Showing posts with label ಸಾಧನದ ಚಿಂತೆ ಏನಗ್ಯಾಕೋ ದೇವ jayesha vittala SAADHANADA CHINTE ENAGYAKO DEVA. Show all posts
Showing posts with label ಸಾಧನದ ಚಿಂತೆ ಏನಗ್ಯಾಕೋ ದೇವ jayesha vittala SAADHANADA CHINTE ENAGYAKO DEVA. Show all posts

Friday, 5 March 2021

ಸಾಧನದ ಚಿಂತೆ ಏನಗ್ಯಾಕೋ ದೇವ ankita jayesha vittala SAADHANADA CHINTE ENAGYAKO DEVA









ಸಾಧನದ ಚಿಂತೆ ಎನಗ್ಯಾಕೊ ದೇವ

ಮಾಧವನೆ ನಿನ್ನ ನಾಮ ಧರಿಸಿಕೊಂಡಿರುವವಗೆ ಪ


ನಿನ್ನ ಚಿತ್ತಕೆ ಬಂದ ಅನುಭವವೆ ಸಾಧನವೊ

ಅನ್ಯಥಾ ಬೇಕಿಲ್ಲ ದೋಷರಹಿತ

ಎನ್ನ ಮನ ತನು ಕರಣತ್ರಯಗಳನು ನೀ ಮಾಳ್ಪೆ

ಅನ್ಯಸಾಧನವ್ಯಾಕೊ ಪಾವನ್ನ ಸಚ್ಚರಿತ 1


ನಡೆವುದೇ ಯಾತ್ರೆಗಳು ನುಡಿವುದೇ ಸ್ತೋತ್ರಗಳು

ಬಿಡದೆ ನೋಡುವುದೆಲ್ಲ ನಿನ್ನ ಮೂರ್ತಿ

ಒಡನೆ ಕೇಳುವ ಶಬ್ದ ನಿನ್ನ ಮಂಗಳ ಕೀರ್ತಿ

ಪಡುವ ಭೋಗಗಳೆಲ್ಲ ನಿನ್ನ ಉಪಚಾರ 2

ಪಾಪ ತೊಳೆವುದಕಿನ್ನು ದುಃಖ ಪ್ರಾಯಶ್ಚಿತ್ತ

ತಾಪ ಯೋಚನೆಗಳೆಲ್ಲ ತಪಸು ವಿಭುವೆ

ಗೋಪ ಚೂಡಾರತ್ನ ಜಯೇಶವಿಠಲ

ಈ ಪಾತ್ರದೊಳಗಿದ್ದು ನೀ ಮಾಳ್ಪ ಸಾಧನವೊ 3

***




ಸಾಧನದ ಚಿಂತೆ ಏನಗ್ಯಾಕೋ ದೇವ ankita jayesha vittala

saadhanada chinte enagyako deva