by ಪ್ರಸನ್ನವೆಂಕಟದಾಸರು
ಆ ಸುಖ ಹರಿಮರೆದವಗಯ್ಯ
ದೋಷಾಂಧಃತಮದೊಳಗೇನು ಸುಖ ಪ.
ಕಂಠತ ವ್ಯಸನ ಹೊಲಬಿಲ್ಲದೆ
ಧರ್ಮಕಂಟಕಶಾಸ್ತ್ರವಿಚಾರಕಗೆ
ಎಂಟುವೃಷಭಹೂಡಿ ಮಹಾಶ್ರಮಿಸಿ
ಬರೆದಂಟು ಬೆಳೆದವನಿಗೇನು ಸುಖ 1
ಅನಿರುದ್ಧಗಖಿಳವರ್ಪಿಸಿದಾನಲ್ಪಗುಣದೆ
ಮತಿ ದೃಢವಿಲ್ಲದ ಮಾನವಗೆಹಣ ವೆಚ್ಚಿಸಿ
ರಿಣದೆಗೆದಿಟ್ಟ ಧಾನ್ಯವತೃಣಸಮ
ವಿಕ್ರಿಸಲೇನು ಸುಖ 2
ಶಂಖಪಾಣಿಯ ನಿಂದಿಸಿ ಕರ್ಮಶಕ್ತಿಯಶಂಕರ
ರವಿಗಣೋಪಾಸಕಗೆಸಂಖ್ಯೆ ಇಲ್ಲದ ವಸ್ತು
ನಿಶ್ಶೇಷದಿಸುಂಕಕೆ ತೆತ್ತಿದರಾವ ಸುಖ 3
ಆಧ್ಯಾತ್ಮಾನುಭವ ಗುರುಕೃಪೆ
ಇಲ್ಲದೆವಿದ್ಯೋನ್ಮತ್ತ ದಯಾಶೂನ್ಯಗೆ
ನದ್ಯೋಲ್ಲಂಘಿಸಿ ದಡದಲಿ ನಾವೆ ಮುಳುಗಿದರೆ
ಪ್ರಾಣಿಗಳಿಗೇನು ಸುಖ 4
ಪ್ರಸನ್ನವೆಂಕಟ ಪದಸರೋರುಹಗಳ
ಪ್ರಸನ್ನೀಕರಿಸದೆ ಸಾಹಸಬಡುವ
ಅಶುಭದನುಜರು ತಪಮಾಡಿ ತುದಿಯಲಿ
ವಿಷಮಗತಿಗ್ಹೋಗಲೇನು ಸುಖ 5
********
ಆ ಸುಖ ಹರಿಮರೆದವಗಯ್ಯ
ದೋಷಾಂಧಃತಮದೊಳಗೇನು ಸುಖ ಪ.
ಕಂಠತ ವ್ಯಸನ ಹೊಲಬಿಲ್ಲದೆ
ಧರ್ಮಕಂಟಕಶಾಸ್ತ್ರವಿಚಾರಕಗೆ
ಎಂಟುವೃಷಭಹೂಡಿ ಮಹಾಶ್ರಮಿಸಿ
ಬರೆದಂಟು ಬೆಳೆದವನಿಗೇನು ಸುಖ 1
ಅನಿರುದ್ಧಗಖಿಳವರ್ಪಿಸಿದಾನಲ್ಪಗುಣದೆ
ಮತಿ ದೃಢವಿಲ್ಲದ ಮಾನವಗೆಹಣ ವೆಚ್ಚಿಸಿ
ರಿಣದೆಗೆದಿಟ್ಟ ಧಾನ್ಯವತೃಣಸಮ
ವಿಕ್ರಿಸಲೇನು ಸುಖ 2
ಶಂಖಪಾಣಿಯ ನಿಂದಿಸಿ ಕರ್ಮಶಕ್ತಿಯಶಂಕರ
ರವಿಗಣೋಪಾಸಕಗೆಸಂಖ್ಯೆ ಇಲ್ಲದ ವಸ್ತು
ನಿಶ್ಶೇಷದಿಸುಂಕಕೆ ತೆತ್ತಿದರಾವ ಸುಖ 3
ಆಧ್ಯಾತ್ಮಾನುಭವ ಗುರುಕೃಪೆ
ಇಲ್ಲದೆವಿದ್ಯೋನ್ಮತ್ತ ದಯಾಶೂನ್ಯಗೆ
ನದ್ಯೋಲ್ಲಂಘಿಸಿ ದಡದಲಿ ನಾವೆ ಮುಳುಗಿದರೆ
ಪ್ರಾಣಿಗಳಿಗೇನು ಸುಖ 4
ಪ್ರಸನ್ನವೆಂಕಟ ಪದಸರೋರುಹಗಳ
ಪ್ರಸನ್ನೀಕರಿಸದೆ ಸಾಹಸಬಡುವ
ಅಶುಭದನುಜರು ತಪಮಾಡಿ ತುದಿಯಲಿ
ವಿಷಮಗತಿಗ್ಹೋಗಲೇನು ಸುಖ 5
********