ರಾಜೀವಲೋಚನನ ನೆನೆಯದ ಪಾಪಿತನುವಿನಲಿ ||ಪ||
ಅರುಣವುದಯದಲೆದ್ದು ಹರಿಯ ಸ್ಮರಣೆಯ ಮಾಡಿ
ಗುರುಹಿರಿಯರ ಮನದಲ್ಲಿ ನೆನೆದು ನೆನೆದು
ಪರಮಸುಖಿಯಾಗಿ ನದಿಯೊಳು ಮಿಂದು ರವಿ-
ಗರ್ಘ್ಯವನೆರೆಯದ ಪಾಪಿತನುವಿನಲಿ ||
ಹೊನ್ನಕಲಶದಲಿ ಅರ್ಘ್ಯೋದಕವ ಶ್ರೀಹರಿಗೆ
ಚೆನ್ನಾಗಿ ಅಭಿಷೇಕವನು ಮಾಡಿ
ರನ್ನದುಡಿಗಳ ಉಡಿಸಿ ರತ್ನಗಳ ಅಳವಡಿಸಿ
ಕಣ್ಣಿನಲಿ ನೋಡಲರಿಯದ ಕಪಟತನುವಿನಲಿ ||
ತುಲಸಿದಳಗಳ ಪುಷ್ಪಮಾಲಿಕೆಯ ನವರತ್ನ
ಹೊಳೆವ ಕೌಸ್ತುಭ ಕೊರಳಲ್ಲಿ ಪದಕ
ನಳಿನಾಕ್ಷಗಿಟ್ಟು ಕರ್ಪೂರದಾರತಿಯೆತ್ತಿ
ಕಣ್ಣಿನಲಿ ನೋಡಲರಿಯದ ಕಪಟತನುವಿನಲಿ ||
ಪರಿಪರಿಯ ಭಕ್ಷ್ಯಪಾಯಸ ಪಾಕಶಲ್ಯಾನ್ನ
ವರರಸ ಘೃತ ಗುಡಕ್ಷೀರ ದಧಿಯ
ಪರಮಪುರುಷಗೆ ತಂದು ನೈವೇದ್ಯವನೆ ಮಾಡಿ
ಹರುಷದಿಂದಲಿ ಕೈಮುಗಿಯಲರಿಯದ ಕಪಟತನುವಿನಲಿ ||
ನಿತ್ಯನೈಮಿತ್ತಕರ್ಮಗಳನು ಮಾಡಿ ಬಹು
ಅರ್ತಿಯಿಂದಲಿ ಅತಿಥಿಗಳನೆಲ್ಲ ಕರೆಸಿ
ವಿತ್ತವಿದ್ದಾಗಲೇ ಹರಿಯ ಪೂಜೆಯ ಮಾಡಿ ಸ-
ರ್ವೋತ್ತಮನ ಪ್ರೀತಿಪಡಿಸದ ವ್ಯರ್ಥತನುವಿನಲಿ ||
ಪ್ರತಿದಿನವು ಹರಿನಾಮ ಸಕಲವೇದಪುರಾಣ
ಕಥೆಗಳನು ಕೇಳಿ ಮನದಣಿದು ದಣಿದು
ಅತಿಶಯದ ಮಧ್ವಮತವನನುಸರಿಸದೆ ಪರ-
ಗತಿಗೆ ಸಾಧನವ ಸಾಧಿಸಲರಿಯದಿಹ ಮೂಢ ಈ ತನುವಿನಲಿ ||
ಉರಗಾದ್ರಿಯಲಿ ಚಂದ್ರಪುಷ್ಕರಿಣಿ ಮೊದಲಾದ
ಪರಿಪರಿತೀರ್ಥದಲಿ ಮುಣುಗಿ ಮುಣುಗಿ
ತಿರುವೇಂಗಳಪ್ಪ ಶ್ರೀ ಪುರಂದರವಿಟ್ಠಲನ
ಚರಣಸೇವೆಯ ಮಾಡಲರಿಯದ ಕಪಟತನುವಿನಲಿ ||
****
ಉದಯರಾಗ ಝಂಪೆತಾಳ
pallavi
I jIvaviddu balavEnu celuva rAjIvalOcanana neneyada pApi tanuvinali
caraNam 1
aruNa udayadaleddu hariya smaraNeya mADi guruhiriyara manadalli nenedu nenedu
parama sukhiyAgi nadiyoLu mindu ravi garkhayavanereyada pApi tanuvinali
caraNam 2
honna kalashadali arg-hyOdakava shrI harige cennAgi abhiSEkavanu mADi
rannaduDigaLa uDisi ratnagaLa aLavaDisi kaNNinali nODalariyada kapaTa tanuvinali
caraNam 3
tulasidaLagaLa puSpa mAlikeya navaratna hoLeva kaustubha koraLalli padaka
naLInAkSagiTTu karpUradAratiyetti kaNNinali nODalariyada kapaTa tanuvinali
caraNam 4
pari pariya bhakSya pAyasa shAka shAlyanna vararasa krta kSIra dadhiya
parama puruSage tandu naivEdyavane mADi haruSadali kai mugiyalariyada kapaTa tanuvinali
caraNam 5
nitya naimitya karmagaLanu mADi bahu artiyinda atithigaLanella karesi
vittaviddAgaleE hariya pUjeya mADi sarvOttamana prIti baDisada vyartta tanuvinali
caraNam 6
prati dinavu harinAma sakala vEda purANa kathegaLenu kELi manadaNidu daNidu
atishayada madhva matavananusarisade para gatige sAdhanava sAdhisalariyadiha mUDha I tanuvinali
caraNam 7
uragAdriyali candra puSkariNi modalAda paripari tIrttadalli muNugi muNugi
tiruvEngaLappa shrI purandara vIttalana caraNa sEveya mADalariyada kapaTa tanuvinali
***