Showing posts with label ಬೇಡುವೆ ನಿನ್ನನು ಜೋಡಿಸಿ ಕರಗಳ govinda. Show all posts
Showing posts with label ಬೇಡುವೆ ನಿನ್ನನು ಜೋಡಿಸಿ ಕರಗಳ govinda. Show all posts

Thursday, 14 November 2019

ಬೇಡುವೆ ನಿನ್ನನು ಜೋಡಿಸಿ ಕರಗಳ ankita govinda

by ಗೋವಿಂದದಾಸ
ಬೇಡುವೆ ನಿನ್ನನು ಜೋಡಿಸಿ ಕರಗಳ |ಕೂಡಲೆ ವರಗಳ | ನೀಡುವದೀಶನೆ ಪ

ನಂದನ ಕಂದ ಮುಕುಂದ ಮುರಾರೆ |ಸುಂದರ ಶುಭಕರ | ಮಂದರೋದ್ಧಾರ 1

ಶಂಕರ ಹಿತನೇ ಪಂಕಜನಾಭನೇ |ವೆಂಕಟರಮಣನೆ | ಶಂಖಚಕ್ರಧರನೇ 2

ಸುರನರಕಿನ್ನರ| ತುಂಬುರ ನಾರದರ್ |ಪರಿಪರಿಯಲಿ ನಿನ್ನ | ಸ್ಮರಿಸುತಲಿಹರೂ 3

ಅಸುರರ ಬಾಧೆಯೊಳ್ | ಸುರರೆಲ್ಲ ಭಜಿಸಲು |ಕುಶಲದಿ ಭಕ್ತರ|ಪೊರೆದೆ | ಗೋವಿಂದನೇ 4
********