Showing posts with label ಯಾಕೆ ಬೆಟ್ಟವನೇರಿ ನಿಂದೆಅವನಿ prasannavenkata. Show all posts
Showing posts with label ಯಾಕೆ ಬೆಟ್ಟವನೇರಿ ನಿಂದೆಅವನಿ prasannavenkata. Show all posts

Saturday, 16 November 2019

ಯಾಕೆ ಬೆಟ್ಟವನೇರಿ ನಿಂದೆಅವನಿ ankita prasannavenkata

by ಪ್ರಸನ್ನವೆಂಕಟದಾಸರು
ಯಾಕೆ ಬೆಟ್ಟವನೇರಿ ನಿಂದೆಅವನಿವೈಕುಂಠವೆಂದೆ ಆವಿಧಿಸ್ಮರರ ತಂದೆ ಪ.

ತಮನೆಂಬರಿಯ ತರಿದು ತರಿದು ನಿಗಮವ ತಂದುಕ್ರಮದಿ ಕಮಲೋದ್ಭವಗೆ ಕೊಡುವೆನೆಂದೇರಿದೆಯೊಕಮಲವ್ವೆ ಬರೆ ಕಂಡು ಕಲ್ಲ ಭಾರವನಿಳುಹಿಭ್ರಮಿಸಿರುವಭಾವತೋರಿದೆಯೊ ಖಳೋತ್ತಮನ ದಾಡೆಯಲರಿದು ಈ ತಾಣವೇರಿದೆಯೊ 1

ಧೀರ ಶಿಶುವಿನಹಗೆವಿದಾರಿಸುತ ದಶದಿಶದಿಸಾರಿದ ನಿಜರ ನೋಡಿ ಸಲಹಲಿಲ್ಲೇರಿದೆಯೊಮೀರಿ ಮೆರೆವನ ತಲೆಯ ಮೆಟ್ಟಿ ಪಾತಾಳಕಿಳುಹಿತೋರಿದೆಯೊ ತ್ವತ್ಪಾದದಿರವ ಧರೆಯಪಾರುವರಿಗೊಲಿದಿತ್ತ ಪರಿಯಲೇರಿದೆಯೊ 2

ಅಸುರ ನೊಯಿದರಸಿಯಳ ಅರಸ ತಂದೇರಿದೆಯೊಪಶುಗಾವಿ ಯೋಗಗಳ ಪುರವ ಪೊಗಲೇರಿದೆಯೊಹೊಸಧರ್ಮಹೊಲಬುತೋರಿದೆಯೊ ಇದರಪೆಸರರುಹಿ ಪೊರೆಯೆನ್ನ ಪ್ರಸನ್ವೆಂಕಟೇಶ 3
********