Tuesday, 13 April 2021

ಪತಿಯೆ ಪರದೇವತೆ ಎನುತೆ ಎಂದೂ ಸತಿಯರಿಗೆ ಬಂಧೂ purandara vittala

 ರಾಗ - ಮುಖಾರಿ : ತಾಳ - ಅಟ್ಟತಾಳ


ಪತಿಯೆ ಪರದೇವತೆ l  ಎನುತೆ ಎಂದೂ ಸತಿಯರಿಗೆ ಬಂಧೂ ll ಪ ll


ಪತಿಯ ಬಳಿಯಲ್ಲಿ ಸಕಲ ತೀರ್ಥಗಳುನ್ಟು 

ಪತಿಯ ಬಳಿಯಲ್ಲಿ ಸಕಲ ಕ್ಷೇತ್ರಗಳು l

ಮಿತಿಯಿಲ್ಲದಾನಂದತತಿ ಇರುವುದು ಇಲ್ಲಿ l

ಗತಿಕೊಡುವ ದೈವದ ಬೇರೆ ಚಿಂತಿಪುದೇಕೆ ll 1 ll


ಪತಿಯ ಸೇವೆಯೆ ಸಕಲ ವ್ರತಂಗಳು 

ಪತಿಯ ಭಜಿಸುವುದೆ ಸಕಲ ಯಜ್ಞಗಳು l

ಪತಿಯ ಹೃದಯದಲ್ಲಿ ರತಿಪತಿ ಪಿತನೆಂದು

ಮತಿಯಿಂದ ಭಜಿಸಲು ಗತಿಕೊಡುವನು ದೇವ ll 2 ll


ಪತಿಯ ನಿಂದಿಸುವಳು ಪಾತಕಿಯಾಗುವಳು 

ಪತಿಯ ವಚನಗಳಿಗೆ ಬದಲು ಪೇಳುವಳಾ l

ಗತಿಯ ತಪ್ಪಿಸುವನು ಪುರಂದರವಿಟ್ಠಲನು

ಮತಿಯುಳ್ಳವರು ಇದನರಿತು ನಡೆಯಬೇಕು ll 3 ll

***


ಪುರಾಣೇತಿಹಾಸಗಳಲ್ಲಿ ಪತಿವ್ರತಾ ಸ್ತ್ರೀಯರ ಅನೇಕ ನಿದರ್ಶನಗಳನ್ನು ಕಾಣಬಹುದು.  ಎಲ್ಲರೂ ಪತ್ಯಂತರ್ಗತ ಭಗವಂತನನ್ನು ಪೂಜಿಸಿ ಅರ್ಚಿಸಿ, ಉದ್ಧಾರರಾದದ್ದನ್ನು ಚಿತ್ರಿಸಲಾಗಿದೆ.  ಈ ಅನುಸಂಧಾನ ಬಹು ಮುಖ್ಯವಾದದ್ದಾಗಿ ಭಾವಿಸಬೇಕು.  'ಪತಿರೇವ ಗತಿಸ್ತ್ರೀಣಾಂ.....' ಎಂದ ಮಾತು ಸತ್ಯವಾದದ್ದು.  ಶ್ರೀ ಜಗನ್ನಾಥದಾಸರ 17 ನುಡಿಗಳ 'ಸಾರಿದ ಡಂಗುರಯಮನು' ಎಂಬ ಕೃತಿಯಲ್ಲಿ -


*ಹೊತ್ತಾರೆ ಎದ್ದು ಪತಿಗೆ ಎರಗದವಳ l

ಕಳುವೀಲಿ ಕಾಂತನ ಧನವನೊಂಚಿಸುವಳ l

ಗಂಡ ನಿರ್ಧನಿಕನೆಂದಪಮಾನ ಮಾಳ್ಪಳ l

ಪತಿಗೆ ಬೇಕಾದವರೊಳು ಮತ್ಸರಿಸೋಳ l

ಹೀಗೆ ಅನೇಕ ರೀತಿಯಲ್ಲಿ ಹೇಳಿ ಇಂತಹ 'ಪಾಪಿನಾರೇರನೆಳೆತಂದು ನರಕದೊಳಿಡಿರೆಂದು' 'ಸಾರಿದ ಡಂಗುರ ಯಮನು'

ರಂಗಣನು ನೋಡುವುದೇ ಕಂಗಳಿಗೆ ಭೂಷಣ l - ಶ್ರೀ ಶ್ರೀ

ಹರಿದಾಸ ಹೃದಯ ಗ್ರಂಥದಿಂದ

ದಿನಕ್ಕೊಂದು ಹರಿದಾಸರ ಸವಿನುಡಿ

***

No comments:

Post a Comment