Showing posts with label ಶರಣು ಶರಣು ಶೇಷಗಿರಿವರದ ದೇವಶರಣು prasannavenkata. Show all posts
Showing posts with label ಶರಣು ಶರಣು ಶೇಷಗಿರಿವರದ ದೇವಶರಣು prasannavenkata. Show all posts

Sunday, 17 November 2019

ಶರಣು ಶರಣು ಶೇಷಗಿರಿವರದ ದೇವಶರಣು ankita prasannavenkata

by ಪ್ರಸನ್ನವೆಂಕಟದಾಸರು
ಶರಣು ಶರಣು ಶೇಷಗಿರಿವರದ ದೇವಶರಣು ಶರಣು ಲಕ್ಷ್ಮೀವರ ಮುದದಶರಣಾಗತ ಭಯಸಂಹಾರ ಕಾರಣಕರುಣ ಕರಣ್ಯನಂತಕಿರಣಘವಾರಣ ಸುವಾರಣಉದ್ಧರಣಜಹರನುತಚರಣ ಪ.

ಕೃತಸೇವ್ಯಾಮಲ ಅವ್ಯಾಕೃತಗಾತ್ರ ದೇವಪೃಥುರಾಜಪಾಲಾಂಬುಜಾಯತ ನೇತ್ರಯತಿ ಹೃದಯ ಗುಹ್ಯಾಂಗೀಕೃತೋತ್ತುಂಗಹೃತಕ್ಷಿತಿ ಜಾತ ಸತಿಪ್ರತತಿಗೃಹೀತಾವಿತಥಶ್ರುತಿಸ್ಮøತಿಗೀತ ಪ್ರೀತ ರತಿಪತಿಪಿತನೆ1

ಸೋಮಕುಲಾಬ್ಧಿ ರಾಕಾಸೋಮಕಾಶ ದೇವಸಾಮಜಪಕ್ಷ ಸುರಸ್ತೋಮ ಪೋಷಕಕಾಮಿತಾರ್ಥಪ್ರದಾತ ಸ್ವಾಮಿತೀರ್ಥಧಾಮತ್ರಿಧಾಮ ಸುಮನಸಾಮೋದಪ್ರೇಮಧಿ ಶ್ರೀಮತ್ನಾಮ ನಿಸ್ಸೀಮ 2

ಹನುಮನಿಮೇಷ ಋಷಿಗಾನಪ್ರಿಯ ದೇವಸನಕಸನಂದನ ಸನಾತನಧ್ಯೇಯಮಣಿಮಯಕನಕಭೂಷಣಾಂಕ ಭೂಮುನಿಜನ ಧ್ಯಾನ ಲೀನ ಅಣುರೇಣು ಪೂರ್ಣಪ್ರಸನ್ನವೆಂಕಟನಗಪಾ ಪುನಃಪುನಾನುದಿನ 3
*******