..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಮತ್ಸ್ಯಾವತರ
ರಾಗ - : ತಾಳ -
ಲೀಲಾವತಾರನೇ ಪ್ರಳಯಾಬ್ಧಿ ಸಂಚರನೇ
ಮಾಲೋಲ ಸುಖಚಿತ್ ತನು ಮತ್ಸ್ಯರೂಪ
ಬಾಲಾರ್ಕ ಕೋಟ್ಯಮಿತ ಜ್ಯೋತಿರ್ಮಯ ಸುಂದರನೇ
ಕಾಲಗುಣದೇಶ ಅಪರಿಚ್ಛಿನ್ನ ಪೂರ್ಣ ಸುಗುಣಾರ್ಣವನೇ ಶರಣು ll ಪ ll
ಪ್ರಳಯದಲಿ ಭೂರಾದಿ ಲೋಕಂಗಳು
ಮುಳುಗಿರಲು ಹಯಗ್ರೀವನಾಮ ದಾನವನು
ಸೆಳೆದು ವೇದಗಳ ತನ್ನೊಳ್ ಅಡಗಿಸಿದ್ದವನ
ಸೀಳ್ದಿ ನೀ ಬಂದು ವೇದೋದ್ಧರನೆ ಮತ್ಸ್ಯ ll ೧ ll
ಗೋ ವಿಪ್ರ ಸುರ ಸಾಧು ಜನರ ವೇದಂಗಳ
ಕಾವ ಸರ್ವೇಶ್ವರನೇ ಪುರುಷಾರ್ಥದಾತ
ಸರ್ವರಿಗೂ ಸುಖವೀವುದು ನಿನ್ನ ಸುಚರಿತ್ರೆ
ಶ್ರೀವರನೇ ಮತ್ಸ್ಯರೂಪಿಯೇ ಶರಣು ಶ್ರೀಕೃಷ್ಣ ll ೨ ll
ಹಂಸ ಐರಾವತ ತಿತ್ತಿರಾ ಶುಕಗಳು
ಈ ಪಕ್ಷಿಗಳಲ್ಲಿ ತರತಮ ಉಂಟು
ಸುಸುಖ ಐಶ್ವರ್ಯೋನ್ನಾಹ ಅದರಂತೇವೇ
ಈ ಸುನುಡಿಗಳ ಪಠನ ಮಾಳ್ಪ ಸುಜನರಿಗೆ ll ೩ ll
ಗುರುರ್ಗುರೋ ಗುರು ಮನು ಶುಕ ಮಧ್ವಾಂತಸ್ಥ
ಪರಮಾತ್ಮ ಹರಿ ವಿಷ್ಣೋ ಉದ್ದಾಮ ಸಾಮ
ಅರದೂರ ಅನಂತೋರು ನಿಜಶಕ್ತಿ ಪರಿಪೂರ್ಣ
ಉರು ಸುಗುಣ ನಿಧಿಯೇ ಶಫರಿರೂಪ ಮಾಂಪಾಹಿ ll ೪ ll
ಸರ್ವೋತ್ತಮ ನಾರಾಯಣನೇ ಎಂದರಿತು
ದ್ರವಿಡ ದೇಶಾಧಿಪನು ಸತ್ಯವ್ರತರಾಯ
ಸುವಿವೇಕದಿ ನಿನ್ನ ಕುರಿತು ತಪವಚರಿಸಿದನು
ಭಾವ ಶುದ್ಧನು ಸಲೀಲಾಶನ ದೃಢವ್ರತನು ll ೫ ll
ವಿವಸ್ವಾನ್ ಮಗ ಶ್ರಾದ್ಧದೇವನು ಪ್ರಖ್ಯಾತ
ವೈವಸ್ವತ ಮನುವೇ ಇಂದಿನ ಮನುವು
ಪೂರ್ವದಲಿ ಈತನೇ ಸತ್ಯವ್ರತ ಸಾಮ್ರಾಟ್
ಅವನಿಗೆ ನಮೋ ಎಂಬೆ ನಿನ್ನವನೆಂದು ll ೬ ll
ರಾಜ ಋಷಿ ಈ ಮಹಾನ್ ಕೃತಮಾಲಾ ನದಿಯಲ್ಲಿ
ನಿಜ ಭಕ್ತಿಯಿಂದ ಜಲತರ್ಪಣವ ಚರಿಸೆ
ಅಂಜಲಿ ಉದಕದಲಿ ಮುದ್ದು ಮರಿ ಮೀನೊಂದು
ಸರಿಜ್ವಲ ಸಹಿತದಿ ಬಂದದ್ದು ಕಂಡ ll ೭ ll
ಅರಸ ಕರುಣದಲಿ ಅದನು ನದಿಯಲಿ ಬಿಡಲಿರೆ
ಅರುಹಿತು ತನ್ನ ವೃತ್ತಾಂತವ ಆ ಮೀನು
ಪರಿಪರಿಯಾಗಿ ತನ್ನ ಸಜಾತೀಯರ ಭಯ ತನಗೆ ಎಂದು
ನೀರು ಪ್ರವಾಹದಲ್ಲಿ ತನ್ನ ಬಿಡಬೇಡವೆಂದು ಪ್ರಾರ್ಥಿಸಿತು ರಾಜನ್ನ ll ೮ ll
ನಾರಾಯಣಾದಿ ಸುಮಂತ್ರಿತ ಅಭಿಯಂತ್ರಿತ ತನ್ನ
ಸ್ಫುರತ್ ಕಲಶ ಕಮಂಡಲು ನೀರಲ್ಲಿ ಮೀನು ಮರಿ ಇಟ್ಟುಕೊಂಡು
ಆಶ್ರಮಕೆ ಕೃತ ಕೃತ್ಯ ಮನದಿ ರಾಜನು ಬಂದ
ಮರುದಿನ ಉದಯದಲಿ ಕಂಡ ಆಶ್ಚರ್ಯವ ll ೯ ll
ಕಮಂಡಲ ಕಲಶ ಪೂರಾವು ಏಕ ರಾತ್ರಿಯಲ್ಲೇವೇ
ಆ ಮತ್ಸ್ಯ ಮರಿ ಬೆಳೆದಿದ್ದು ಆಶ್ಚರ್ಯ ಕಂಡ
ಕಮಂಡಲು ಸಾಲದೇ ವಿಸ್ತಾರವಾದ ಸ್ಥಳ
ನಿರ್ಮಾಣ ಮಾಡಿ ನೀರು ತುಂಬಿಸಿ ಅದರೊಳ್ ಮೀನನ್ನ ಬಿಟ್ಟ ll ೧೦ ll
ಉದಕ ತುಂಬಿದ ಕುಂಟೆ ಸರೋವರವನ್ನು
ಮತ್ಸ್ಯವು ಪೂರ್ಣ ವ್ಯಾಪಿಸಿದ ಆಶ್ಚರ್ಯ
ಅತಿಶಯ ಲೀಲಾ ವಿನೋದವ ಕಂಡ ರಾಜ
ಉದಧಿಯಲಿ ಬಿಡಲು ನಿಶ್ಚಯಿಸಿ ಕ್ರಮಗೊಂಡ ll ೧೧ ll
ಮಹೋದಧಿಯಲ್ಲಿರುವ ಮಕರಾದಿಗಳು ತನ್ನ ನುಂಗುವರೆಂದು
ಮಹಾರಾಜನಿಗೆ ಆ ಮೀನು ಹೇಳಿ ತಾನು
ಆದರೂ ರಾಜನು ಅಷ್ಟರಲ್ಲೇ ಉದಧಿಯೊಳು ಬಿಟ್ಟನು
ಮೀನನ್ನು ಆಗ ದೊಡ್ಡ ಆಶ್ಚರ್ಯವೊಂದನ್ನ ಕಂಡ ಆ
ಮೀನು ಮತ್ತೂ ದೊಡ್ಡದಾಯಿತು ll ೧೨ ll
ಶತಯೋಜನ ಮಹಾವೀರ್ಯ ಜಲಚರಗಳು
ಯಾವುದೂ ಕಂಡಿಲ್ಲ ಕೇಳಿಲ್ಲ ಜಗದಿ
ಅತಿ ಅದ್ಭುತ ಮಹಾ ಮೀನರೂಪನು ಸಾಕ್ಷಾತ್
ಉದಧಿಶಾಯಿ ಶ್ರೀಮನ್ನಾರಾಯಣ ನೀ ಎಂದ ll ೧೩ ll
ಜೀವರುಗಳಿಗೆ ಅನುಗ್ರಹ ಮಾಡಲಿಕ್ಕೇವೇ
ದೇವ ನೀ ಮತ್ಸ್ಯರೂಪ ಪ್ರಕಟಿಸಿರುವಿ
ಕಾವ ಕರುಣಿಯೇ ಪುರುಷಶ್ರೇಷ್ಠ ಸರ್ವೋತ್ತಮನೇ
ಸರ್ವದಾ ನಮೋ ಜಗಜ್ಜನ್ಮಾದಿ ಕರ್ತ ll ೧೪ ll
ಶ್ರವಣ ಸಂಸ್ತುತಿಸಿ ಮನನ ಧ್ಯಾನಾದಿಗಳು ಮಾಡಿ
ಶ್ರೀವರನೇ ನಿನ್ನ ಮಹಾತ್ಮ್ಯಾ ಜ್ಞಾನ
ಪೂರ್ವಕ ನಿನ್ನಲ್ಲಿ ಸುಸ್ನೇಹರತನಾದ
ವಿವೇಕಿ ಪ್ರಪನ್ನರ ಸಲಹಿ ಗತಿ ಈವಿ ll ೧೫ ll
ಯಥಾರ್ಥ ಜ್ಞಾನವ ಭಕ್ತಿಮಾನ್ ರಾಜನು ಸ್ತುತಿಸಲು
ಮುದದಿಂದ ಇನ್ನೂನು ನಿನ್ನ
ವೃತತಿಜೇಕ್ಷಣ ಜಗತ್ಪತಿಯೇ ನೀನು ಆ
ಮತಿವಂತನಿಗೆ ಪೇಳಿದಿ ಅವತಾರಕಾರ್ಯ ll ೧೬ ll
ಏಳುದಿನವಾಗಲು ಭೂರಾದಿ ಲೋಕಗಳು
ಪ್ರಳಯಜಲದಲ್ಲಿ ಮುಳುಗಿ ಹೋಗುವವು
ಒಳ್ಳೇ ಓಷಧಿ ಸರ್ವವೀರ್ಯತರ ಬೀಜ
ಗಳ ಸಪ್ತಋಷಿ ಸಹ ಕಾದಿರು ಎಂದಿ ll ೧೭ ll
ಕಾದುಕೊಂಡು ಇರುವಾಗ ವಿಶಾಲ ನೌಕವು ಒಂದು
ಶ್ರೀದ ನೀ ಕಳುಹಿಸೆ ಜಲದ ಮೇಲ್ ಬರುವದು
ಅದರಲಿ ಆರೋಹಿಸಬೇಕು ಬೀಜಗಳ
ಸಪ್ತರುಷಿ ಸಹ ರಾಜ ಎಂದು ಬೋಧಿಸಿದಿ ll ೧೮ ll
ಎಲ್ಲೆಲ್ಲೂ ಪ್ರಳಯಜಲ ತುಂಬಿ ತುಳುಕಾಡುವುದು
ಲೋಲ್ಯಾಡುವುದು ನೌಕ ಗಾಳಿರಭಸದಲಿ
ಅಲ್ಲಿ ಸಮೀಪಿಸುವ ಮತ್ಸ್ಯರೂಪನ ನಿನ್ನ
ಹೊಳೆವ ಶೃಂಗದಿ ನಾವೆಯನು ಕಟ್ಟು ಎಂದಿ ll ೧೯ ll
ನಾವೆಯನು ಬಂಧಿಸಲು ರಜ್ಜು ಸರ್ಪವು ಎಂದು
ಸುವ್ರತ ರಾಜನಿಗೆ ಉಪಾಯ ಪೇಳಿದ
ಸರ್ವಗುಣ ಪರಿಪೂರ್ಣ ನಿರ್ದೋಷ ಪರಬ್ರಹ್ಮ
ವಿಶ್ವ ವಿಷ್ಣೋ ಸೃಷ್ಟಾ ಪಾತಾ ರಮೇಶ ll ೨೦ ll
ಈ ರೀತಿ ಆ ಮಹಾನ್ ಸತ್ಯವ್ರತ ರಾಜನಿಗೆ
ಹರಿ ನೀನು ಬೋಧಿಸಿ ಅಂತರ್ಧಾನವು ಆಗೇ
ಆ ರಾಜರುಷಿ ತಾನು ಮತ್ಸ್ಯರೂಪ ಹೃಷಿಕೇಶ
ಸಿರಿವರನೇ ನಿನ್ನನ್ನೇ ಧ್ಯಾನಿಸುತಲಿದ್ದ ll ೨೧ ll
ಯುಕ್ತ ಕಾಲವು ಬಂತು ಉಕ್ಕಿತು ಸಮುದ್ರವು
ಸುತ್ತು ಮುತ್ತು ಎಲ್ಲೂ ಪೊಕ್ಕಿತು ಭೂಮಿಯಲಿ
ಅತ್ತ ಇತ್ತ ಇಲ್ಲೂ ಸುತ್ತಿ ಸುಳಿವ ನೀರು
ಭೀತಿಕರ ನೆನೆಯಲಿಕೆ ನೋಡೆ ಮತ್ತೆಷ್ಟೋ ll ೨೨ ll
ಚಂಡಮಾರುತ ಪ್ರಚಂಡ ಮೇಘವು ಕರಿ
ಸೊಂಡಲಂತೆ ಹನಿ ಕಂಡಿಲ್ಲ ಇಂಥಾ ಮಳೆ
ಕಂಡು ನಾವೆಯ ರಾಜಕೊಂಡು ಬೀಜಗಳ ಕರ
ಕೊಂಡು ಋಷಿಗಳ ಏರಿಕೊಂಡನು ಬೇಗ ll ೨೩ ll
ಕೇಶವನೆ ನಿನ್ನ ಧ್ಯಾನಿಸಲು ಆಗ
ಕೌಶೇಯ ಶೃಂಗಿ ಮಹಾಮತ್ಸ್ಯ ನೀ ಬರಲು
ಈಶ ನಿನ್ನಯ ಶೃಂಗಕ್ಕೆ ನೌಕವ ಕಟ್ಟಿ
ಸಂಸ್ತುತಿಸಿದನು ಮಧುಸೂದನನೇ ನಿನ್ನ ll ೨೪ ll
ಶ್ರೀಭಾಗವತಾಷ್ಟಮ ತ್ರಯೋವಿಂಶತ್ ಅಧ್ಯಾಯ
ಶುಭತಯ ವಿಜ್ಞಾನ ಬೋಧಕವು ಅದರ
ಸೊಬಗರಿತು ಯೋಗ್ಯರು ಪಠಿಸೆ ಪ್ರೇರಿಸು ಸ್ವಾಮಿ
ಸೌಭಾಗ್ಯಪ್ರದ ಶ್ರೀಶ ಮಾಂಪಾಹಿ ll ೨೫ ll
ಏಕಶೃಂಗಧರ ಸ್ವರ್ಣ ಮತ್ಸ್ಯನಿಗೆ ಸರ್ಪದಿಂ
ಲಕ್ಷ ಯೋಜನೆ ಮೇಲಿನ ವಿಸ್ತಾರದಿ ಬಂಧಿಸಿದ
ಸತ್ಯವ್ರತ ರಾಜನು ಸಂತೋಷದಲಿ ಸ್ತುತಿಸಿದ
ಅನಾದಿ ಅವಿದ್ಯಾ ಪೀಡಿತ ಜನ ಸಂರಕ್ಷನ್ನ ll ೨೬ ll
ಪರಮಹಂಸನ ಮೂಲ ಗುರೋ ಲಕ್ಷ್ಮೀಹಯವದನ
ಮೇರು ಇತರಾ ದೇವಹೂತಿ ಸುತ ಶರಣು
ಘೋರ ಸಂಸಾರ ಬಂಧ ಮೋಚಕ ಹರಿಯೇ
ವರ ಸುಖಪ್ರದ ಸಂರಕ್ಷಕ ಮಾಂಪಾಹಿ ll ೨೭ ll
ಶಕ್ರಾದಿ ಜಗತ್ತಿಗೆ ಗುರು ಗಂಗಾಧರನು
ಗಂಗಾಧರನಿಗೆ ಗುರು ಪ್ರಾಣ ಪದ್ಮಜರು
ಪಂಕಜಾಸನ ಪ್ರಾಣರಿಗೆ ಗುರು ರಮೇಶನು ಹರಿಯೇ
ಆ ಗುರು ಮೂಲಗುರು ಪರಮಗುರೋರ್ಗುರುವು ll ೨೮ ll
ನಿನ್ನ ಅನುಗ್ರಹ ಹೊಂದಿದರು ನೀ ಪರಮಗುರು
ಎಂದು ತಿಳಿದು ಬದ್ಧ ಜೀವರ ಮೋಕ್ಷ ಪುರುಷಾರ್ಥ
ಅವಿದ್ಯಾಜ್ಞಾನ ಕಳೆದು ಪುಟವಿಟ್ಟ
ಸ್ವರ್ಣರಜತವೋಲ್ ಶುಚಿ ಆಗಿಸುವಿ ದಯದಿ ll ೨೯ ll
ಸರ್ವಲೋಕ ಜನರಿಗೆ ಹಿತಕರ ಸುಹೃತ್ ನೀನೇ
ಪ್ರಯೇಶ್ವರ ಆತ್ಮಾಗುರು ಜ್ಞಾನ ಅಭೀಷ್ಟಸಿದ್ಧಿಯು
ನೀ ಸುಹೃತ್ ಅಂದರೆ ಪ್ರತ್ಯುಪಕಾರ ಶೂನ್ಯನು
ಇನ್ನೂ ಬಹು ವಿಧದಿ ಪರಮಸಾಧು ಸ್ತುತಿಗೈದಿ ll ೩೦ ll
ಸರ್ವಲೋಕ ನೀನೇ ಸುಹೃತ್ ಪ್ರಯೇಶ್ವರನು
ಶರ್ವ ಅಜ ಶಕ್ರಾದಿಗಳ ನಿಯಾಮಕನು
ಸರ್ವದಾನಂದಮಯ ಗುಣನಿಧಿ ಆತ್ಮನು
ಸರ್ವಾಭೀಷ್ಟಪ್ರದ ಜ್ಞಾನಸಿದ್ಧಿದನು ll ೩೧ ll
ದೇವದೇವೋತ್ತಮನೇ ಆದಿಪೂರುಷ ಶ್ರೀಶ
ವಿಶ್ವೇಶ್ವರ ಮತ್ಸ್ಯರೂಪ ಭಗವಂತ
ನೀ ವಿಹಾರವು ಮಾಡಿ ಪ್ರಳಯಾರ್ಣವದಲಿ
ಕವಿವರ್ಯ ರಾಜನಲಿ ಸುಪ್ರೀತನಾದಿ ll ೩೨ ll
ವೇದ ಉದ್ಧರಿಸಿದಿ ಹಿಂದೆ ಅಸುರನ್ನ ಕೊಂದು
ಯುಕ್ತ ಕಾಲದಿ ಈಗ ಪ್ರಳಯವು ತೀರೆ
ಸಾಧುವರ್ಯನು ಜ್ಞಾನವಿಜ್ಞಾನ ಕೋವಿದನು
ಸತ್ಯವ್ರತನಿಗೆ ಮನು ಪದವಿಯನು ಇತ್ತಿ ll ೩೩ ll
ಮತ್ಸ್ಯಾವತಾರ ಸಂಕೀರ್ತನೆ ಮಾಳ್ಪರಿಗೆ
ಸಿದ್ಧಿ ಆಗುವುದು ಸರ್ವೇಷ್ಟ ಸದ್ಗತಿಯು
ಎಂದು ಪೇಳಿರುವಿ ಶುಕಪದ್ಮಭವಪತಿ ಶ್ರೀಶ
ಸಾತ್ಯವತಿ ಮೀನ ವೇದಪಿತ ಪ್ರಸನ್ನಶ್ರೀನಿವಾಸ ll ೩೪ ll
***
ಮತ್ಸ್ಯಾವತಾರ
ಲೀಲಾವತಾರನೇ ಪ್ರಳಯಾಬ್ದಿ ಸಂಚರನೇ
ಮಾಲೋಲ ಸುಖಚಿತ್ ತನು ಮತ್ಸ್ಯರೂಪ
ಬಾಲಾರ್ಕ ಕೋಟ್ಯಮಿತ ಜ್ಯೋತಿರ್ಮಯ ಸುಂದರನೇ
ಕಾಲಗುಣದೇಶ ಅಪರಿಚ್ಛಿನ್ನ ಪೂರ್ಣ ಸುಗುಣಾರ್ಣವನೇ ಶರಣು ಪ
ಪ್ರಳಯದಲಿ ಭೂರಾದಿ ಲೋಕಂಗಳು
ಮುಳಗಿರಲು ಹುಯಗ್ರೀವನಾಮ ದಾನವನು
ಸೆಳೆದು ವೇದಗಳ ತನ್ನೊಳ್ ಅಡಗಿಸಿದ್ದವನ
ಸೀಳ್ದಿ ನೀ ಬಂದು ವೇದೋದ್ಧರನೇ ಮತ್ಸ್ಯ 1
ಗೋ ವಿಪ್ರ ಸುರ ಸಾಧು ಜನರ ವೇದಂಗಳ -
ಕಾವ ಸರ್ವೇಶ್ವರನೇ ಪುರುಷಾರ್ಥದಾತ
ಸರ್ವರಿಗೂ ಸುಖವೀವುದು ನಿನ್ನ ಸುಚರಿತ್ರೆ
ಶ್ರೀವರನೇ ಮತ್ಸ್ಯರೂಪಿಯೇ ಶರಣು ಶ್ರೀ ಕೃಷ್ಣ 2
ಹಂಸ ಐರಾವತ ತಿತ್ತಿರಾ ಶುಕಗಳು
ಈ ಪಕ್ಷಿಗಳಲ್ಲಿ ತರತಮ ಉಂಟು
ಸುಸುಖ ಐಶ್ವರ್ಯೋನ್ನಾಹ ಅದರಂತೇವೇ
ಈ ಸುನುಡಿಗಳ ಪಠನ ಮಾಳ್ಪ ಸುಜನರಿಗೆ 3
ಗುರುರ್ಗುರ್ರೋ ಗುರು ಮನು ಶುಕ ಮಧ್ವಾಂತಸ್ಥ
ಪರಮಾತ್ಮ ಹರಿ ವಿಷ್ಣೋ ಉದ್ದಾಮ ಸಾಮ
ಅರದೂರ ಅನಂತೋರು ನಿಜಶಕ್ತಿ ಪರಿಪೂರ್ಣ
ಉರು ಸುಗುಣ ನಿಧಿಯೇ ಶಫರಿರೂಪ ಮಾಂಪಾಹಿ 4
ಸರ್ವೋತ್ತಮನು ನಾರಾಯಣನೇ ಎಂದರಿತು
ದ್ರವಿಡ ದೇಶಾಧಿಪನು ಸತ್ಯವ್ರತರಾಯ
ಸುವಿವೇಕದಿ ನಿನ್ನ ಕುರಿತು ತಪವಚರಿಸಿದನು
ಭಾವ ಶುದ್ಧನು ಸಲೀಲಾಶನ ದೃಢವ್ರತನು 5
ವಿವಸ್ವಾನ್ ಮಗ ಶ್ರಾದ್ಧದೇವನು ಪ್ರಖ್ಯಾತ
ವೈವಸ್ವತ ಮನುವೇ ಇಂದಿನ ಮನುವು
ಪೂರ್ವದಲಿ ಈತನೇ ಸತ್ಯವ್ರತ ಸಾಮ್ರಾಟ್0
ಅವನಿಗೆ ನಮೋ ಎಂಬೆ ನಿನ್ನವನೆಂದು 6
ರಾಜ ಋಷಿ ಈ ಮಹಾನ್ ಕೃತಮಾಲಾ ನದಿಯಲ್ಲಿ
ನಿಜ ಭಕ್ತಿಯಿಂದ ಜಲತರ್ಪಣವ ಚರಿಸೆ
ಅಂಜಲಿ ಉದಕದಲಿ ಮುದ್ದು ಮರಿ ಮೀನೊಂದು
ಸರಿಜ್ಜಲ ಸಹಿತದಿ ಬಂದದ್ದು ಕಂಡ 7
ಅರಸ ಕರುಣದಲಿ ಅದನು ನದಿಯಲಿ ಬಿಡಲಿರೆ
ಅರುಹಿತು ತನ್ನ ವೃತ್ತಾಂತವ ಆ ಮೀನು
ಪರಿಪರಿಯಾಗಿ ತನ್ನ ಸಜಾತೀಯರ ಭಯ ತನಗೆ ಎಂದು
ನೀರು ಪ್ರವಾಹದಲ್ಲಿ ತನ್ನ ಬಿಡಬೇಡವೆಂದು ಪ್ರಾರ್ಥಿಸಿತು ರಾಜನ್ನ 8
ನಾರಾಯಣಾದಿ ಸುಮಂತ್ರಿತ ಅಭಿಯಂತ್ರಿತ ತನ್ನ
ಸ್ಫುರತ್ ಕಲಶ ಕಮಂಡಲು ನೀರಲ್ಲಿ ಮೀನು ಮರಿ ಇಟ್ಟುಕೊಂಡು
ಆಶ್ರಮಕೆ ಕೃತ ಕೃತ್ಯ ಮನದಿ ರಾಜನು ಬಂದ
ಮರುದಿನ ಉದಯದಲಿ ಕಂಡ ಆಶ್ಚರ್ಯವ 9
ಕಮಂಡಲ ಕಲಶ ಪೂರಾವು ಏಕ ರಾತ್ರಿಯಲ್ಲೇವೇ
ಆ ಮತ್ಸ್ಯ ಮರಿ ಬೆಳೆದಿದ್ದು ಆಶ್ಚರ್ಯ ಕಂಡ
ಕಮಂಡಲು ಸಾಲದೇ ವಿಸ್ತಾರವಾದ ಸ್ಥಳ
ನಿರ್ಮಾಣ ಮಾಡಿ ನೀರು ತುಂಬಿಸಿ ಅದರೊಳ್ ಮೀನನ್ನ ಬಿಟ್ಟ 10
ಉದಕ ತುಂಬಿದ ಕುಂಟೆ ಸರೋವರವನ್ನು
ಮತ್ಸ್ಯವು ಪೂರ್ಣ ವ್ಯಾಪಿಸಿದ ಆಶ್ಚರ್ಯ
ಅತಿಶಯ ಲೀಲಾ ವಿನೋದವ ಕಂಡ ರಾಜ
ಉದಧಿಯಲಿ ಬಿಡಲು ನಿಶ್ಚಯಿಸಿ ಕ್ರಮಗೊಂಡ 11
ಮಹೋದಧಿಯಲ್ಲಿರುವ ಮಕರಾದಿಗಳು ತನ್ನ ನುಂಗುವನೆಂದು
ಮಹಾರಾಜನಿಗೆ ಆ ಮೀನು ಹೇಳಿ ತಾನು
ಆದರೂ ರಾಜನು ಅಷ್ಟರಲ್ಲೇ ಉದಧಿಯೊಳು ಬಿಟ್ಟನು
ಮೀನನ್ನು ಆಗ ದೊಡ್ಡ ಆಶ್ಚರ್ಯವೊಂದನ್ನ ಕಂಡ ಆ
ಮೀನು ಮತ್ತೂ ದೊಡ್ಡದಾಯಿತು 12
ಶತಯೋಜನ ಮಹಾವೀರ್ಯ ಜಲಚರಗಳು
ಯಾವುದೂ ಕಂಡಿಲ್ಲ ಕೇಳಿಲ್ಲ ಜಗದಿ
ಅತಿ ಅದ್ಭುತ ಮಹಾ ಮೀನರೂಪನು ಸಾಕ್ಷಾತ್
ಉದಧಿಶಾಯಿ ಶ್ರೀಮನ್ನಾರಾಯಣ ನೀ ಎಂದ 13
ಜೀವರುಗಳಿಗೆ ಅನುಗ್ರಹ ಮಾಡಲಿಕ್ಕೇವೇ
ದೇವ ನೀ ಮತ್ಸ್ಯರೂಪ ಪ್ರಕಟಿಸಿರುವಿ
ಕಾವ ಕಾರುಣಿಯೇ ಪುರುಷಶ್ರೇಷ್ಠ ಸರ್ವೋತ್ತಮನೇ
ಸರ್ವದಾ ನಮೋ ಜಗಜ್ಜ£್ಮÁಧಿ ಕರ್ತ 14
ಶ್ರವಣ ಸಂಸ್ತುತಿಸಿ ಮನನ ಧ್ಯಾನಾದಿಗಳು ಮಾಡಿ
ಶ್ರೀವರನೇ ನಿನ್ನ ಮಹಾತ್ಮ್ಯಾ ಜ್ಞಾನ
ಪೂರ್ವಕ ನಿನ್ನಲ್ಲಿ ಸುಸ್ನೇಹರತನಾದ
ವಿವೇಕಿ ಪ್ರಪನ್ನರ ಸಲಹಿ ಗತಿ ಈವಿ 15
ಯಥಾರ್ಥ ಜ್ಞಾನವ ಭಕ್ತಿಮಾನ್ ರಾಜನು ಸ್ತುತಿಸಲು
ಮುದದಿಂದ ಇನ್ನೂನು ನಿನ್ನ
ವೃತತಿಜೇಕ್ಷಣ ಜಗತ್ಪತಿಯೇ ನೀನು ಆ
ಮತಿವಂತನಿಗೆ ಪೇಳಿದಿ ಅವತಾರಕಾರ್ಯ 16
ಏಳುದಿನವಾಗಲು ಭೂರಾದಿ ಲೋಕಗಳು
ಪ್ರಳಯಜಲದಲ್ಲಿ ಮುಳುಗಿ ಹೋಗುವವು
ಒಳ್ಳೇ ಓಷಧಿ ಸರ್ವವೀರ್ಯತರ ಬೀಜ -
ಗಳ ಸಪ್ತಋಷಿ ಸಹ ಕಾದಿರು ಎಂದಿ 17
ಕಾದುಕೊಂಡು ಇರುವಾಗ ವಿಶಾಲ ನೌಕವು ಒಂದು
ಶ್ರೀದ ನೀ ಕಳುಹಿಸೆ ಜಲದ ಮೇಲ್ ಬರುವದು
ಅದರಲಿ ಅರೋಹಿಸಬೇಕು ಬೀಜಗಳ
ಸಪ್ತಋಷಿ ಸಹ ರಾಜ ಎಂದು ಬೋಧಿಸಿದಿ 18
ಎಲ್ಲೆಲ್ಲೂ ಪ್ರಳಯಜಲ ತುಂಬಿ ತುಳಕಾಡುವುದು
ಲೋಲ್ಯಾಡುವುದು ನೌಕ ಗಾಳಿರಭಸದಲಿ
ಅಲ್ಲಿ ಸಮೀಪಿಸುವ ಮತ್ಸ್ಯರೂಪನ ನಿನ್ನ
ಹೊಳೆವ ಶೃಂಗದಿ ನಾವೆಯನು ಕಟ್ಟು ಎಂದಿ 19
ನಾವೆಯನು ಬಂಧಿಸಲು ರಜ್ಜು ಸರ್ಪವು ಎಂದು
ಸುವ್ರತ ರಾಜನಿಗೆ ಉಪಾಯ ಪೇಳಿದ
ಸರ್ವಗುಣ ಪರಿಪೂರ್ಣ ನಿರ್ದೋಷ ಪರಬ್ರಹ್ಮ
ವಿಶ್ವ ವಿಷ್ಣೋ ಸೃಷ್ಟಾ ಪಾತಾ ರಮೇಶ 20
ಈ ರೀತಿ ಆ ಮಹಾನ್ ಸತ್ಯವ್ರತರಾಜನಿಗೆ
ಹರಿ ನೀನು ಬೋಧಿಸಿ ಅಂತರ್ಧಾನವು ಆಗೇ
ಆ ರಾಜಋಷಿ ತಾನು ಮತ್ಸ್ಯರೂಪ ಹೈಷಿಕೇಶ
ಸಿರಿವರನೇ ನಿನ್ನನ್ನೇ ಧ್ಯಾನಿಸುತಲಿದ್ದ 21
ಯುಕ್ತ ಕಾಲವು ಬಂತು ಉಕ್ಕಿತು ಸಮುದ್ರವು
ಸುತ್ತು ಮುತ್ತು ಎಲ್ಲೂ ಪೊಕ್ಕಿತು ಭೂಮಿಯಲಿ
ಅತ್ತ ಇತ್ತ ಇಲ್ಲೂ ಸುತ್ತಿ ಸುಳಿವ ನೀರು
ಭೀತಿಕರ ನೆನೆಯಲಿಕೆ ನೋಡೆ ಮತ್ತೆಷ್ಟೋ 22
ಚಂಡಮಾರುತ ಪ್ರಚಂಡ ಮೇಘವು ಕರಿ
ಸೊಂಡಲಂತೆ ಹನಿ ಕಂಡಿಲ್ಲ ಇಂಥಾ ಮಳೆ
ಕಂಡು ನಾವೆಯ ರಾಜಕೊಂಡು ಬೀಜಗಳ ಕರ
ಕೊಂಡು ಋಷಿಗಳ ಏರಿಕೊಂಡನು ಬೇಗ 23
ಕೇಶವನೇ ನಿನ್ನ ಧ್ಯಾನಿಸಲು ಆಗ
ಕೌಶೇಯ ಶೃಂಗಿ ಮಹಾಮತ್ಸ್ಯ ನೀ ಬರಲು
ಈಶ ನಿನ್ನಯ ಶೃಂಗಕ್ಕೆ ನೌಕವ ಕಟ್ಟಿ
ಸಂಸ್ತುತಿಸಿದನು ಮಧುಸೂಧನನೇ ನಿನ್ನ 24
ಶ್ರೀ ಭಾಗವತಾಷ್ಟಮ ತ್ರಯೋವಿಂಶತ್ ಅಧ್ಯಾಯ
ಶುಭತಯ ವಿಜ್ಞಾನ ಬೋಧಕವು ಅದರ
ಸೊಬಗರಿತು ಯೋಗ್ಯರು ಪಠಿಸೆ ಪ್ರೇರಿಸು ಸ್ವಾಮಿ
ಸೌಭಾಗ್ಯಪ್ರದ ಶ್ರೀಶ ಮಾಂಪಾಹಿ 25
ಏಕಶೃಂಗಧರ ಸ್ವರ್ಣ ಮತ್ಸ್ಯನಿಗೆ ಸರ್ಪದಿಂ
ಲಕ್ಷ ಯೋಜನೆ ಮೇಲಿನ ವಿಸ್ತಾರದಿ ಬಂಧಿಸಿದ
ಸತ್ಯವ್ರತ ರಾಜನು ಸಂತೋಷದಲಿ ಸ್ತುತಿಸಿದ
ಅನಾದಿ ಅವಿದ್ಯಾ ಪೀಡಿತ ಜನ ಸಂರಕ್ಷನ್ನ 26
ಪರಮಹಂಸನ ಮೂಲ ಗುರೋ ಲಕ್ಷ್ಮೀಹಯವದನ
ಮೇರು ಇತರಾ ದೇವಹೂತಿ - ಸುತ ಶರಣು
ಘೋರ ಸಂಸಾರ ಬಂಧ ಮೋಚಕ ಹರಿಯೇ
ವರ ಸುಖಪ್ರದ ಸಂರಕ್ಷಕ ಮಾಂಪಾಹಿ 27
ಶಕ್ರಾದಿ ಜಗತ್ತಿಗೆ ಗುರು ಗಂಗಾಧರನು
ಗಂಗಾಧರನಿಗೆ ಗುರು ಪ್ರಾಣ ಪದ್ಮಜರು
ಪಂಕಜಾಸನ ಪ್ರಾಣರಿಗೆ ಗುರು ರಮೇಶನು ಹರಿಯೇ
ಆ ಗುರು ಮೂಲಗುರು ಪರಮಗುರ್ರೋಗುರುವು 28
ನಿನ್ನ ಅನುಗ್ರಹ ಹೊಂದಿದರು ನೀ ಪರಮಗುರು
ಎಂದು ತಿಳಿದು ಬದ್ಧ ಜೀವರ ಮೋಕ್ಷ ಪುರುಷಾರ್ಥ
ಅವಿದ್ಯಾsಜ್ಞಾನ ಕಳೆದು ಪುಟವಿಟ್ಟ
ಸ್ವರ್ಣರಜತಪೋಲ್ ಶುಚಿ ಆಗಿಸುವಿ ದಯದಿ 29
ಸರ್ವಲೋಕ ಜನರಿಗೆ ಹಿತಕರ ಸುಹೃತ್ ನೀನೇ
ಪ್ರಯೇಶ್ವರ ಆತ್ಮಾಗುರುಜ್ಞಾನ ಅಭೀಷ್ಟಸಿದ್ಧಿಯು
ನೀ ಸುಹೃತ್ ಅಂದರೆ ಪ್ರತ್ಯುಪಕಾರ ಶೂನ್ಯನು
ಇನ್ನೂ ಬಹು ವಿಧದಿ ಪರಮಸಾಧು ಸ್ತುತಿಗೈದಿ 30
ಸರ್ವಲೋಕಕೆ ನೀನೇ ಸುಹೃತ್ ಪ್ರಯೇಶ್ವರನು
ಶರ್ವ ಅಜ ಶಕ್ರಾದಿಗಳ ನಿಯಾಮಕನು
ಸರ್ವಾದಾನಂದಮಯ ಗುಣನಿಧಿ ಆತ್ಮನು
ಸರ್ವಾಭೀಷ್ಟಪ್ರದ ಜ್ಞಾನಸಿದ್ಧಿದನು 31
ದೇವದೇವೋತ್ತಮನೇ ಆದಿಪೂರುಷ ಶ್ರೀಶ
ವಿಶ್ವೇಶ್ವರ ಮತ್ಸ್ಯರೂಪ ಭಗವಂತ
ನೀ ವಿಹಾರವು ಮಾಡಿ ಪ್ರಳಯಾರ್ಣವದಲಿ
ಕವಿವರ್ಯ ರಾಜನಲಿ ಸುಪ್ರೀತನಾದಿ 32
ವೇದ ಉದ್ಧರಿಸಿದಿ ಹಿಂದೆ ಅಸುರನ್ನ ಕೊಂದು
ಯುಕ್ತ ಕಾಲದಿ ಈಗ ಪ್ರಳಯವು ತೀರೆ
ಸಾಧುವರ್ಯನು ಜ್ಞಾನವಿಜ್ಞಾನ ಕೋವಿದನು
ಸತ್ಯವ್ರತನಿಗೆ ಮನು ಪದವಿಯನು ಇತ್ತಿ 33
ಮತ್ಸ್ಯಾವತಾರ ಸಂಕೀರ್ತನೆ ಮಾಳ್ಪರಿಗೆ
ಸಿಧ್ಧಿ ಆಗುವುದು ಸರ್ವೇಷ್ಟ ಸದ್ಗತಿಯು
ಎಂದು ಪೇಳಿರುವಿ ಶುಕಪದ್ಮಭವಪತಿ ಶ್ರೀಶ
ಸಾತ್ಯವತಿ ಮೀನ ವೇಧಪಿತ ಪ್ರಸನ್ನ ಶ್ರೀನಿವಾಸ 34
- ಇತಿ ಶ್ರೀ ಮತ್ಸ್ಯಾವತಾರ ಸಂಪೂರ್ಣಂ -
***