ಮಧ್ವಸಿದ್ಧಾಂತ ವೈಭವ ನೋಡಿರೈ ಸಭೆಯ
ವೈಭವ ನೋಡಿರೈ ಪ
ಗುರುವರೇಣ್ಯ ಸತ್ಯ ಪ್ರಮೋದ ತೀರ್ಥರು ಸಂಭ್ರಮದಲಿ
ಮೆರೆದು ಬರುವ ವೈಭವ ನೋಡಿರೈ 1
ಪರಮಹಂಸ ಪರಿವ್ರಾಜಕಾದಿ ಸ
ದ್ಬಿರುದುಗಳಿಂದಲಿ ಕರೆಸಿಕೊಳ್ಳುವ 2
ಅಂದಣದಲಿ ನಲುವಿಂದ ಪರಾಶರ
ಕಂದನ ನಿರಿಶ್ಯಾನಂದ ಬಡುವ 3
ಸುಂದರ ರಾಜಮಹೇಂದ್ರ ಪುರದಿ ಜನ
ಸಂದಹಿಯೋಳ್ಬುಧ ವೃಂದ ಬರುವ 4
ಮೋದತೀರ್ಥ ಸುಮತೋದಧಿ ಚಂದ್ರ ಪ್ರ
ಮೋದ ತೀರ್ಥರಿವರೆಂದು ನುಡಿವ 5
ಮೇದಿನಿ ಸುರಕೃತ ವೇದ ಘೋಷಣ ಸು-
ನಾದ ಭರಿತ ಬಹುವಾದ್ಯ ನಿನದ 6
ಹರಿದಾಸರು ಸುಸ್ವರದಿ ಪಾಡುತಲಿ
ಪರವಶದಲಿ ತನುಮರೆದು ಕುಣಿವ7
ಕಂಡೆನು ಪರಮತ ಖಂಡನದಿ ಸುಧೆಯ
ಮಂಡನೋತ್ಸವದಿ ಕಂಡುಬರುವ 8
ಚಲುವ ಗುರು ಚರಣ ಜಲಜಕೆ ನಮಿಸುತ
ಲಲನೆಯರಾರುತಿ ಬೆಳಗುತಿರುವ 9
ನೇಮದಿ ಎಡಬಲ ಭೂಮಿಸುರರು ಕೈ
ಚಾಮರ ಬೀಸುತ ಸಾಮ ಪಠಣ10
ಭಯವ ಪುಟ್ಟಿಸಿ ಹೃದಯದಿ ಮಾಯ್ಗಳ
ಜಯ ಘೋಷದಿ ನಿರ್ಭಯದಿ ಬರುವ 11
ಕಾಣೆನು ಸತ್ಯe್ಞÁನ ತೀರ್ಥರ ಸ-
ಮಾನ ಗುರುಗಳೆಂದಾನಮಿಸುವ 12
ಪಾವನತರ ಗೋದಾವರಿ ಸ್ನಾನದಿ
ಶ್ರೀವರನಂಘ್ರಿಯ ಶೇವಿಸುವರ 13
ವಿದ್ವಜ್ಜನನುತ ಮಧ್ವಮುನಿಯ ಮತ
ವೃದ್ಧಿಕಾರಿಣಿ ಪ್ರಸಿದ್ಧ ಸಭೆಯ 14
ಧರೆಯೊಳು ಸಿರಿ ಕಾರ್ಪರ ನರಸಿಂಹನೆ
ಪರನೆಂದರುಹುತ ಮೆರೆವ ಸಭೆಯ 15
****