Showing posts with label ಎದ್ದು ನಿಂತ ಬಗಿಯೇನೊ ರಾಮಾ ಪೇಳು varadagopala vittala. Show all posts
Showing posts with label ಎದ್ದು ನಿಂತ ಬಗಿಯೇನೊ ರಾಮಾ ಪೇಳು varadagopala vittala. Show all posts

Friday, 27 December 2019

ಎದ್ದು ನಿಂತ ಬಗಿಯೇನೊ ರಾಮಾ ಪೇಳು ankita varadagopala vittala

ಶ್ರೀವರದೇಂದ್ರತೀರ್ಥರಿಂದ ಫುಜೆಗೊಂಬ ಮೂಲರಾಮನನ್ನು ಕುರಿತು ರಚಿಸಿದ ಶ್ರೀವರದಗೋಪಾಲವಿಟ್ಠಲ ದಾಸರಪದ   - ಪದ : ೫೨.
                                          
ರಾಗ : ಆಹರಿ, ತಾಳ : ಝಂಪೆ

ಎದ್ದುನಿಂತ ಬಗಿಯೇನೊ ರಾಮಾ | ಪೇಳು |
ಬುಧ ವರದೇಂದ್ರಯತಿ ಮನಕುಮುದಸೋಮಾ || ಪ ||

ಸೀತೆಯನು ನೆನಿಸಿ ಶೀಘ್ರದಿ ತಾಹೆನೆಂದೆದ್ದ್ಯೊ | 
ಪಾಥೋದಿಪಥ ಕೊಡದ ಕಾತುರದಲಿಂದೆದ್ದ್ಯೊ | 
ಯಾತುಧಾನರ ಬಲವ ಘಾತಿಸುವೆನೆಂದೆದ್ದ್ಯೊ | 
ಶೀತಾಂಶು ವದನ ಶುಭರದನಾ ತಿಳಿಸು |
ಪ್ರೀತಿಯಲಿ ವರದೇಂದ್ರಯತಿ ಮನೋಧಾಮಾ || ೧ ||

ಭಕುತರಿಗೆ ಭಯಬಾರಗೊಡನೆಂದು ನಿಂತಿಯೊ | 
ಭಕುತಿಯಲಿ ಭಜಕರಿಗೆ ಧೇನಿಸಲು ನಿಂತಿಯೊ | 
ಸಕಲೇಷ್ಟಪ್ರದ ಮಹಾಪ್ರಭುಯಂದು ನಿಂತಿಯೊ | 
ಮುಕುತೇಶ ಮೂಲರಘುರಾಮಾ ಯತಿಯು |
ಭಕುತಿಯಲಿ ಭಜಿಸೆ ನಿಂತಿಯೊ ಪೂರ್ಣಕಾಮಾ || ೨ ||

ಶರಚಾಪ ಧರಿಸಿ, ದಶ ಶಿರನ ತರಿಯಲಿ ನಿಂತ್ಯೊ | 
ಪರಿಪರಿಯಲಿ ಭಕುತರನ ಪಾಲಿಸಲಿ ನಿಂತ್ಯೊ |
ಶರಣ ಜನರುಗಳು ಕರೆದಾರೆಂದೆನುತ ನಿಂತ್ಯೊ | 
ವರದಗೋಪಾಲವಿಠಲಾ ವರದೇಂದ್ರ |
ವರದರೀ ಪ್ರಕೃತ ಭಯ ಪರಿಹರಿಪ || ೩ ||
**********