Showing posts with label ಕಂಡೆ ನೋಡೆ ಇಂದು ರಾಘವೇಂದ್ರರಾಯರ gurutandegopala vittala. Show all posts
Showing posts with label ಕಂಡೆ ನೋಡೆ ಇಂದು ರಾಘವೇಂದ್ರರಾಯರ gurutandegopala vittala. Show all posts

Monday, 6 September 2021

ಕಂಡೆ ನೋಡೆ ಇಂದು ರಾಘವೇಂದ್ರರಾಯರ ankita gurutandegopala vittala

by ಗುರುತಂದೆಗೋಪಾಲವಿಠಲ 


ರಾಗ: ಪೂರ್ವಿ ತಾಳ: ಆದಿ


ಕಂಡೆನೋಡೆ ಇಂದು ರಾಘವೇಂದ್ರರಾಯರ

ಕಂಡೆನೋಡೆ ಇಂದು ರಾಘವೇಂದ್ರರಾಯರ ಪದ-

ಪುಂಡರಿಕದಲಿ ಬಂಡುಣಿಗನಾಗಿ ನಿನ್ನ ಪ.


ಕಠಿಣ ದೆಶೆಯಲಿ ಪಟುತರ ಜ್ಞಾನದಿಂ

ಚಟಚಟನೆ ಛೇದಿಸಿ ತಟಿತದಿ ತೋರ್ದನ 1

ಬಂಧು ನೀನೆಂದು ತಮ್ಮಸಂದರುಶನವಿತ್ತು

ಕಂದಜನಿಸುವನೆಂ ಛಂದದಿ ಫಲಕೊಡುವ 2

ಏಸುಜನ್ಮದಪುಣ್ಯದೀಸುಖವೊದಗಿತೊ

ಈ ಸಮಯದಲಿ ತನ್ನ ದಾಸನ್ನ ಮಾಡಿದವರ 3

ಮಂಡಲದೊಳಗೆ ಬಹು ಪಂಡಿತಾಗ್ರಣಿಯೆನಿಸಲು-

ದ್ದಂಡವಾದಿಗಳ ವಾಕುಖಂಡಿಸಿ ಮೆರೆವರ 4

ಸಿಂಧುಶಯನ ಗುರುತಂದೆಗೋಪಾಲವಿಠಲ

ದ್ವಂದ್ವ ಚರಣದಲಿ ವಂದಿಸಿ ತುತಿಸುವರ 5

***