ಕೊಡು ಸುಖಾನಂದ ಬಾಷ್ಪದರೋಮಾಂಚನ ಗದ್ಗದವಾ ಪ
ಕೊಡು ಸುಖ ಬೇಗನೆ ಮೃಡ ಮುಖ ಸುರನುತಅಡಿಗೊಂದಿಸುವೆನು ಕಡು ಮುದ್ದು ಕೃಷ್ಣಯ್ಯ ನಾಅ.ಪ
ಶ್ರುತಿ ತತಿಯಲಿ ನಿನ್ನ ವಿತತ ಮಹಿಮೆ ಕೇಳಿಅತಿಶಯದಲಿ ರೋಮ ಸತತ ಸುರಿಸುವಂಥ 1
ನಿನ್ನ ಚೆಲುವ ರೂಪವನ್ನೆ ನೋಡುತ ಮುಖಉನ್ನತ ಸುಖ ಜಾಲ ಕಣ್ಣೆಲಿ ಸುರಿವಂಥ 2
ಇಂದಿರೇಶನ ಕಥೆ ಇಂದು ಕೇಳುತಕಂಠ ನಿಂದು ಬಿಗಿದು ಮಾತು ಒಂದೂ ಬಾರದಂತೆ3
****