ರಾಗ - ಮುಖಾರಿ : ತಾಳ - ಅಟ್ಟತಾಳ
ಪತಿಯೆ ಪರದೇವತೆ l ಎನುತೆ ಎಂದೂ ಸತಿಯರಿಗೆ ಬಂಧೂ ll ಪ ll
ಪತಿಯ ಬಳಿಯಲ್ಲಿ ಸಕಲ ತೀರ್ಥಗಳುನ್ಟು
ಪತಿಯ ಬಳಿಯಲ್ಲಿ ಸಕಲ ಕ್ಷೇತ್ರಗಳು l
ಮಿತಿಯಿಲ್ಲದಾನಂದತತಿ ಇರುವುದು ಇಲ್ಲಿ l
ಗತಿಕೊಡುವ ದೈವದ ಬೇರೆ ಚಿಂತಿಪುದೇಕೆ ll 1 ll
ಪತಿಯ ಸೇವೆಯೆ ಸಕಲ ವ್ರತಂಗಳು
ಪತಿಯ ಭಜಿಸುವುದೆ ಸಕಲ ಯಜ್ಞಗಳು l
ಪತಿಯ ಹೃದಯದಲ್ಲಿ ರತಿಪತಿ ಪಿತನೆಂದು
ಮತಿಯಿಂದ ಭಜಿಸಲು ಗತಿಕೊಡುವನು ದೇವ ll 2 ll
ಪತಿಯ ನಿಂದಿಸುವಳು ಪಾತಕಿಯಾಗುವಳು
ಪತಿಯ ವಚನಗಳಿಗೆ ಬದಲು ಪೇಳುವಳಾ l
ಗತಿಯ ತಪ್ಪಿಸುವನು ಪುರಂದರವಿಟ್ಠಲನು
ಮತಿಯುಳ್ಳವರು ಇದನರಿತು ನಡೆಯಬೇಕು ll 3 ll
***
ಪುರಾಣೇತಿಹಾಸಗಳಲ್ಲಿ ಪತಿವ್ರತಾ ಸ್ತ್ರೀಯರ ಅನೇಕ ನಿದರ್ಶನಗಳನ್ನು ಕಾಣಬಹುದು. ಎಲ್ಲರೂ ಪತ್ಯಂತರ್ಗತ ಭಗವಂತನನ್ನು ಪೂಜಿಸಿ ಅರ್ಚಿಸಿ, ಉದ್ಧಾರರಾದದ್ದನ್ನು ಚಿತ್ರಿಸಲಾಗಿದೆ. ಈ ಅನುಸಂಧಾನ ಬಹು ಮುಖ್ಯವಾದದ್ದಾಗಿ ಭಾವಿಸಬೇಕು. 'ಪತಿರೇವ ಗತಿಸ್ತ್ರೀಣಾಂ.....' ಎಂದ ಮಾತು ಸತ್ಯವಾದದ್ದು. ಶ್ರೀ ಜಗನ್ನಾಥದಾಸರ 17 ನುಡಿಗಳ 'ಸಾರಿದ ಡಂಗುರಯಮನು' ಎಂಬ ಕೃತಿಯಲ್ಲಿ -
*ಹೊತ್ತಾರೆ ಎದ್ದು ಪತಿಗೆ ಎರಗದವಳ l
ಕಳುವೀಲಿ ಕಾಂತನ ಧನವನೊಂಚಿಸುವಳ l
ಗಂಡ ನಿರ್ಧನಿಕನೆಂದಪಮಾನ ಮಾಳ್ಪಳ l
ಪತಿಗೆ ಬೇಕಾದವರೊಳು ಮತ್ಸರಿಸೋಳ l
ಹೀಗೆ ಅನೇಕ ರೀತಿಯಲ್ಲಿ ಹೇಳಿ ಇಂತಹ 'ಪಾಪಿನಾರೇರನೆಳೆತಂದು ನರಕದೊಳಿಡಿರೆಂದು' 'ಸಾರಿದ ಡಂಗುರ ಯಮನು'
ರಂಗಣನು ನೋಡುವುದೇ ಕಂಗಳಿಗೆ ಭೂಷಣ l - ಶ್ರೀ ಶ್ರೀ
ಹರಿದಾಸ ಹೃದಯ ಗ್ರಂಥದಿಂದ
ದಿನಕ್ಕೊಂದು ಹರಿದಾಸರ ಸವಿನುಡಿ
***