ರಾಗ ಕನ್ನಡಕಾಂಭೋಜ ಏಕತಾಳ
ನೋಡೆ ಗೋಪಿ ನೋಡೆ
ಗಾಡಿಗಾರ ಕೃಷ್ಣನ ದುಡುಕು
ಮಾಡುವ ಮಾಟಂಗಳೆಲ್ಲ ||ಪ||
ಅಡಿಗಡಿಗೆ ಮಡದಿಯರುಟ್ಟಿರುವ
ಬಿಡದೆ ನಿರಿಗಳ ಮೆಲ್ಲನೆ ಹರಡುವ
ಜಡಿಜಡಿದುಡಿಯ ಮೇಲಿಹೋ ಮಕ್ಕಳ
ಕೆಡಹಿ ತೊರೆದ ಮೊಲೆಗಳನುಂಬವನ ||
ಏನೆಂದಳದಿರೋ ಕೃಷ್ಣಾ ಎಂದು
ಮಾನವ ಕೈಯಲಿ ಕೊಟ್ಟರಂಜಿಸೆ
ಆನೆಯ ಕಂಡು ತಾನಳುತಿಹನು
ಮನದೊಳಾನೆಯ ಹೋಗಿಸಿ ಕೊಡೆಂಬನು ||
ಚಿನ್ನ ಹಕ್ಕಿಯ ನಿಲಬೇಕೆಂದು
ಕನ್ನಡಿ ಕೈಯಲಿ ಕೊಟ್ಟು ರಂಜಿಸೆ
ತನ್ನೊಳು ತಾನೆ ಪ್ರತಿಫಲಿಸಲು
ಚಿನ್ನನ ಕರೆದು ಕೊಡೇನೆಂಬನು ||
ಹರಿವೋ ಹಾವು ಉರಿವಾ ಕಿಚ್ಚು
ಸೆರಗಿಲಿ ತಂದು ಕಟ್ಟಿ ಕೊಡೆಂಬನು
ಕರುವೆಂದು ಕರಡಿಯನೇ ತಂದು
ತುರುಗಳ ಮೊಲೆಗಳನುಣಿಸಿ ಕೊಡೆಂಬನು ||
ಇಂಥಾ ಲಕ್ಷ್ಮೀಕಾಂತನ ನೋಡಿ
ಕಾಂತೆಯರೆಲ್ಲರು ಕಾಡುತಲಿಪ್ಪರು
ಸಂತತ ವರದ ಪುರಂದರವಿಠಲ
ಎಂತಾಡಿಸಲಂತಾಡುವ ರಂಗನ ||
***
ನೋಡೆ ಗೋಪಿ ನೋಡೆ
ಗಾಡಿಗಾರ ಕೃಷ್ಣನ ದುಡುಕು
ಮಾಡುವ ಮಾಟಂಗಳೆಲ್ಲ ||ಪ||
ಅಡಿಗಡಿಗೆ ಮಡದಿಯರುಟ್ಟಿರುವ
ಬಿಡದೆ ನಿರಿಗಳ ಮೆಲ್ಲನೆ ಹರಡುವ
ಜಡಿಜಡಿದುಡಿಯ ಮೇಲಿಹೋ ಮಕ್ಕಳ
ಕೆಡಹಿ ತೊರೆದ ಮೊಲೆಗಳನುಂಬವನ ||
ಏನೆಂದಳದಿರೋ ಕೃಷ್ಣಾ ಎಂದು
ಮಾನವ ಕೈಯಲಿ ಕೊಟ್ಟರಂಜಿಸೆ
ಆನೆಯ ಕಂಡು ತಾನಳುತಿಹನು
ಮನದೊಳಾನೆಯ ಹೋಗಿಸಿ ಕೊಡೆಂಬನು ||
ಚಿನ್ನ ಹಕ್ಕಿಯ ನಿಲಬೇಕೆಂದು
ಕನ್ನಡಿ ಕೈಯಲಿ ಕೊಟ್ಟು ರಂಜಿಸೆ
ತನ್ನೊಳು ತಾನೆ ಪ್ರತಿಫಲಿಸಲು
ಚಿನ್ನನ ಕರೆದು ಕೊಡೇನೆಂಬನು ||
ಹರಿವೋ ಹಾವು ಉರಿವಾ ಕಿಚ್ಚು
ಸೆರಗಿಲಿ ತಂದು ಕಟ್ಟಿ ಕೊಡೆಂಬನು
ಕರುವೆಂದು ಕರಡಿಯನೇ ತಂದು
ತುರುಗಳ ಮೊಲೆಗಳನುಣಿಸಿ ಕೊಡೆಂಬನು ||
ಇಂಥಾ ಲಕ್ಷ್ಮೀಕಾಂತನ ನೋಡಿ
ಕಾಂತೆಯರೆಲ್ಲರು ಕಾಡುತಲಿಪ್ಪರು
ಸಂತತ ವರದ ಪುರಂದರವಿಠಲ
ಎಂತಾಡಿಸಲಂತಾಡುವ ರಂಗನ ||
***
pallavi
nODe gOpi nODe gADgAra krSNana duDuku mADuva mATangaLella
caraNam 1
aDigaDige maDadiyaruTTiruva biDade narigaLa mellane haraDuva
jaDijaDiduDiya mElihO makkaLa keDahi toreda molegaLanumbavana
caraNam 2
EnendaLadirO krSNA endu mAnava kaiyali koTTaranjise
Aneya kaNDu tAnaLutihanu mAnadoLaneya hOgili koDembanu
caraNam 3
cinna hakkiya nila bEkendu kannaDi kaiyali koTTu ranjise
tannoLu tAne pratibhalisalu cinnana karedu koDEnembanu
caraNam 4
harivO hAvu urivA kiccu seragili tandu kaTTi koDEmbanu
karuvendu karaDiyane tandu turugaLa molegaLanuNisi koDembanu
caraNam 5
inthA lakSmIkAntana nODi kAnteyarellaru kADutalipparu
santata varada purandara viTTala entADisalantADuva rangana
***