Showing posts with label ಅರ್ತುಕೊಳ್ಳಿರಯ್ಯ ನೀವು ಹರಿಯ ನಾಮಾಮೃತ mahipati ARTUKOLLIRAYYA NEEVU HARIYA NAAMAAMRUTA. Show all posts
Showing posts with label ಅರ್ತುಕೊಳ್ಳಿರಯ್ಯ ನೀವು ಹರಿಯ ನಾಮಾಮೃತ mahipati ARTUKOLLIRAYYA NEEVU HARIYA NAAMAAMRUTA. Show all posts

Thursday, 2 December 2021

ಅರ್ತುಕೊಳ್ಳಿರಯ್ಯ ನೀವು ಹರಿಯ ನಾಮಾಮೃತ ankita mahipati ARTUKOLLIRAYYA NEEVU HARIYA NAAMAAMRUTA



ಅರ್ತುಕೊಳ್ಳಿರಯ್ಯ ನೀವು ಹರಿಯ ನಾಮಾಮೃತ
ಗುರ್ತು ಮಾಡಿಕೊಡುವ ಪೂರ್ಣ ಸದ್ಗುರು ಸಮರ್ಥ ||ಧ್ರುವ||

ಒಳ್ಳೆ ಒಳ್ಳೆ ವರು ಬಂದು ಕೇಳಿರೋ ನೀವಿನ್ನು
ತಿಳಿದುಕೊಳ್ಳಿ ಇದಕೆ ಬೀಳುವುದಿಲ್ಲಾ ಹಣಹೊನ್ನು
ಉಳ್ಳ ಬುದ್ಧಿಯಿಂದ ನೀವು ತೆರೆದು ನೋಡಿ ಕಣ್ಣು
ಕೊಳ್ಳಲರಿಯದವನ ಬಾಯಾಗ ಬೀಳುದು ಮಣ್ಣು ||೧||

ಬ್ರಹ್ಮಸುಖ ಇದೇ ಇದೇ ನೋಡಿರೋ ಸಾಕ್ಷಾತ
ಸಮ್ಯಕ್ ಜ್ಞಾನ ಪ್ಯಾಟಿಯೊಳು ತುಂಬಿ ತುಳುಕುತ್ತ
ಒಮ್ಮನ ಮಾಡಿಕೊಂಡು ಬಂದು ಕೊಳ್ಯಮೃತ
ನೇಮದಿಂದ ಕೊಳ್ಳಲಿಕ್ಕೆ ದೋರುದು ಸ್ವಹಿತ ||೨||

ಇಹಪರ ಸಾರ್ಥಕಿದೆ ಕೇಳಿರೊ ನೀವೆಲ್ಲ
ದೇಹ ಅಭಿಮಾನಿಗಿದು ಸಾಧ್ಯವಾಗುವುದಲ್ಲ
ಸೋಹ್ಯವರಿತು ಸೂರೆಗೊಂಡ ಮಹಿಮ ತಾ ಬಲ್ಲ
ಗುಹ್ಯವಾಕ್ಯ ತಿಳಿದು ನೋಡಿ ಮಹಿಪತಿ ಸೊಲ್ಲ ||೩||
***

ರಾಗ ಕೇರವಾ ತಾಳ (raga tala may differ in audio)