ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧನ ಬ್ಯಾರ್ಯದೆ ಸ್ವಹಿತ ಸಾಧನ ಬ್ಯಾರ್ಯದೆ ಪ
ವಿದ್ಯಾ ವ್ಯುತ್ಪತ್ತಿ ಬೀರಿದರೇನು ರಿದ್ಧಿಸಿದ್ಧಿಯುದೋರಿದರೇನು 1
ಜಪತಪ ಮೌನಾಶ್ರಯಿಸಿದರೇನು ಉಪವಾಸದಿ ಗೊಪೆ ಸೇರಿದರೇನು 2
ದೇಶದ್ವೀಪಾಂತರ ತಿರುಗಿದರೇನು ವೇಷ ವೈರಾಗ್ಯವ ತೋರಿದರೇನು 3
ಭಾನುಕೋಟಿತೇಜ ಒಲಿಯದೆ ತಾನು ಅನೇಕ ಸಾಧನಲ್ಯಾಗುವದೇನು 4
ದೀನ ಮಹಿಪತಿಸ್ವಾಮಿಯಾಶ್ರಯಧೇನು ಮನವರ್ತದೆ ಕೈಯಗೊಡುವ ತಾನು 5
***