Showing posts with label ಮುಟ್ಟದಿರಿಗೋಪವನಿತೆಯರು ಗಲಭೆಯದೇನುತೊಲಗಿರೇ vaikunta vittala. Show all posts
Showing posts with label ಮುಟ್ಟದಿರಿಗೋಪವನಿತೆಯರು ಗಲಭೆಯದೇನುತೊಲಗಿರೇ vaikunta vittala. Show all posts

Sunday, 1 August 2021

ಮುಟ್ಟದಿರಿಗೋಪವನಿತೆಯರು ಗಲಭೆಯದೇನುತೊಲಗಿರೇ ankita vaikunta vittala

..

kruti by ಬೇಲೂರು ವೈಕುಂಠ ದಾಸರು belur vaikunta dasaru


ಮುಟ್ಟದಿರಿಗೋಪವನಿತೆಯರು ಗಲಭೆಯದೇನುತೊಲಗಿರೇ

ತೊಟ್ಟಿಲಂ ತೂಗದಿರಿ ಕೃಷ್ಣನೆದ್ದರೆ ಕಾಡದಿರನೆನ್ನಾ ಪ


ಮಿಸುನಿದೊಟ್ಟಿಲೊಳಂತೆ ದುಪ್ಪದುಪ್ಪಳಿನ ಹಾಸಿನಲಿ ಮಂದಾರ

ಕುಸುಮಗಳ ಜಾಜಿ ಮಲ್ಲಿಗೆ ಸೇವಂತಿಗೆ ಪಂಕೇರುಹದಾ

ಎಸಳುಗಳ ಪಸರಿಸಿಯೆ ಮಲಗಿಸಿದೆ ಪಾಲೆರದು ಮೊಲೆಯೂಡಿ

ಪೀತಾಂಬರವನೆ ಹೊದ್ದಿಸೀ |

ಹಸುಳೆಯನಮಲ ಕೋಮಲಾಂಗನನಂಗಕೋಟಿಗಳ ನಾ

ಚಿಸಿ ಚಿತ್ತಿನ ಪುತ್ಥಳಿಯ ಸಚ್ಚಿದಾನಂದ ಮೂರುತಿಯಾ

ಬಿಸಜಾಕ್ಷನಂ ಕೃಷ್ಣನಂ ಬಲದೇವಸಹಜಾತನಂ

ಕುಸುಮನಾಭನಂ ಜಲದನೀಲನಂ ದಿವಿಜಪಾಲನಂ 1


ಬಿಡದೆತ್ತಿ ಮುಂಡಾಡಿ ಮುದ್ದಿಟ್ಟು ತಕ್ಕೈಸಿ ಕುಚಂಗಳೋಳ್

ಬಿಡದೊತ್ತಿಯಪ್ಪಿ ಪರಮಾನಂದ ಜಲಧಿಯೊಳಗೋಲಾಡಿ

ವೊಡನೊಡನೆ ಸಿರಿಮೊಗವ ನೋಡಿ ನೋಡಿಯುನಿಮ್ಮ ಚಿತ್ತಕ್ಕೆ

ಸಂತುಷ್ಟಿಯಿಲ್ಲವಲ್ಲಾ

ಒಡೆಯನೋ [ಇವ]ಯೆಮ್ಮೊಡನೆ ಪೊಡವಿಗೆ ಜೀವಂಗಳಿಗೆ

ಒಡೆಯನೆಂಬಿರಿ ಪರಲೋಕದಾನಂದಕ್ಕೆ

ಒಡೆಯನೇ ನಿಮಗೆನ್ನ ಕಂದ ಮುದ್ದು ಭಾಗ್ಯದ ಬೆಳಸು

ಮಡಗಿ ತೊಟ್ಟಿಲೊಳಚ್ಯುತನನಂತನಂ ಮುಕುಂದನ 2


ನೋಡಲಿಹೆವೆಂತು ಲಾವಣ್ಯಸಿಂಧುವನೊಲಿದು ಸರವೆತ್ತಿ

ಪಾಡದಿಹೆವೆಂತು ಶ್ರುತಿಕೋಟಿಧನ್ಯಾತೀತಲೋಲನಂ

ಬೇಡದಿಹೆವೆಂತು ಕರಚರಣಮಂ ಪಡೆದ

ಚಿಂತಾಮಣಿಯೆಂದು ಬಾಕುಳಿಯಾದಿರೀ

ನಾಡ ಹೆಂಗಳ ದೃಷ್ಟಿದೋಷದಿಂ ಪಾಲ್ಗುಡಿದು ನಲವಿಂದ

ಲಾಡಲೊಲ್ಲನು ವಸುಂಧರೆಯ ತೊಟ್ಟಿಲಶಿಶುಗಳಂದದಿ ಮೊಲೆಯ

ನೂಡಿದರೆ ಬಾಯ್ದೆರೆಯಲೊಲ್ಲ ಮಂತ್ರದಿಯಂತ್ರದಿಂದೊಮ್ಮೆ

ಯೂಡಿ ಮಲಗಿಸಿದೆ ವಿಶ್ವನಂ ತ್ರೈಜಗಪ್ರಾಜ್ಞಮೂರುತಿಯಂ3


ರವಿಯಹುದು ಬಿಸಿಗದಿರದೆಲ್ಲಿ ಚಂದಿರನಹುದು ಹಿಮವೆಲ್ಲಿ

ಸವಿಲ್ಲದೆಲ್ಲಿ ಮನ್ಮಥನಹುದು ಸರಸಿಜನಹುದು ಕಮಲಾಸ

ನವದೆಲ್ಲಿ ಇಂದುಧರನಹುದು ಫಣೆಗಣ್ಣೆಲ್ಲಿಯೆಂದು ಬರಿದೇಕೆ ಮರುಳಾಗುವಿರಿ

ಅವಿರಳನದ್ವಯನನಾದಿಮಧ್ಯಾಂತರಹಿತನ ಧರ್ಮಸ್ಥಾಪನಾಚಾರ್ಯ

ನ[ವಂ] ಮಹೀಭಾರವ ತವಿಸಲೆಂದವÀತರಿಸೆ ಜನನವಂ ಪಡೆದ ತಂದೆಯಂ

ಭುವನಪಾವನ ಸುಪ್ರಗಧಾಮೂರ್ತಿಯಂ ಶ್ರವಣಮಂಗಳಸತ್ಕೀರ್ತಿಯಂ4


ನಿಗಮವೀ ಹರಿಯ ಮಹಿಮಾ ಸಮುದ್ರದ ತಡಿಯ ತೆರೆಗಳಲಿ

ಮಿಗೆ ಸಿಲುಕಿ ಮುಳುಗಲರಿಯದೆ ಬೀಳುತೇಳುತಾಳುತಲಿವೇಕೋ

ಮೊಗನಾಲ್ಕನಯ್ಯನ ಸಾಸಿರದೈವವಂ ಪಡೆದ ತಂದೆಯಂಅದೆಂತಲೆಂದಾರರಿವರೂ

ಸುಗುಣ ಸರ್ವಜ್ಞನಂ ಸರ್ವಭೂತರಾತ್ಮಕನಂ

ಜಗದೊಳ್ ಹೊರಗೆ ಪೂರ್ಣನಾಗಿ ಭುವನವ ಜಠರದೊಳಗಿಟ್ಟ

ಅಗಣಿತನ ವೈಕುಂಠ ಪತಿಯ ಘನತೆಯನರಿತು ಪೊಗಳುವರೇ

ಮುಗುದೆಯರು ನೀವೆತ್ತ ಮಾಯೆಯ ಕುಣಿಸಿ ನಗುವ ಹರಿಯೆತ್ತಾ 5

***