Showing posts with label ಎನ್ನನುದ್ದರಿಸು ಗುರು ರನ್ನ ಮಹಿಪತಿದೇವ gurumahipati. Show all posts
Showing posts with label ಎನ್ನನುದ್ದರಿಸು ಗುರು ರನ್ನ ಮಹಿಪತಿದೇವ gurumahipati. Show all posts

Wednesday, 1 September 2021

ಎನ್ನನುದ್ದರಿಸು ಗುರು ರನ್ನ ಮಹಿಪತಿದೇವ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಎನ್ನನುದ್ದರಿಸು ಗುರು ರನ್ನ ಮಹಿಪತಿದೇವ | ಚಿನ್ನನೆನುತಲಿ ಬಿಡದೆ ಘನ್ನ ದಯ ಮಳೆಗರೆದು | ಮುನ್ನಿನಪರಾಧಗಳನಿನ್ನು ಕ್ಷಮೆಯನು ಮಾಡಿ | ನಿನ್ನ ಸ್ಮರಣೆಯೊಳಿಪ್ಪ ಸನ್ಮತಿಯನಿತ್ತು 1 

ನಿಚ್ಚಳದ ಪದಗಳಿಗೆ ಮುಚ್ಚಗೊಳ್ಳದೆ ನಿನ್ನ | ಎಚ್ಚರಿಕೆಯನು ತೊರೆದು ಬೆಚ್ಚಿ ಬೆದರುತೆ ವಿಷಯ | ಕಚ್ಚಿ ಬಳಲುವ ಈ ಹುಚ್ಚು ಮನಸ್ಸಿಗೆ ನೀ | ನಿಚ್ಚಟದರಹು ಕೊಟ್ಟು ನಿಶ್ಚಲದಲಿ ಸಲುಹು2 

ಕುಂಭಿನಿಲಿ ಧೇನು ಬಸಿರಿಂ ಬಂದ ಕರುವಿಂಗೆ | ಹಂಬಲಿಸಿ ತಿರು ತಿರುಗಿ ಬೆಂಬಿಡದೆ ಬಪ್ಪಂತೆ | ಇಂಬಾಗಿ ಎನಗ ಕರುಣಾಂಬಕದಿ ನೋಡಿ ನೀ | ಸಂಬಾಳಿಸೈ ಕೃಷ್ಣನೆಂಬವನ ಸ್ವಾಮೀ3

***