Showing posts with label ಗರುಡನೇರುವ ಕೃಷ್ಣ ಹೊರಡುವನೀಗ ಸಖಿನೋಡೋಣ ramesha. Show all posts
Showing posts with label ಗರುಡನೇರುವ ಕೃಷ್ಣ ಹೊರಡುವನೀಗ ಸಖಿನೋಡೋಣ ramesha. Show all posts

Wednesday, 4 August 2021

ಗರುಡನೇರುವ ಕೃಷ್ಣ ಹೊರಡುವನೀಗ ಸಖಿನೋಡೋಣ ankita ramesha

 ..

ಗರುಡನೇರುವ ಕೃಷ್ಣ ಹೊರಡುವನೀಗ ಸಖಿನೋಡೋಣ ನಾವೆಲ್ಲ ಈಗ ಬಾರೆ ನೀರೆ ಪ.

ಗಗನದಿ ಬೆಳಗುವ ಹಗಲು ಬತ್ತಿಗÀಳೆಷ್ಟುಹಗಲು ಬತ್ತಿಗಳೆಷ್ಟು ಮುಗಿಲಿಗೆ ಮುಟ್ಟೋಬಿರಸೆಷ್ಟ ಬಹುಶ್ರೇಷ್ಠಮುಟ್ಟೋ ಮಿಂಚಿನಂತೆ ಹೊಡೆವೊ ಬಾಣಗಳು ಕಡಿಯಿಲ್ಲ ನಲ್ಲೆ 1

ಎಡಬಲ ಭಾವೆ ರುಕ್ಮಿಣಿ ಮಡದಿಯರೊಪ್ಪುವ ಮಡದಿಯ ಹಿಂದೊಪ್ಪುವ ಬೆಡಗು ವರ್ಣಿಸಲು ವಶವಲ್ಲ ನಲ್ಲೆಬೆಡಗು ವರ್ಣಿಸುವೊ ಅವರಾರೆ ಚತುರ್ಮುಖನು ಖಡಿಸೋತು ಕೈಯ ಮುಗಿದಾನೆ ತಾನೆ2

ಕೃಷ್ಣನರಸಿಯರುಉಟ್ಟ ಪಟ್ಟಾವಳಿಯ ಬೆಳಕು ಅಷ್ಟು ಇಷ್ಟೆಂಬ ಮಿತಿ ಇಲ್ಲ ನಲ್ಲೆ ಅಷ್ಟು ಇಷ್ಟೆಂಬ ಮಿತಿ ಇಲ್ಲ ಸೂರ್ಯನಾಚಿಬಿಟ್ಹೋದ ತಮ್ಮ ಮನೆತನಕ ಸುಜನಕೆ 3

ಚದುರೆಯರು ಕೃಷ್ಣರಾಯ ಹೊದೆವ ಚಾದರದ ಬೆಳಕುಹೊದೆವೊ ಚಾದರದ ಬೆಳಕು ಅದ್ಬುತವಾಗಿ ಬೆಳಗೋದೆಹೊಳವೋದೆ ಅದ್ಬುತವಾಗಿ ಬೆಳಗೋದೆಅವರ ಚಲ್ವಿಕೆಗೆ ಮದನ ತಾ ನಾಚಿ ಮನೆಗ್ಹೋದ ಅಗಾಧ4

ಕಡಗ ಸರಪಳಿ ಗೆಜ್ಜಿ ನಡುವಿನೊಡ್ಯಾಣ ಪದಕ ನಡುವಿನೊಡ್ಯಾಣ ಪದಕ ಇಡವೊಕುಂಡಲದ ಮುಕುಟವೆ ಚಂದವುಮುಕುಟದ ಕಾಂತಿಗೆ ಅಡಗಿವೆ ತಾರೆ ಗಗನದಿ ಮುದದಿ 5

ಫುಲ್ಲ ನಯನೆಯರ ಮುತ್ತಿನ ಝಲ್ಲೆ ವಸ್ತದ ಬೆಳಕುಎಲ್ಲೆಲ್ಲು ಇಲ್ಲ ಜಗದೊಳು ಕೇಳುಎಲ್ಲೆಲ್ಲೂ ಇಲ್ಲ ಜಗದೊಳು ಚಂದ್ರನಾಚಿಖಡಿ ಸೋತು ಕೈಯ ಮುಗಿದಾನೆÉ ತಾನೆ6

ಶ್ರೀ ವತ್ಸ ಕೌಸ್ತುಭ ಚಾರುವನ ಮಾಲೆ ಹೊಳೆವ ನೂರು ಸೂರ್ಯರ ಬೆಳಕಿಲೆ ಎನುತಲೆನೂರು ಸೂರ್ಯರ ಬೆಳಕಿಲೆ ವೈಜಯಂತಿ ಹಾರ ಶೋಭಿಸುವ ಬೆಳಕೆಷ್ಟು ಬಹುಶ್ರೇಷ್ಠ7

ಮಂದಗಮನೆಯರು ಹರಿಯ ಗಂಧ ಕಸ್ತೂರಿ ಸೊಬಗುಛಂದ ವರ್ಣಿಸುವವರ್ಯಾರ ತೋರೆಛಂದ ವರ್ಣಿಸುವ ಅವರ್ಯಾರೆ ಚತುರ್ಮುಖನ ಛಂದಾಗಿ ನಾಚಿ ಕೈ ಮುಗಿದ ಸುಕರ 8

ನಲ್ಲೆಯರು ರಮೆ ಅರಸು ಮಲ್ಲಿಗೆ ಮುಡಿದ ಚಂದ ಮಲ್ಲಿಗೆ ಮುಡಿದ ಚಂದ ಎಲ್ಲೆಲ್ಲೂ ಇಲ್ಲಧsರೆ ಮ್ಯಾಲೆ ಎಲ್ಲೆಲ್ಲೂ ಇಲ್ಲ ಧರೆ ಮ್ಯಾಲೆ ಸರಸ್ವತಿಯುಚಲ್ವಿ ತಾ ನಾಚಿ ನಡೆದಾಳೆ ಕೇಳೆ 9

****