Showing posts with label ಮೈಹೋಳು ನೀ ಬಂದು ಮೈ ಮರಿಯ mahipati. Show all posts
Showing posts with label ಮೈಹೋಳು ನೀ ಬಂದು ಮೈ ಮರಿಯ mahipati. Show all posts

Thursday, 12 December 2019

ಮೈಹೋಳು ನೀ ಬಂದು ಮೈ ಮರಿಯ ankita mahipati

ಭೈರವಿ ರಾಗ ತ್ರಿತಾಳ

ಮೈಹೋಳು ನೀ ಬಂದು ಮೈ ಮರಿಯಬ್ಯಾಡವೋ
ಮಹಿಮಾನಂದನಂಘ್ರಿಯ ಬಿಡಬ್ಯಾಡವೋ ||ಧ್ರುವ||

ಮಾಯಾಮೋಹದೊಳು ಸಿಲ್ಕಿ ದೇಹ ಭ್ರಮೆಯಗೊಂಡು
ಕಾಯಸೌಖ್ಯಕೆ ಬಾಯಿದೆರಿಯಬ್ಯಾಡವೋ ||೧||

ಹೊನ್ನು ಹೆಣ್ಣು ಮಣ್ಣಿಗಾಗಿ ಬಣ್ಣ ಬಣ್ಣ ಪರಿಯಲಿನ್ನು
ಕಣ್ಣುಗೆಟ್ಟು ಕುರುದನಂತೆ ದಣಿಯಬ್ಯಾಡವೋ ||೨||

ನಾನು ನೀನು ಎಂಬ ಭಾವ ಮಹಿಪತಿಗಳೆದು
ಭಾನುಕೋಟಿ ತೇಜನಂಘ್ರಿ ಬೆರೆದು ಮನಕೂಡವೊ ||೩||
***

ಮೈಹೋಳು ನೀ ಬಂದು ಮೈಯ ಮರಿಯ ಬ್ಯಾಡವೋ ಮಹಿಮಾನಂದನಂಘ್ರಿಯ ಬಿಡಬ್ಯಾಡವೋ ಪ  


ಮಾಯಾ ಮೋಹದೊಳು ಸಿಲ್ಕಿ ದೇಹ್ಯ ಭ್ರಮೆಯಗೊಂಡು ಕಾಯ ಸೌಖ್ಯಕೆ ಬಾಯಿದೆರಿಯಬ್ಯಾಡವೋ 1 

ಹೊನ್ನು ಹೆಣ್ಣು ಮಣ್ಣಿಗಾಗಿ ಬಣ್ಣ ಪರಿಯಲಿನ್ನು ಕಣ್ಣು ಗೆಟ್ಟು ಕರುಡನಂತೆ ದಣಿಯಬ್ಯಾಡವೋ 2 

ನಾನು ನೀನು ಎಂಬ ಭಾವ ಮಹಿಪತಿಗಳೆದು ಭಾನುಕೋಟಿತೇಜನಂಘ್ರಿ ಬೆರೆದು ಮನಕೂಡವೂ 3

****