Showing posts with label ಸಂಕರ್ಷಣ ಜಯಾತನಯಗೆ ಮಂಗಳ jagannatha vittala. Show all posts
Showing posts with label ಸಂಕರ್ಷಣ ಜಯಾತನಯಗೆ ಮಂಗಳ jagannatha vittala. Show all posts

Saturday, 14 December 2019

ಸಂಕರ್ಷಣ ಜಯಾತನಯಗೆ ಮಂಗಳ ankita jagannatha vittala

ಜಗನ್ನಾಥದಾಸರು
ಸಂಕರ್ಷಣ ಜಯಾತನಯಗೆ ಮಂಗಳ
ಕಂತು ಭವನ ಪದವಿಯೋಗ್ಯಗೆ
ಶಂಕ ಇಲ್ಲದ ಜೀವರಾಶಿಗಳೊಳಗಚ್ಯು
ತಾ ಕಸ್ಥನೆನಿಸಿದ ಪವಮಾನಗೆ 1

ವಾನರ ವೇಷನಾ ತೋರ್ದಗೆ ಮಂಗಳ
ಭಾನುತನಯನ ಕಾಯ್ದ್ದಗೆ ಮಂಗಳ
ಜಾನಕಿಗುಂಗುರವಿತ್ತಗೆ ಮಂಗಳ
ದಾನವತತಿ ಪುರವ ದಹಿಸಿದವಗೆ ಮಂಗಳ 2

ಅತಿ ಬಲವಂತರೆಂದೆನಿಸಿದ ದೈತ್ಯ ಸಂ
ತತಿಗಳನೆಲ್ಲವ ಸವರಿದವಗೆ ಮಂಗಳ
ಪ್ರೋತನದೊಳಗೆ ಪ್ರತಿಕೂಲ ಸುಯೋಧನನ
ಮೃತಿಗೆ ಕಾರಣನಾದ ಮರುದಂಶಗೆ 3

ಏಳೇಳು ಲೋಕದ ಗುರುವರನೆನಿಸಿ ಮೂ
ರೇಳು ಕುಭಾಷ್ಯವ ಮುರಿದವಗೆ ಮಂಗಳ
ಏಳುಕೋಟ ಲೋಕದೊಳಗಿಟ್ಟು ದೈತ್ಯರ
ಪಳದಂತೆ ಮಾಡಿದ ಯತಿರಾಯಗೆ 4

ಮೂರು ರೂಪಗಳಿಂದ ಮುಕ್ತಿ ಪ್ರದಾಯಕ
ನಾರಾಧಿಸಿದ ಅನಿಮಿಷ ಪೂಜ್ಯಗೆ ಮಂಗಳ
ಶ್ರೀ ರಮಾರಮಣ ಜಗನ್ನಾಥ ವಿಠಲನ
ಕಾರುಣ್ಯ ಪಾತ್ರ ಸಮೀರಣಗೆ ಮಂಗಳ 5
********