Showing posts with label ಕೈವಲ್ಯ ಮನದ ವೈಶಾಲ್ಯ ಅದ್ವೈತಾಗಮ್ಯಗೋಚರನ mahipati. Show all posts
Showing posts with label ಕೈವಲ್ಯ ಮನದ ವೈಶಾಲ್ಯ ಅದ್ವೈತಾಗಮ್ಯಗೋಚರನ mahipati. Show all posts

Wednesday, 1 September 2021

ಕೈವಲ್ಯ ಮನದ ವೈಶಾಲ್ಯ ಅದ್ವೈತಾಗಮ್ಯಗೋಚರನ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಕೈವಲ್ಯ ಮನದ ವೈಶಾಲ್ಯ  ಪ  


ಅದ್ವೈತಾಗಮ್ಯಗೋಚರನದ್ವಿತೀಯ ಅಧ್ಯಾತ್ಮ ವಿದ್ಯದಾಗರ ಸಿದ್ಧರಪ್ರಿಯ ಸದ್ಗತಿ ಸುಖಸಾಗರ ಸದ್ಗುಣಾಲಯ ಬೋಧ ಪೂರ್ಣೋದಯ 1 

ಆದಿತ್ಯಕೋಟಿ ಪ್ರಕಾಶ ಸದೋದಿತ ಸಾಧು ಹೃದಯನಿವಾಸ ಭೇದಾತೀತ ಶುದ್ಧಾತ್ಮ ಸುಖಸಂತೋಷ ಸದಾ ಸುಶಾಂತ ಸದಮಲಾನಂದಘೋಷ ಆದಿದೇವ ಸಾಕ್ಷಾತ2 

ಕೈವಲ್ಯನಿಧಿ ನಿಶ್ಚಯ ದೇವಾಧಿದೇವ ಅಕ್ಷಯ ಶ್ರೀವಾಸುದೇವ ಭವಾತ್ಮ ಭಜಕಹೃದಯ ಸರ್ವರೊಳಿ ಹ್ಯ ಬಾಹ್ಯಾಂತ್ರ ಭಾಸುತಿಹ್ಯ ಮಹಿಪತಿ ಮನದೈವ 3

***