Showing posts with label ಇಕೋ ಈತ ವೆಂಕಟೇಶನೊ ಭವದ ಸಿಕ್ಕು vijaya vittala IKO EETA VENKATESHANO BHAVADA SIKKU. Show all posts
Showing posts with label ಇಕೋ ಈತ ವೆಂಕಟೇಶನೊ ಭವದ ಸಿಕ್ಕು vijaya vittala IKO EETA VENKATESHANO BHAVADA SIKKU. Show all posts

Sunday, 31 October 2021

ಇಕೋ ಈತ ವೆಂಕಟೇಶನೊ ಭವದ ಸಿಕ್ಕು ankita vijaya vittala IKO EETA VENKATESHANO BHAVADA SIKKU



ವಿಜಯದಾಸ
ಇಕೋ ಈತ ವೆಂಕಟೇಶನೊ | ಭವದ |
ಸಿಕ್ಕು ಬಿಡಿಸಿ ನೆನದವರಿಗೆ ಸಿಕ್ಕಿ ಮನದಿಂದಗಲದಿಪ್ಪಾ ಪ

ಕರುಣ ಅರುಣ ಕಿರಣ ಪೋಲುವ |
ಚರಣ ಧರಣಿ ತರುಣಿ ಸ್ಮರಿಸಿ |
ಕರುಣಗಡಲಾ |
ಧರಣಿಯಿಂದ ಉದ್ಧರಣೆ ಮಾಡಿದೆ ಪರಣನೀತ 1

ಮಂಡಿಯ ಮಂಡನ |
ಕುಂಡಲ ಕಾಂತಿ |
ಗಂಡ ಸ್ಥಳದಲಿ ಮಿರುಗೆ ತುಲಸಿ |
ಕೌಸ್ತುಭ ಕಾಲ | ಪೆಂಡೆಯಿಟ್ಟು ನಂದನೀತ 2

ವಾಹನ ಆ ಖಂಡಲ ಇಕ್ಷುಕೋ |
ಪರಮೇಷ್ಠಿ |
ತೊಂಡರ ನಲಿದು ಕೊಂಡಾಡೆ ಚಂದಿರ ಮಂಡಲದೊಳು ಉ|
ದ್ದಂಡನಾಗಿಯಿಪ್ಪಾ | ಪುಂಡ ದೈವನೀತ 3

ಪಂಜಿನಸಾಲು ಪರಂಜಳಿ ವಾದ್ಯ ವಿ |
ರಂಜಿಸಲು ಜ್ಞಾನ |
ಪುಂಜ ನಾರದ ಜಯ ಜಯ ಪೇಳಲು |
ನಿರಂಜನ ಭಂಜನ ಈಶಾ 4

ಕರದ ಜನಕೆ ಸುರಧೇನು ಇದು |
ನಿರುತದಲ್ಲಿ ಪೊರೆವ ಭಕ್ತರ |
ಕರಿಯ ಕಾಯ್ದ ವಿಜಯವಿಠ್ಠಲ |
ಪರಮ ಪುರುಷ ತಿರುಮಲನೀತ 5
*******