..
ಕಮಲಾಲಯ ಕೈಹಿಡಿದೆನ್ನ ಪಾಲಿಸುಮುನ್ನ ಕರುಣ ಕಟಾಕ್ಷದಿ ಎನ್ನಕಮಲಾಲಯ ಪ
ಸ್ವಾಮಿ ಭೃತ್ಯನ್ಯಾಯ ಅರಿಯದೆ ನಾ ನಿನ್ನಪರವÀು ಪಾಮರನೆಂದು ನುಡಿದೆನು ಪರಮ ಪಾಮರನೆಂದು ನುಡಿದ ಅಪರಾಧವ ಸ್ವಾಮಿ ಚಿತ್ತದಲೆ ಹಿಡಿಬ್ಯಾಡ 1
ಗುಣನಿಧಿ ನೀ ಎಂದು ಗುಣಕೆ ಕೀರ್ತನೆ ಗೈದೆಎಣಿಸದಿರೆನ್ನ ಅಪರಾಧಎಣಿಸದಿರೆನ್ನ ಅಪರಾಧ ಎನುತಲೆ ಮಣಿದು ಸಾಷ್ಟಾಂಗ ಕ್ಕೆರಗಿದಳು2
ನಿನ್ನವರ ಅಪರಾಧ ಇನ್ನೇನು ನೋಡದೆಮನ್ನಿಸ ಬೇಕೊ ಕಮಲಾಕ್ಷಮನ್ನಿಸ ಬೇಕೊ ಕಮಲಾಕ್ಷ ಎನುತಲಿ ಕನಿದ್ರೌಪತಿ ನುಡಿದಳು3
ಬಡನಡ ಬಳಕುತ ಕುಚಗಳಲ್ಲಾ ಡುತ ಮುಡಿದಿದ್ದ ಪುಷ್ಪ ಉದುರುತಮುಡಿದಿದ್ದ ಪುಷ್ಪ ಉದುರುತ ಸುಭದ್ರೆಅಣ್ಣನ ಅಡಿಗೆರಗಿದಳು4
ಹೆಣ್ಣು ಕೊಟ್ಟ ಮ್ಯಾಲೆ ಹಿತವ ಚಿಂತಿಸಬೇಕು ಇನ್ನು ನುಡಿದಲ್ಲಿ ಫಲವೇನೊಇನ್ನು ನುಡಿದಲ್ಲಿ ಫಲವೇನೊ ಅಣ್ಣಯ್ಯಎನ್ನ ಮುಖವ ನೋಡಿ ಕರುಣಿಸೊ 5
ಎನ್ನವ್ವ ಸುಭದ್ರಾ ಈ ನುಡಿನಿನಗ್ಯಾಕೆ ನೀನು ನಿಮ್ಮಿಂದ ನಿಮ್ಮವರುನೀನು ನಿಮ್ಮಿಂದ ನಿಮ್ಮವರಿಗೆ ಪ್ರಾಣವ ನಾನು ಕೊಡುವೆನು 6
ಮೊದಲೆ ಅತ್ತೆಯ ಮಗ ಆದರದಿಂದ ನಿನ್ನ ಕೊಟ್ಟೆ ಹೆದರೋನೆ ಅವನು ನಮಗಿನ್ನುಹೆದರೋನೆ ಅವನು ನಮಗಿನ್ನು ಎನುತಲೆಮುದದಿ ರಾಮೇಶ ನುಡಿದನು7
****