cisi janarannu | lan̄cā lāvaṇi tegeduhin̄cāsi vara koḍuvā hitadā dēvā ||19||

baḍavā ballidarendu | biḍadāle avarindamuḍupu hākisikoṇḍu (mundake) biḍuvō dēvā ||20||

annavellava māri | honnu kaṭṭuveyallo’annadānava māḍalolli an’yākāri ||21||

honnu sālava tegedu | ennā kaṭṭikoṇḍumane manege bhikṣava bēḍuva mānavantā ||22||

honnu sāladu endu | enna sākuve hēgōninnā kr̥paṇatanake nānu eṇegāṇenō ||23||

ippattu duḍḍīge | sēru tīrthava māriduḍḍu kaṭṭi jāḷige gaḷisuva jāṇa nīnū ||24||

aṭṭā maḍikeyallā | kuṭṭi nāmava māḍigaṭṭiyāgi gaṇṭu gaḷisuva ghanavantā ||25||

dēśadoḷu nim’manthā | āse uḷḷavarillakāsu kaṭṭi kavaḍe gaṇṭu duḍiva lōbhi ||26||

maḍadi nāniralikke | kaḍime ēnāgōdubaḍatana ninage yātake bantū svāmī ||27||

nārīyā nuḍi kēḷi | vāre nōṭadi nōḍimōre taggisi veṅkaṭa munidu nintā ||28||

kaḍukōpā māḍuvare | huḍuganantāḍuvarekoḍalīya piḍivāre nānu nuḍidā nuḍigē ||29||

kaṇṇāne biḍabyāḍa | benna tōrali byāḍā’innu mukhavā | taggisabyāḍa itta nōḍū ||30||

ennarasā honnarasā | cenniga veṅkaṭarāyāninna pōluvaryāro | jagadoḷu nīlagātrā ||31||

ennarasā cennarasā | cenniga veṅkaṭaramaṇāninna muddu mukhava tōro ariṣiṇa haccēnu ||32||

ennuta ariṣiṇa | hacci kuṅkumaviṭṭuranna hārava hāki tānu kuḷitāḷāga ||33||

mandaradhara tānū | chandadariśina piḍidū’indirādēviyannu mātanāḍisidā ||34||

ennarasi honnarasi | cenniga māyādēvininna muddu mogavāne tōru ariṣina haccēnu ||35||

bhiḍeyā nōḍade inthā | nuḍigaḷāḍida myālenaḍugi mōreya taggisalihude nācike yāke ||36||

bhāgyāda mobbili | bāgi nī naḍeyādē’aggaḷike mātugaḷannu āḍideyallē ||37||

min̄cinandadi bahaḷā | can̄cala bud’dhyavaḷēvan̄cisūvaḷe jagavā vārijākṣī ||38||

baṅgārā muḍupige | enna kaṅgoḷisīgā hiṅgāde maṅku mānavara māḍuvudaridē ||39||

muḍiya daṇḍege muḍisi | eḍada kaiyali byāgātoḍaka kan̄cuka veṅkaṭa bigidā nagutā ||40||

tāmbūlavane meddu | maḍadiyā mukha sūse’imbīl’hacce baredarāga ati sambhramadī ||41||

tirumalēśanu tanna | maḍadīyanu ettibharadindā tannaramanegāgi teraḷidānu ||42||

dvāradādaḍiyalli | nārērellaru nintuvārijākṣi patiya hesarā hēḷendaru ||43||

kirunageyinda lakṣmī | giriyā veṅkaṭanenalūhariye ninna ramaṇi hesarā hēḷendarū ||44||

jāti nācike toredu | śrī taruṇi enutāleprītiyindali sinhāsanadi kuḷitarāgā ||45||

matte nāriyarellā | muttinārati piḍidūsatyābhāmege jaya jayavendarāga ||46||

vibhuvina guṇavannu vistara pēḷida janakesamayadantha bhāgyavanittu salahuva svāmi ||47||

maṅgaḷa veṅkaṭarāyā | maṅgaḷa mādhavarāyāmaṅgaḷa mānasagēyā | maṅgaḷa mādhavarāyā ||48||

dhareyoḷadhikanāda | dore vyāsaviṭhalānuparama bhakti sujñānavanu pālisūvā ||49||

*****