Showing posts with label ಪಾಹಿ ಮೋಹನ ವಿಠಲ ಪರಮಕರುಣಾಜಲಧಿ vijaya vittala. Show all posts
Showing posts with label ಪಾಹಿ ಮೋಹನ ವಿಠಲ ಪರಮಕರುಣಾಜಲಧಿ vijaya vittala. Show all posts

Wednesday, 16 October 2019

ಪಾಹಿ ಮೋಹನ ವಿಠಲ ಪರಮಕರುಣಾಜಲಧಿ ankita vijaya vittala

ವಿಜಯದಾಸ
ಪಾಹಿ ಮೋಹನ ವಿಠಲ ಪರಮಕರುಣಾಜಲಧಿ
ಮಹದಾದಿ ದೇವ ವಂದ್ಯ |
ಮೋಹಪಾಶವ ಬಿಡಿಸಿ ನಂಬಿದವನಿಗೆ ಒಲಿದು
ರಹಸ್ಯಮತಿ ಕೊಡುವುದು ಸ್ವಾಮಿ ಪ

ನೀನಿತ್ತ ಮಾತುಗಳು ಪೊಳ್ಳಾಗಬಲ್ಲವೆ
ಅನಂತ ಜನುಮವಾಗೆ
ಆನೊಬ್ಬನೆನ್ನದಿರು ಕೀರ್ತಿಸುವ ನರನೆಂದು
e್ಞÁನಿಗಳಿಗರಿವಾಗಿದೆ
ಏನಯ್ಯ ನಿನ್ನಂಘ್ರಿ ಭಜಿಸದಲೆ ಇರುತಿಪ್ಪ
ಮಾನವನ ಕ್ಲೇಶಕೆಣಿಯೆ
ಆನಂದ ನಂದನನೆ ತೃಣವ ಪಿಡಿದು ರುತುನ
ವನು ಮಾಡಿ ತೋರುವ ಸ್ವಾಮಿ 1

ನಿನ್ನಧೀನ ಕರ್ಮಸ್ವಭಾವ ಮೊದಲಾಗಿ
ಅನ್ಯಥಾ ಯಲ್ಲಿ ಕಾಣೆ
ಮನ್ನಿಪುದು ಮುದದಿಂದ ಮುಂದನೆನ್ನದೆ ಎನ್ನ
ಬಿನ್ನಪವ ಬರಿದೆನಿಸದೆ
ಅನ್ಯನಿವನಲ್ಲವೊ ಎನ್ನನ್ನೆ ಪೊಂದಿದ
ನಿನ್ನ ದಾಸನ ದಾಸನು
ಉನ್ನಂತ ಗುಣವಿತ್ತು ಉರುಕಾಲ ಒಲಿದು ಪ್ರ
ಸನ್ನನಾಗೋ ಪಾವನ್ನರನ್ನ 2

ನರರಿಗೆ ಸಾಧನ ಸತ್ಕೀರ್ತನೆ ಎಂದು
ಪರಮೇಷ್ಠಿ ಒರೆದನಿದಕೊ
ಪರಿಪರಿ ಬಗೆಯಿಂದ ಕರ್ಮಗಳ ಮಾಡಿದರೆ
ದುರಿತ ಬೆಮ್ಮೊಗವಾಗವು
ಪಿರಿದಾಗಿ ಬೇಡಿದೆನೊ ವಿಜಯವಿಠ್ಠಲ ನಿನ್ನ
ಶರಣರೊಳಗಿಟ್ಟು ಕಾಪಾಡು
ಸ್ಥಿರವಾಗಿ ಅಂಕಿತವ ಪ್ರೇರಿಸಿ ಕೊಡಿಸಿದ್ದು ಧರೆಯೊಳಗೆ
ಪರಿಪೂರ್ಣವಾಗಿ ಇರಲಿ ಸ್ವಾಮಿ3
******

ಶ್ರೀ ವಿಜಯರಾಯರು 
" ಅಂಕಿತ ಪದ " 
ರಾಗ : ಕಲ್ಯಾಣಿ ತಾಳ : ಝಂಪೆ 

ಪಾಹಿ ಮೋಹನ ವಿಠಲ -
ಪರಮ ಕರುಣಾ ಜಲನಿಧೆ ।
ಮಹದಾದಿ ದೇವ ವಂದ್ಯ ।
ಮೋಹ ಪಾಶವ ಬಿಡಿಸಿ -
ನಂಬಿದವಗೆ ವೊಲಿದು ।
ರಹಸ್ಯ ಮತಿ ಕೊಡುವುದು -
ಸ್ವಾಮಿ ।। ಪಲ್ಲವಿ ।। 

ನೀನಿತ್ತ ಮಾತುಗಳು -
ಪೊಳ್ಳಗ ಬಲ್ಲವೇ ।
ಅನಂತ ಜನಮದಾಗೆ ।
ಆನೊಬ್ಬ ನೆನ್ನದಿರು । -
ಕೀರ್ತಿಸು ।
ವ ನರನೆಂದು ಜ್ಞಾನಿ-
ಗಳಿರುದಾಗಿದೆ ।।
ಏನಯ್ಯಾ ನಿನ್ನಂಘ್ರಿ -
ಭಜಿಸದಿಪ್ಪ ।
ಮಾನವನ ಕ್ಲೇಶಕೆಣಿಯೆ ।
ಆನಂದ ನಂದನೆ -
ತೃಣವ ಪಿಡಿದು । ರ ।
ತುನವನು ಮಾಡಿ ತೋರುವ -
ಸ್ವಾಮಿ ।। ಚರಣ ।। 

ನಿನ್ನಧೀನ ಕರ್ಮ -
ಸ್ವಭಾವ ಮೊದಲಾಗಿ ।
ಅನ್ಯಥಾ ಎಲ್ಲಿ ಕಾಣೆ ।
ಮನ್ನಿಪುದು ಮುದದಿಂದ -
ಮೋದದಲ್ಲಿ ।
ಎನ್ನ ಬಿನ್ನಪವನು -
ಬಿರಿದೆನಿಸಿದೆ ।।
ಅನ್ಯರಿದರೊಳಗಿಲ್ಲ -
ಯೆನ್ನ ಪೊಂದಿದವನು ।
ನಿನ್ನ ದಾಸರ -
ದಾಸರು ಉನ್ನತ ।
ಗುಣವಿತ್ತು ಉರು-
ಕಾಲ ವೊಲಿದು ।
ಪ್ರಸನ್ನನಾಗೋಪಾವನ್ನಾ -
ರನ್ನಾ ।। ಚರಣ ।। 

ನರರಿಗೆ ಸಾಧನಾ -
ಸತ್ಕೀರ್ತನೆಯೆಂದು ।
ಪರಮೇಷ್ಠಿ ಒಲಿಪನಾಹಕೊ ।
ಪರಿ ಪರಿಯಿಂದ -
ಕರ್ಮಗಳ ಮಾಡಿದರೆ ।
ದುರಿತ ಬೆಮ್ಮೊಗವಾಗವು ।।
ಪಿರವಾಗಿ ಬೇಡಿದೆನೋ -
ವಿಜಯವಿಠ್ಠಲ ನಿನ್ನ ।
ಶರಣರೊಳಗಿಡು ಕಾಪಾಡು ।
ಸ್ಥಿರವಾಗಿ ಅಂಕಿತವ -
ಪ್ರೇರಿಸಿ ಕೊಡಿಸಿದ್ದು ।
ಧರೆಯೊಳಗೆ ಪರಿಪೂರ್ಣ-
ವಾಗಿ ಇರಲಿ ಸ್ವಾಮಿ ।। ಚರಣ ।। 
*****