Showing posts with label ಚಿನ್ನದ ಚಾವಡಿ ಮ್ಯಾಲೆ ಪನ್ನಂಗಶಯನರು ಮಾನ್ಯ bheemesha krishna CHINNADA CHAAVADI MYAALE PANNANGASHAYANARU MAANYA. Show all posts
Showing posts with label ಚಿನ್ನದ ಚಾವಡಿ ಮ್ಯಾಲೆ ಪನ್ನಂಗಶಯನರು ಮಾನ್ಯ bheemesha krishna CHINNADA CHAAVADI MYAALE PANNANGASHAYANARU MAANYA. Show all posts

Sunday, 7 November 2021

ಚಿನ್ನದ ಚಾವಡಿ ಮ್ಯಾಲೆ ಪನ್ನಂಗಶಯನರು ಮಾನ್ಯ ankita bheemesha krishna CHINNADA CHAAVADI MYAALE PANNANGASHAYANARU MAANYA

ಚಿನ್ನದ ಚಾವಡಿ ಮ್ಯಾಲೆ ಪನ್ನಂಗಶಯನರು

ಮಾನ್ಯ ಮಾನ್ಯರು ಮುಕ್ತರು ಮುಕ್ತರನೆ ನೋಡುತಲಿಇನ್ಯಾರ ಭಯವು ನಮಗಿಲ್ಲ 1

ಮುತ್ತಿನ ಚಾವಡಿ ಮ್ಯಾಲೆ ಮುಕ್ತರನೆ ನೋಡುತಲಿ

ಲಕ್ಷ್ಮಿನಾರಾಯಣರು ಕುಳಿತಾರೆ ಕುಳಿತು ನೋಡುತಲಿರಲು

ಮತ್ಯಾರ ಭಯವೂ ನಮಗಿಲ್ಲ 2

ಯಮಧರ್ಮರಾಯಗೆ ನಮೋ ನಮೋ ನಾನೆಂಬೆ

ಘನ ಗುಣ ಮಹಿಮ ನೀನೆಂದು ನೀನೆಂದು ಸ್ತುತಿಪೆನೊ

ಅನುಮಾನವೇಕೆ ಸಲಹೆನ್ನ 3

ರಂಗ ರಂಗಾಯೆಂದು ರಂಗನ್ನ ನೆನೆದರೆ

ಹಿಂಗೋದು ಸಕಲ ದಾರಿದ್ರ್ಯ ದಾರಿದ್ರ್ಯ ಕಳೆವಂಥ

ಮಂಗಳಾಂಗಿಯೆ ಶ್ರೀ ಮಾಲಕ್ಷ್ಮಿ 4

ಸಾಮಜವರದನು ಭೀಮೇಶಕೃಷ್ಣನು

ಕಾಮಿತಾರ್ಥಗಳ ಕೊಡುವೋನು ಕೊಡುವಂಥ ಶ್ರೀಹರಿಯೆ

ಪ್ರೇಮದಲಿ ಎನ್ನ ಸಲಹಲಿ 5

****