Showing posts with label ಕಿರುಡೊಳ್ಳಿಗೆ ಉರಗನ ಸುತ್ತಿದಾತನೆ ಮೆರೆವ ಉದ್ದಾಳಿಕನ ಕಥೆ helavana katte. Show all posts
Showing posts with label ಕಿರುಡೊಳ್ಳಿಗೆ ಉರಗನ ಸುತ್ತಿದಾತನೆ ಮೆರೆವ ಉದ್ದಾಳಿಕನ ಕಥೆ helavana katte. Show all posts

Tuesday, 1 June 2021

ಕಿರುಡೊಳ್ಳಿಗೆ ಉರಗನ ಸುತ್ತಿದಾತನೆ ಮೆರೆವ ಉದ್ದಾಳಿಕನ ಕಥೆ ankita helavana katte

 helavana katte ranga

ಉದ್ದಾಳಿಕನ ಕಥೆ


ಕಿರುಡೊಳ್ಳಿಗೆ ಉರಗನ ಸುತ್ತಿದಾತನೆ ಮೆರೆವ

ಪಾಶಾಂಕುಶ ಧರನೆ

ಗಿರಿಜೆಯ ವರಪುತ್ರ ಕರಿಮುಖಗೊಂದಿ[ಪೆ] ಧೃಢವಾಗಿ

ಕರಿಣಿಸೊ ಮತಿಯ 1

ವಾಣಿ ಬ್ರಹ್ಮನ ರಾಣಿ ವೀಣೆ ಪುಸ್ತಕಪಾಣಿ

ಮಾನಿನಿಕುಲಕೆ ಕಟ್ಟಾಣಿ

ಮಾಣದೆ ಭಕ್ತರ ಪೊರೆವÀ ಶೃಂಗೇರಿಯ ಶಾರದೆ

ಕರುಣಿಸೆ ಮತಿಯ2

ಮಂಗಳಾಂಗನೆ ಮಲ್ಲಸುರರ ಮರ್ದಿಸಿದನೆ ಗಂಗೆ [ಮೌಳಿ]

ಮನೋಹರನೆ

ಹಿಂಗದೆ ಭಕ್ತರ ಪೊರೆವ ನೀಲಾಬ್ಧಿಯ ಲಿಂಗ ಕರುಣಿಸು

ನಿಜಮತಿಯ 3

ಭೂಮಿ ಅಂಬರ ರವಿ ತಾರೆ ಚಂದ್ರಾವಳಿ

ಮೇಲಾದಷ್ಟದಿಕ್ಪಾಲಕರು

ಸಾಧು ಸಜ್ಜನ ಗುರುಹಿರಿಯರಿಗೊಂದಿಸಿ ಹೇಳುವೆ ಈ

ಪುಣ್ಯಕಥೆಯ 4

ಓಣ್ಯೊಳು ಚೆಲ್ಲಿದ ಅಣಿ ಮುತ್ತಾರಿಸಿ ನೂಲಿಗೆ ಪೋಣಿಸಿದಂತೆ

ಯೋಗಿಗಳರಸುದ್ದಾಳಿಕನ ಕಥೆಯನು ಹೇಳುವೆ ಚರಿತೆಯ ಮಾಡಿ5

ಭೂವಳಿಯೊಳಗೆ ಉತ್ತಮನೆಂಬೂ ಭೂಸುರ

ವೇದವೇದಾಂತ ಪಾರಗನು

ಸಾಧು ಸಜ್ಜನ ಸತಿಯರ ಕುಲರತ್ನವು ಅನುಕೂಲ್ಯಾತನ

ಧರ್ಮ ಪತ್ನಿ 6

ಸತಿ ಪುರುಷರು ಸಂತೋಷದಲಿರುತಿರೆ

ಸುತಜನಿಸಿದ ಉದ್ದಾಳಿಕ

ಅತಿ ಹರುಷದಿ ಜಾತಕರ್ಮ ನಾಮಕರಣ ಸುತಗೆ

ಮಾಡಿದ ಕ್ರಮದಿಂದ 7

ಅನ್ನಪ್ರಾಶನ, ಚೌಲಕರ್ಮಂಗಳ ಮಾಡಿ ಚಿಣ್ಣಗೆ

ಮೌಂಜಿಯ ಕಟ್ಟಿ

ಬ್ರಹ್ಮಚರ್ಯಾಶ್ರಮ ನಡೆಸಿ ತಾಯಿ ತಂದೆ ಮುನ್ನೆ

ನಡೆದರು ಪರಗತಿಗೆ 8

ಗುರುಕುಲವಾಸವ ಮಾಡಿ ಉದ್ದಾಳಿಕ ಕಲಿತನೆ

ನಾಲ್ಕು ವೇದಗಳ

ಅಜ ಹರಹರಿಯ ಮೆಚ್ಚಿಸುವೆ [ಎಂ]ದೆನುತಲೆ

ಘನತಪವನಕಾಗಿ ನಡೆದ 9

ಮಿಂದು ಮಡಿಯನ್ನುಟ್ಟು ಸಂದೇಹವ ಬಿಟ್ಟು

ನಿಂದು ಬೆಳಗುವ ಜ್ಯೋತಿಯಂತೆ

ಒಂದೇಮನದಲಿ ಮಾಡಿದ ತಪವನು [ವರುಷ]

ಸಂದವರುವತ್ತು ಸಾವಿರವು 10

ಧರೆಯೊಳಗುತ್ತಮ ಕೌಸಲ್ಯದೇಶದಿ ಆಯೋಧ್ಯವೆಂಬ

ಪಟ್ಟಣದಿ

ರಘುಕುಲದಲ್ಲಿ ಉತ್ಪನ್ನನು ರಘುರಾಮ ಸ್ಥಿರವಾಗಿ

ರಾಜ್ಯವಾಳುವನು 11

ಎಲ್ಲೆಲ್ಲಿ ನೋಡಿದರು ಕೆರೆಬಾವಿ ದೇವಾಲಯ

ಕನ್ಯಾದಾನವು ಭೂದಾನ

ಅನ್ನಛತ್ರವು ಅರವಟ್ಟಿಗೆಯನಿಕ್ಕಿಸಿ ಮನ್ನಿಸಿ

ರಾಜ್ಯವಾಳುವನು 12

ಹೆತ್ತ ತಾಯಿ ಮಕ್ಕಳಗಲರೆಂದೆದಿಗು ಬತ್ತದೆ ಕರೆವ ಧೇನುಗಳು

ಸತ್ಯವಲ್ಲದೆ ಅಸತ್ಯವ ನುಡಿಯರು ಉತ್ತಮರಾ

ದೇಶದೊಳಗೆ 13

ಧರ್ಮವಲ್ಲದೆ ಅನ್ಯಾಯವ ಮಾಡರು

ಪುಣ್ಯಸಾಧನರು ಸಜ್ಜನರು

ಉನ್ನಂತ ಹರಿಯ ಭಕ್ತಿಯಲಿ ಕೊಂಡಾಡುವ

ಧರ್ಮಗಳಾ ದೇಶದೊಳಗೆ 14

ಕೊಡುವವರುಂಟು ಕೊಂಬವರಿಲ್ಲ ಧರೆಮೇಲೆ

ಬಡವರಿಲ್ಲಿ ಚಾರರುಂಟು

ಕಡುಧೀರರುಂಟು ಹಗೆಗಳಿಲ್ಲ ಪಿಸುಣರಗೊಡುವೆಯಿಲ್ಲಾ

ದೇಶದೊಳಗೆ 15

ಸುತ್ತಣರಾಯರ ಗೆಲಿದು ಕಪ್ಪವಕೊಂಡು ಕ್ಷತ್ರಿಯ

ಧರ್ಮವ ನಡೆಸಿ

ಭಕ್ತಿಯಿಂದ ದೇವ ಬ್ರಾಹ್ಮರ ಮನ್ನಿಸುತಲೆ ಸತ್ಯದಿ

ರಾಜ್ಯವಾಳುವನು 16

ಕೊಟ್ಟ ವಾಕ್ಯಂಗಳ ತಪ್ಪನು ಭೂಪಾಲ ಮಸ್ತಕ

ಮಕುಟವೆಂದೆನಿಸಿ

ಪಟ್ಟದರಸಿಯಲ್ಲದನ್ಯತ್ರ ನೋಡೇಕ ಪತ್ನಿಯ ವ್ರತವ ನಡೆಸಿದನು17

ಪಟ್ಟದರಸಿಯೊಳ್ ಕುಮಾರನು ಅಜಭೂಪ ಹುಟ್ಟಿ

ಸಂತೋಷದೋರಲು

ಚಿಪ್ಪಿನೊಳಗೆ ಮುತ್ತುಮಾಡುವ ತೆರನಂತೆ ಪುತ್ರಿ

ಹುಟ್ಟಿದಳ್ ಚಂದ್ರಾವತಿಯು 18

ಹೊನ್ನಿನ ರಾಸಿ ಸುವರ್ಣದ ಬೆಟ್ಟವು ಕನ್ಯಾದಾನದ ಹೆಬ್ಬೆಳಸು

ಪುಣ್ಯದ ಪುಂಜ ಪೂರ್ಣವಿತ್ತೆಯೆನಗೊಂದು ಹೆಣ್ಣು

ಮಾಣಿಕವೆ ಸಂತಾನ 19

ಹೊಡೆ ಮಗ್ಗುಲಿಕ್ಕೋಳು ಇಡವಳಂಬೆಗಾಲ

ನಡೆಯೋಳು ದಟ್ಟಡಿಯಿಡುತ

ನುಡಿವೋಳು ತೊದಲ್ನುಡಿಯಲಿ ಅರಗಿಣಿಯಂತೆ

ಕಡುಲಾಲಿಕೆ ಬಾಲಲೀಲೆ 20

ನಡೆದರೆ ದಿಟ್ಟ ತಾಕೀತೆಂದು ಕುಮಾರಿಗೆ ನುಡಿದರೆ

ಬಡವಾದಾಳೆಂದು

ಮುಡಿಯ ಭಾರಕೆ ಸೆಳೆನಡುವು ನೊಂದೀತೆಂದು

ಕಡುಹರುಷದಲಿ ಹಿಗ್ಗಿದರು 21

ಅಕ್ಷರಾಭ್ಯಾಸವ ಮಾಡಿಸಿ ಕುಮಾರಿಗೆ ನರ್ತನ ಗೀತವ ಕಲಿಸಿ

ಉತ್ತಮವಾದ ನಾಟಕ ಕವಿಶಾಸ್ತ್ರವ

ಪುತ್ರಿಗಭ್ಯಾಸ ಮಾಡಿಸಿದ 22

ಬಾಲತ್ವದಿಂದ ಕಳೆದವು ಕುಮಾರಿಗೆ ಮೇಲೆ

ಯೌವನವು ತೋರಿದವು

ನೀಲಮಾಣಿಕ ನವರತ್ನ ಮುತ್ತಡಚಿದ

ಆಲಯವನೆ ಕಟ್ಟಿಸಿದ 23

ಪುತ್ರಿಯ ಸೇವೆಗೆ ಇಟ್ಟನೆ ಭೂಪಾಲ ಹತ್ತುಸಾವಿರ ಕೆಳದಿಯರ

ಸುತ್ತಲು ಪ್ರಾಕಾರ ಎಸೆದವು ರಕ್ಷೆಗೆ ಇಟ್ಟನೆ ದ್ವಾರಪಾಲಕರ24

ಇತ್ತ[ಲೀ] ರಾಯ ಸಂಪತ್ತಿನೊಳಿರುತಿರೆ ಅತ್ತ[ಲಾ]

ಮುನಿಕೌಶಿಕನು

ಪೃಥವಿಯನ್ನೆಲ್ಲಾ ಸುತ್ತಲು ಬಂದ[ನು] ಸಪ್ತದ್ವೀಪಗಳ

ನೋಡುತಲಿ 25

ಸತ್ಯಲೋಕ ತಪೋಲೋಕವ ಚರಿಸುತ್ತ ಹೊಕ್ಕ[ನೆ]

ಯಮ ಲೋಕವನು

ಬೆಕ್ಕಿನಬಾಯ ಮೂಷಕದಂತೆ ಮಿಡುಕು[ತ]ಲಿಪ್ಪ

ಜೀವಿಗಳ ತಾಕಂಡ 26

ತೃಣದ ಮೂಲಾಗ್ರದಿ ನಡುಗುತಿಪ್ಪರ ಕಂಡು ಬ[ಳಿ]

ಯಲ್ಲಿ ನಿಂತು ಮಾತಾಡಿ

ನಿಮಗೆ ಈ ಲೋಕ ಪ್ರಾಪ್ತಿಯಾಕೆ ಆಯಿತು

ತಿಳಿದು ಹೇಳುವುದು ಎನ್ನೊಡನೆ 27

ಸುತರಿಲ್ಲದೆ ಸದ್ಗತಿಯಿಲ್ಲವೆನುತಲೆ ಶೃತಿ ಸಾರುತಿದೆ

ಜಗದೊಳಗೆ ಎಮಗೆ

ಸಂತತಿಯಿಲ್ಲ ಉತ್ತಮ ಗತಿಯ ಕಾಣಿಸುವೊರೆ

ಪತನಕ್ಕೆ ಬಿದ್ದೆವೆಂದೆನಲು 28

ಪುತ್ರಪೌತ್ರರಿಲ್ಲವೆ ನಿಮ್ಮ ವಂಶದಿ ಉತ್ತಮಗತಿಯ

ಕಾಣಿಸುವ ದೌಹಿತ್ರರು

ಧರ್ಮ ಸಂತಾನಿಗಳಿಲ್ಲವೆ[ಎಂ]ದು ಮತ್ತಾಗ

ಮುನಿಯು ಕೇಳಿದನು 29

ಹೆಣ್ಣನೊಲ್ಲದೆ ಅರಣ್ಯವ ಚರಿಸುವ ಉನ್ನಂತ ತಪಸೀಲಿದ್ದ

ನಮ್ಮ ಸಂತತಿ ಉದ್ದಾಳಿಕನೊಬ್ಬನಿರುವನು ಮನ್ನಿಸಿ

ತಿಳಿದು ಹೇಳುವುದು 30

ಉತ್ತಮಳಾಗಿರ್ಪ ಸತಿಯನೊಳಗೊಂಡು

ಪುತ್ರಸಂತಾನವ ಪಡೆದು

ಹೆತ್ತವರಿಗೆ ಸದ್ಗತಿಯ ಕಾಣಿಸುವುದೆಂದು

ವಿಸ್ತಾರವಾಗಿ ಹೇಳುವುದು 31

ಭೋರನಲ್ಲಿಂದ ತೆರಳಿದನಾಗಲೆ ಮುನಿ ಅರಣ್ಯವ ಚರಿಸುತಲೆ

ದೂರದಿಂದಲೆ ಕಂಡನು ಉದ್ದಾಳಿಕನ ಸಾರಿದನಾ

ತಪೋವನವ 32

ಇದಿರೆದ್ದು ಉದ್ದಾಳಿಕನು ಕಂಡು ಮುನಿಪನ

ಕರವಿಡಿದು ಕರೆ ತಂದನಾಗ

ತೃಣದಾಸನವಿತ್ತು ಅತಿಥಿ ಪೂಜೆಯ ಮಾಡಿ

ಬರವೇನೆಂದು ಕೇಳಿದನು 33

ಸತ್ಯಲೋಕ ತಪೋ ಲೋಕವ ಚರಿಸುತ್ತ ಹೊಕ್ಕೆನು

ಯಮ ಲೋಕವನು

ನಿಮ್ಹೆತ್ತ ತಾಯಿ ತಂದೆ ಪಿತೃಪಿತಾಮಹರು

ಅತ್ಯಂತ ನರಕಕೈದುವರು 34

ಆಲಸÀ್ಯವಿಲ್ಲದೆ ಬೀಳ್ಪರು ಪತನಕ್ಕೆ º

(missing some lines)

****