Showing posts with label ಇಂದಿರೆ ಅರಸ ಚಂದ್ರಮಂಡಲ hayavadana INDIRE ARASA CHANDRA MANDALA. Show all posts
Showing posts with label ಇಂದಿರೆ ಅರಸ ಚಂದ್ರಮಂಡಲ hayavadana INDIRE ARASA CHANDRA MANDALA. Show all posts

Wednesday, 1 December 2021

ಇಂದಿರೆ ಅರಸ ಚಂದ್ರಮಂಡಲ ankita hayavadana INDIRE ARASA CHANDRA MANDALA



ಇಂದಿರೆ ಅರಸ ಚಂದ್ರಮಂಡಲಮಂದಿರಾಖಿಳವಂದ್ಯ ಹಯಮುಖಎಂದೆಂದೆನ್ನ ಮನದಿಂದಗಲದಿರುಮಂದರಾದ್ರಿಧರ ಪ.

ತುಂಗಮಹಿಮ ತುರಂಗವದನ ಶು-ಭಾಂಗ ರಿಪುಕುಲಭಂಗ ಸುಜನರಸಂಗ ಎನ್ನಂತರಂಗ ಮಲಿನವಹಿಂಗಿಸುವುದೆಂತೊಮಂಗಳಾಬ್ಧಿತರಂಗದುಬ್ಬಿಗೆತಿಂಗಳೆನಿಸುವ ಅಂಗಜನ ತಂದೆರಂಗ ನಿನ್ನ ಪಾದಕೆಂಗಮಲದಲ್ಲಿಭೃಂಗನಪ್ಪುದೆಂತೊ 1

ವಾರಿಜಾಕ್ಷ ಮುರಾರಿ ಮದವೆಂಬೋಮಾರಿ ಮುಸುಕಿತು ಸಾರಿ ಮತ್ಸರಮಾರನೊಡಗೂಡಿ ದಾರಿ ತಪ್ಪಿಸಿಗಾರುಮಾಡಿತೆನ್ನ ನಾ-ನಾರೆ ಕ್ರೋಧಮಹೋರಗನ ವಿಷ-ಧಾರೆಗೆ ಭಯಕಾರಿ ಹರಿ ನಿನ್ನಚಾರುಚರಣವ ಸಾರಿದೆನಿಂದುತೋರಿ ಸಲಹಬೇಕು 2

ಧsÀನ್ಯ ಸುರರಜೀವನ್ನ ಕರುಣಸಂ-ಪನ್ನ ನಿತ್ಯಪ್ರಸನ್ನ ಚಿನುಮಯಪನ್ನಗಾರಿವಾಹನ್ನ ಶಶಿಸಮ-ವರ್ನ ಹಯವದನನಿನ್ನ ಪಾದಪಾವನ್ನಸುರತರು-ವಿನ್ನ ನೆಳಲೊಳಿಟ್ಟೆನ್ನ ಸಲಹಬೇ-ಕನ್ಯಥಾ ಗತಿಶೂನ್ಯ ನಾನೆಲೊಪೂರ್ಣಪುರುಷರನ್ನ 3
*******